Home Uncategorized ನಮ್ಮ ಆಡಳಿತದ ಅವಧಿಯಲ್ಲಿ ಬಿಜೆಪಿಯವರು ಕಡ್ಲೆಪುರಿ‌ ತಿಂತಿದ್ರಾ,ಯಡಿಯೂರಪ್ಪಗೆ ಅರಳು ಮರುಳು  -ಸಿದ್ದರಾಮಯ್ಯ

ನಮ್ಮ ಆಡಳಿತದ ಅವಧಿಯಲ್ಲಿ ಬಿಜೆಪಿಯವರು ಕಡ್ಲೆಪುರಿ‌ ತಿಂತಿದ್ರಾ,ಯಡಿಯೂರಪ್ಪಗೆ ಅರಳು ಮರುಳು  -ಸಿದ್ದರಾಮಯ್ಯ

9
0
bengaluru

ಬಿ.ಎಸ್.ಯಡಿಯೂರಪ್ಪಗೆ ವಯಸ್ಸಿನಿಂದ ಅರಳು ಮರುಳಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.  ಚಿತ್ರದುರ್ಗ: ಬಿ.ಎಸ್.ಯಡಿಯೂರಪ್ಪಗೆ ವಯಸ್ಸಿನಿಂದ ಅರಳು ಮರುಳಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪತ್ರ ಬರೆದಿದ್ದಾರೆ. ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ತರಾತುರಿ ಟೆಂಡರ್ ಕರೆದು ಭ್ರಷ್ಟಾಚಾರ ನಡೆದಿದೆ ಎಂದು ಪತ್ರ ಬರೆದಿದ್ದಾರೆ. ಕಾಂಗ್ರೆಸ್​​ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ತನಿಖೆ‌ ನಡೆಸಲಿ. ನಮ್ಮ ಆಡಳಿತದ ಅವಧಿಯಲ್ಲಿ ಬಿಜೆಪಿಯವರು ಕಡ್ಲೆಪುರಿ‌ ತಿಂತಿದ್ರಾ? ಸರ್ಕಾರ ಅಲ್ಪಾವಧಿಯಲ್ಲಿ ಟೆಂಡರ್​ ನೀಡುತ್ತಿರುವ ಉದ್ದೇಶ ಏನು? ಹಣ ನೀಡಿದವರಿಗೆ ಮಾತ್ರ ಬಿಲ್​ ಮಂಜೂರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ತರಾತುರಿ ಟೆಂಡರ್ ಕರೆದ ಆರೋಪ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರು ಮಾಡಿದ್ದ ಆರೋಪಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ನಾಯಕರು ಹುಚ್ಚರು, ತಲೆ ತಿರುಕರು. ತಲೆ ತಿರುಕರು ಹೀಗೆ ಮಾತಾಡೋದು. ತಲೆ ಸರಿ ಇದ್ದವರು ಯಾರೂ ಕೂಡ ಈ ರೀತಿ ಮಾತಾಡಲ್ಲ. ಅಧಿಕಾರದ ಭ್ರಮೆಯಿಂದ ನಾವು ಅಧಿಕಾರಕ್ಕೆ ಬಂದೆ ಬಿಟ್ಟಿದ್ದೇವೆಂದು ಹೀಗೆ ಹುಚ್ಚುಚ್ಚಾಗಿ ಮಾತಾಡ್ತಿದ್ದಾರೆ. ಇವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದನ್ನು ಸದನದಲ್ಲಿ ಅವರು ಮಾತಾಡಲಿ. ಅದಕ್ಕೆ ನಾವು ತಕ್ಕ ಉತ್ತರವನ್ನು ಕೊಡುತ್ತೇವೆ‌ ಎಂದು ಹೇಳಿದ್ದರು.

bengaluru

LEAVE A REPLY

Please enter your comment!
Please enter your name here