Home Uncategorized ನಮ್ಮ ಚಿಂತೆ ಬಿಡಿ, ಇನ್ನು 6 ತಿಂಗಳಲ್ಲಿ ಬಿಜೆಪಿಯಲ್ಲಿ ‌ಎಷ್ಟು ಜನ ಉಳಿದುಕೊಳ್ಳುತ್ತಾರೆ ನೋಡಿ: ಪ್ರಿಯಾಂಕ್...

ನಮ್ಮ ಚಿಂತೆ ಬಿಡಿ, ಇನ್ನು 6 ತಿಂಗಳಲ್ಲಿ ಬಿಜೆಪಿಯಲ್ಲಿ ‌ಎಷ್ಟು ಜನ ಉಳಿದುಕೊಳ್ಳುತ್ತಾರೆ ನೋಡಿ: ಪ್ರಿಯಾಂಕ್ ಖರ್ಗೆ

6
0

ಇನ್ನು ಆರು ತಿಂಗಳಲ್ಲಿ ‌ಬಿಜೆಪಿ ಉಳಿಯಲ್ಲ. ನಾನು ಇದಕ್ಕೆ ಗ್ಯಾರಂಟಿ ಕೊಡುತ್ತೇನೆ ಎಂದು‌ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಕಲಬುರಗಿ: ಇನ್ನು ಆರು ತಿಂಗಳಲ್ಲಿ ‌ಬಿಜೆಪಿ ಉಳಿಯಲ್ಲ. ನಾನು ಇದಕ್ಕೆ ಗ್ಯಾರಂಟಿ ಕೊಡುತ್ತೇನೆ ಎಂದು‌ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಆರೇಳು ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗುತ್ತದೆ ಎಂದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ

ನಮಗೂ ರಾಜಕೀಯ ‌ಮಾಡುವುದಕ್ಕೆ ಬರುತ್ತದೆ. ಅವರೊಬ್ಬರಿಗೆ ಮಾತ್ರ ಬರುತ್ತದೆಯಾ? ನಮಗೆ ಬರುವುದಿಲ್ಲವೇ? ನಾವೂ 140 ವರ್ಷಗಳಿಂದ ಪಕ್ಷವನ್ನು ಕಟ್ಟಿಕೊಂಡು ಬರುತ್ತಿದ್ದೇವೆ ಎಂದರು. ಕರ್ನಾಟಕದಲ್ಲಿ ಅವರದ್ದು (ಬಿಜೆಪಿ) ಏನೂ ನಡೆದಿಲ್ಲ. ಮುಂದೆಯೂ ನಡೆಯಲ್ಲ. ಇನ್ನು ಆರು ತಿಂಗಳಲ್ಲಿ ಎಷ್ಟು ಜನ ಉಳಿದುಕೊಳ್ಳುತ್ತಾರೆ ನೋಡಿ’ ಎಂದರು.

ಇದನ್ನೂ ಓದಿ: ಇನ್ನು ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನ: ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ

ಎಷ್ಟು ಜನ ಸಂಪರ್ಕದಲ್ಲಿ ಇದ್ದಾರೆ ಪ್ರಶ್ನೆಗೆ,  ನನಗೆ ಗೊತ್ತಿಲ್ಲ. ಬಿಜೆಪಿಯವರನ್ನು ಕೇಳಿ. ಎಷ್ಟು ಜನ ಅಸಮಾಧಾನ ಇದ್ದಾರೆ ಎಂಬುದನ್ನು ಅವರನ್ನು ಕೇಳಿ ಎಂದು ಸಚಿವರು ಹೇಳಿದರು.  ನೀವು ನಮ್ಮ ಸರ್ಕಾರದ ಚಿಂತೆ ಬಿಡಿ, ಚಾಲೆಂಜ್ ಮಾಡ್ತೀನಿ ಇನ್ನಾರು ತಿಂಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಇರಲ್ಲ ಎಂದಿದ್ದಾರೆ. ಇನ್ನಾರು ತಿಂಗಳಲ್ಲಿ ಬಿಜೆಪಿಯಲ್ಲಿ ಎಷ್ಟು ಜನ ಉಳಿಯುತ್ತಾರೆ ನೋಡಿ ಎಂದರು.

LEAVE A REPLY

Please enter your comment!
Please enter your name here