Home Uncategorized ನಮಗೆ ರಾಮಮಂದಿರದ ಅಗತ್ಯವಿಲ್ಲ, ಏಕೆಂದರೆ ಅದು ಬದುಕು ಕಟ್ಟಿ ಕೊಡುವುದಿಲ್ಲ: ನಟ ಚೇತನ್ ಕುಮಾರ್

ನಮಗೆ ರಾಮಮಂದಿರದ ಅಗತ್ಯವಿಲ್ಲ, ಏಕೆಂದರೆ ಅದು ಬದುಕು ಕಟ್ಟಿ ಕೊಡುವುದಿಲ್ಲ: ನಟ ಚೇತನ್ ಕುಮಾರ್

12
0
bengaluru

ನಮಗೆ ರಾಮಮಂದಿರದ  ಅಗತ್ಯವಿಲ್ಲ. ದೇವಸ್ಥಾನಗಳು ನಮ್ಮ ಬದುಕನ್ನ ಕಟ್ಟಿಕೊಡುವುದಿಲ್ಲ. ಅದರ ಬದಲು ಜನರಿಗೆ ಮೂಲ ಸೌಕರ್ಯ ಒದಗಿಸಿ ಎಂದು ನಟ, ಚಿಂತಕ ಚೇತನ್  ಒತ್ತಾಯಿಸಿದ್ದಾರೆ. ರಾಮನಗರ: ನಮಗೆ ರಾಮಮಂದಿರದ  ಅಗತ್ಯವಿಲ್ಲ. ದೇವಸ್ಥಾನಗಳು ನಮ್ಮ ಬದುಕನ್ನ ಕಟ್ಟಿಕೊಡುವುದಿಲ್ಲ. ಅದರ ಬದಲು ಜನರಿಗೆ ಮೂಲ ಸೌಕರ್ಯ ಒದಗಿಸಿ ಎಂದು ನಟ, ಚಿಂತಕ ಚೇತನ್  ಒತ್ತಾಯಿಸಿದ್ದಾರೆ.

ರಾಮನಗರ   ತಾಲೂಕಿನ ಕೂನಮುದ್ದಹಳ್ಳಿಯ ದಲಿತ ಕಾಲೋನಿಯಲ್ಲಿಂದು ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ನಟ ಚೇತನ್ ನೇತೃತ್ವದಲ್ಲಿ ಪ್ರತಿಭಟನೆ  ನಡೆಸಲಾಯಿತು.

ಈ ವೇಳೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಚುನಾವಣೆಗಾಗಿ ಗಿಮಿಕ್ ಮಾಡ್ತಿದ್ದಾರೆ. ನಮಗೆ ರಾಮಮಂದಿರದ ಅವಶ್ಯಕತೆಯಿಲ್ಲ. ಇದನ್ನ ದಕ್ಷಿಣ ಅಯೋಧ್ಯೆ ಮಾಡಲು ಸರ್ಕಾರ ಕೂಡ ಅನುಮತಿ ನೀಡಬಾರದು. ಇದೆಲ್ಲವನ್ನು ಬಿಟ್ಟು ಮೊದಲು ಜನರಿಗೆ ಮೂಲ ಸೌಕರ್ಯ ಕಲ್ಪಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ರಾಜಕೀಯ ಹಿಂದುತ್ವ ಪಕ್ಷವಾದ ಬಿಜೆಪಿ, ತೆರಿಗೆದಾರರ ಹಣದಲ್ಲಿ ರಾಮನಗರದಲ್ಲಿ ರಾಮಮಂದಿರ ನಿರ್ಮಿಸಲು ಮುಂದಾಗಿದೆ. ರಾಜಕೀಯ ಹಿಂದೂ ಧರ್ಮದ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮದೇ ಆದ ರೀತಿಯಲ್ಲಿ ಯೋಜನೆಯನ್ನು ಬೆಂಬಲಿಸುತ್ತಿವೆ ಎಂದು ಆರೋಪಿಸಿದ್ದಾರೆ.

bengaluru

ಸೆಕ್ಯುಲರಿಸಂ ಅನ್ನು ಪ್ರತಿಪಾದಿಸುವ, ಸಮಾನತವಾದಿಗಳಾದ ನಾವುಗಳು ಮಂದಿರ ನಿರ್ಮಾಣವನ್ನು ಮತ್ತು ಯಾವುದೇ ಧರ್ಮವನ್ನು ಮುಂದುವರಿಸಲು ಸರ್ಕಾರಿ ಮಶಿನರಿಯನ್ನು ಬಳಸುವುದನ್ನು ವಿರೋಧಿಸಬೇಕು ಎಂದು ಕರೆ ನೀಡಿದ್ದಾರೆ.

 

bengaluru

LEAVE A REPLY

Please enter your comment!
Please enter your name here