Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನವೆಂಬರ್‌ 17ರಿಂದ ಪದವಿ, ಎಂಜನೀಯರಿಂಗ್‌, ಡಿಪ್ಲೊಮೋ ಕಾಲೇಜುಗಳ ಆರಂಭ
  • ಕರ್ನಾಟಕ
  • ಶಿಕ್ಷಣ

ನವೆಂಬರ್‌ 17ರಿಂದ ಪದವಿ, ಎಂಜನೀಯರಿಂಗ್‌, ಡಿಪ್ಲೊಮೋ ಕಾಲೇಜುಗಳ ಆರಂಭ

The Bengaluru Live November 9, 2020 8:00 PM 1 minute read
ಉನ್ನತ ಶಿಕ್ಷಣಕ್ಕೆ ಉತ್ತೇಜನ, ಸಂಶೋಧನೆ ಅಗ್ರಮಾನ್ಯತೆ; ರಾಷ್ಟ್ರ ನಿರ್ಮಾಣಕ್ಕೆ ಪೂರಕ ಬಜೆಟ್‌ ಎಂದ ಡಿಸಿಎಂ

ಉನ್ನತ ಶಿಕ್ಷಣಕ್ಕೆ ಉತ್ತೇಜನ, ಸಂಶೋಧನೆ ಅಗ್ರಮಾನ್ಯತೆ; ರಾಷ್ಟ್ರ ನಿರ್ಮಾಣಕ್ಕೆ ಪೂರಕ ಬಜೆಟ್‌ ಎಂದ ಡಿಸಿಎಂ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಎಸ್‌ಒಪಿ ಬಿಡುಗಡೆ ಮಾಡಿದ ಡಿಸಿಎಂ

ಬೆಂಗಳೂರು:

ಕೋವಿಡ್‌-19 ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತವಾಗಿರುವ ಪದವಿ,ಎಂಜನೀಯ ರಿಂಗ್‌ ಹಾಗೂ ಡಿಪ್ಲೊಮೋ ಕಾಲೇಜುಗಳ ತರಗತಿಗಳನ್ನು ಇದೇ ನವೆಂಬರ್‌ 17ರಿಂದ ಆರಂಭಿಸುವ ಬಗ್ಗೆ ಯುಜಿ ಸಿ ಮಾರ್ಗಸೂಚಿಯಂತೆ ಉನ್ನತ ಶಿಕ್ಷಣ ಇಲಾಖೆ ಎಸ್‌ಒಪಿ (ಪ್ರಮಾಣಿತ ಕಾರ್ಯಚರಣಾ ವಿಧಾನ)ಯನ್ನು ಬಿಡುಗಡೆ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ,ಆಫ್‌ಲೈನ್‌ ತರಗತಿಗಳ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.ಈ ಎಸ್‌ಒಪಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಸೂಚನೆಗಳಿದ್ದು,ಅವುಗಳ ಪ್ರಕಾರವೇ ತರಗತಿಗಳು ನಡೆಯುತ್ತವೆ.ಹಾಗೆಯೇ,ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೂ ನಿಗದಿತ ಸೂಚನೆಗಳಿವೆ ಎಂದು ತಿಳಿಸಿದ್ದಾರೆ.
ಸ್ನಾತಕೋತ್ತರ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ :

ಆಯ್ಕೆ 1: ಭೌತಿಕ ತರಗತಿಗಳಿಗೆ ಹಾಜರಾಗುವುದು

  • ಭೌತಿಕ ತರಗತಿಗಳನ್ನು ನವೆಂಬರ್‌ 17ರಿಂದ ಪ್ರಾರಂಭಿಸುವುದು.ಭೌತಿಕವಾಗಿ ಕಾಲೇಜಿಗೆ ಬಂದು ತರಗತಿಗಳಿಗೆ ಹಾಜರಾಗಲು ಸಿದ್ಧರಿರುವ ವಿದ್ಯಾರ್ಥಿಗಳಿಗೆ ಅವರ ಪೋಷಕರಿಂದ ನಿಗದಿತ ನಮೂನೆಯಲ್ಲಿ ಸಹಿ ಮಾಡಿದ ಒಪ್ಪಿಗೆ ಪತ್ರ ಪಡೆದು ಭೌತಿಕ ತರಗತಿಗಳನ್ನು ನಡೆಸುವುದು.
  • ಭೌತಿಕ ತರಗತಿಗಳನ್ನು ನಡೆಸುವಾಗ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಒಟ್ಟು ತರಗತಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಇಲಾಖೆಯಿಂದ ಹೊರಡಿಸಲಾಗಿರುವ ಮತ್ತು ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ದೈಹಿಕ ಅಂತರವನ್ನು ಕಾಪಾಡಿಕೊಂಡು ಸುರಕ್ಷಿತವಾಗಿ ತರಗತಿಗಳನ್ನು ನಡೆಸಲು ಅವಶ್ಯವಿರುವಂತೆ ತರಗತಿ ವೇಳಾಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ಧಪಡಿಸಿಕೊಳ್ಳುವುದು.
  • ಬೋಧನಾ, ಪ್ರಯೋಗಾಲಯ ಮತ್ತು ಪ್ರಾಜೆಕ್ಟ್ ತರಗತಿಗಳನ್ನು ಅವಶ್ಯಕವಿದ್ದಲ್ಲಿ ಪಾಳಿ ವ್ಯವಸ್ಥೆಯ (shift system) ಮೇರೆಗೆ ನಡೆಸುವುದು.

ಆಯ್ಕೆ-2: ಆನ್‌ಲೈನ್ ತರಗತಿಗಳ ಮೂಲಕ ಅಭ್ಯಾಸ ಮಾಡುವುದು:

  • ಭೌತಿಕ ತರಗತಿಗಳಿಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ತರಗತಿಗಳನ್ನು ನಡೆ ಸುವುದು.ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಬಯಸಿದ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಬಗ್ಗೆ ಇರುವ ಅನು ಮಾನ ಅಥವಾ ಸಮಸ್ಯೆಗಳನ್ನು ನಿವಾರಿಸುವ ಸಂಬಂಧ ಪ್ರತಿ ದಿನವು ಭೌತಿಕ ಸಂಪರ್ಕ ತರಗತಿಗಳನ್ನು (Contact Classes) ನಡೆಸುವುದು.
  • ಸಂಪರ್ಕ ತರಗತಿಗಳನ್ನು ನಡೆಸುವಾಗ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಒಟ್ಟು ತರಗತಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಇಲಾಖೆಯಿಂದ ಹೊರಡಿಸಲಾಗಿರುವ ಮತ್ತು ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ದೈಹಿಕ ಅಂತರವನ್ನು ಕಾಪಾಡಿಕೊಂಡು ಸುರಕ್ಷಿತವಾಗಿ ತರಗತಿಗಳನ್ನು ನಡೆಸಲು ಅವಶ್ಯಕವಿರುವಂತೆ ತರಗತಿ ವೇಳಾ ಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ದಪಡಿಸಿಕೊಳ್ಳುವು ದು.
  • ಎಲ್ಲಾ ಅಧ್ಯಾಪಕರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕುರಿತು ಮುಂದಿನ ಕನಿಷ್ಠ ಒಂದು ತಿಂ ಗಳ ಅಧ್ಯಯನ ಸಾಮಗ್ರಿಗಳನ್ನು ಪ್ರತಿ Period/ Sessionಗೆ ಸಂಬಂಧಿಸಿದಂತೆ ತಯಾರಿಸಿ ವಿದ್ಯಾರ್ಥಿಗಳಿಗೆ ಟೆಲಿಗ್ರಾಂ/ವಾಟ್ಸಾಪ್/ಇ-ಮೇಲ್ ಮೂಲಕ ಕಡ್ಡಾಯವಾಗಿ ನೀಡುವುದು.ಅಧ್ಯಯನ ಸಾಮಗ್ರಿಗಳು Video Lectu res,PowerPoint Presentations,E-Notes, E-Books,Audio Books ಮತ್ತು Practice Questions ಇತ್ಯಾದಿಗಳ ರೂಪದಲ್ಲಿ ಇರತಕ್ಕದ್ದು.ಸದರಿ ಅಧ್ಯಯನ ಸಾಮಗ್ರಿಗಳನ್ನು ಕಾಲೇಜಿನ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಅಪ್ ‌ಲೋಡ್‌ ಮಾಡತಕ್ಕದ್ದು.

ಸ್ನಾತಕೋತ್ತರ, ಅಂತಿಮ ವರ್ಷ ಹೊರತುಪಡಿಸಿ ಇತರೆ ವಿದ್ಯಾರ್ಥಿಗಳಿಗೆ:

  • ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುವುದು.ಈ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಬಗ್ಗೆ ಇರುವ ಅನುಮಾನ ಅಥವಾ ಸಮಸ್ಯೆಗಳನ್ನು ನಿವಾರಿಸುವ ಸಂಬಂಧ ಪ್ರತಿದಿನವೂ ಭೌತಿಕ ಸಂಪರ್ಕ ತರಗತಿಗಳನ್ನು (Contact Classes) ನಡೆಸುವುದು.
  • ಸಂಪರ್ಕ ತರಗತಿಗಳನ್ನು ನಡೆಸುವಾಗ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಒಟ್ಟು ತರಗತಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಇಲಾಖೆಯಿಂದ ಹೊರಡಿಸಲಾಗಿರುವ ಮತ್ತು ಪ್ರಸ್ತುತ ಮಾರ್ಗ ಸೂಚಿಗಳ ಪ್ರಕಾರ ದೈಹಿಕ ಅಂತರವನ್ನು ಕಾಪಾಡಿಕೊಂಡು ಸುರಕ್ಷಿತವಾಗಿ ತರಗತಿಗಳನ್ನು ನಡೆಸಲು ಅವಶ್ಯವಿರುವಂತೆ ತರಗತಿ ವೇಳಾಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ದಪಡಿಸಿಕೊಳ್ಳುವುದು.
  • ಎಲ್ಲಾ ಅಧ್ಯಾಪಕರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕುರಿತು ಮುಂದಿನ ಕನಿಷ್ಠ ಒಂದು ತಿಂ ಗಳ ಅಧ್ಯಯನ ಸಾಮಾಗ್ರಿಗಳನ್ನು ಪ್ರತಿ Period/ Session ಗೆ ಸಂಬಂಧಿಸಿದಂತೆ ತಯಾರಿಸಿ ವಿದ್ಯಾರ್ಥಿಗಳಿಗೆ ಟೆಲಿಗ್ರಾಂ/ ವಾಟ್ಸಾಪ್/ ಇ-ಮೇಲ್ ಮೂಲಕ ಕಡ್ಡಾಯವಾಗಿ ನೀಡುವುದು. ಅಧ್ಯಯನ ಸಾಮಗ್ರಿಗಳು Video Lectures,PowerPoint Presentations,E-Notes, E-Books,Audio Books ಮತ್ತು Practice Questions ಇತ್ಯಾದಿ ಗಳ ರೂಪದಲ್ಲಿಇರತಕ್ಕದ್ದು.ಈ ಅಧ್ಯಯನ ಸಾಮಗ್ರಿಗಳನ್ನು ಕಾಲೇಜಿನ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್‌ ಮಾಡತಕ್ಕದ್ದು.
  • ಆನ್‌ಲೈನ್/ಸಂಪರ್ಕ ತರಗತಿಗಳಿಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ಆನ್-ಕ್ಯಾಂಪಸ್ ಹಾಗೂ ಆಫ್-ಕ್ಯಾಂಪಸ್ ಹಾಸ್ಟೆಲ್‌ಗಳಲ್ಲಿ ಉಳಿದು ಕೊಳ್ಳಬಹುದು.

ಸಾಮಾನ್ಯ ಮಾರ್ಗಸೂಚಿಗಳು:

  • ಕಾಲೇಜಿನ ಸಂಪೂರ್ಣ ಕಟ್ಟಡ,ಮುಖ್ಯದ್ವಾರ,ಶೌಚಾಲಯ ಹಾಗೂ ಎಲ್ಲಾ ಕೊಠಡಿಗಳಲ್ಲಿನ ಪೀಠೋಪಕರಣ ಮತ್ತು ಪಠ್ಯಸಾಮಾಗ್ರಿಗಳನ್ನು ಸ್ಯಾನಿಟೈಸ್ ಮಾಡಿಸುವುದು.
  • ಬೋಧಕರು,ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಕಡ್ಡಾಯವಾಗಿ 3 ದಿನಗಳ ಮುಂಚೆ ಕೋವಿಡ್-19(RTP CR)‌ಪರೀಕ್ಷೆಯನ್ನು ಮಾಡಿಕೊಂಡು Test Report Negative ಇದ್ದಲ್ಲಿ ಮಾತ್ರ ವಿ‍ಶ್ವವಿದ್ಯಾಲಯ / ಕಾಲೇಜುಗಳಿಗೆ ಹಾಜರಾಗುವುದು.
  • ಎಲ್ಲಾ ಕಾಲೇಜುಗಳು ತಮ್ಮ ತಮ್ಮ ಸಮೀಪವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗೊಂದಿಗೆ Mapping ಮಾಡಿ ಕೊಳ್ಳವುದು.
  • ಪ್ರತಿ ತರಗತಿಯಿಂದ ಒಬ್ಬ ವಿದ್ಯಾರ್ಥಿಯನ್ನು ಗುರುತಿಸಿ ತನ್ನ ಸಹಪಾಠಿಗಳಲ್ಲೇನಾದರು ಕೋವಿಡ್‌ ಗೆ ಸಂಬಂ ಧಿಸಿದ ಲಕ್ಷಗಳನ್ನು ಕಂಡುಬಂದಲ್ಲಿ ಅದನ್ನು ಕೋವಿಡ್‌ ಕಾರ್ಯಪಡೆ / ಸೆಲ್‌ ಗಮನಕ್ಕೆ ತರುವಂತೆ ಸೂಚಿಸು ವುದು.
  • ಕಾಲೇಜುಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಊಟ ಮತ್ತು ಕುಡಿಯುವ ನೀರನ್ನು ಸ್ವತ: ತಂದು ಅವರೇ ಉಪಯೋಗಿಸುವುದು.

ಉಪನ್ಯಾಸಕರು ಕಡ್ಡಾಯವಾಗಿ ಮಾಸ್ಕ್‌ ಮತ್ತು Face Shield/ Visor ಅನ್ನು ಧರಿಸುವುದು.ಕಾಲೇಜುಗಳಲ್ಲಿ ಲೈಬ್ರರಿ ಮತ್ತು ಕ್ಯಾಂಟೀನ್‌ಗಳನ್ನು ತೆರೆಯುವಂತಿಲ್ಲ.ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಎನ್‌.ಸಿ .ಸಿ ಹಾಗೂ ಎನ್‌.ಎಸ್‌.ಎಸ್‌ ಚಟುವಟಿಕೆಗಳನ್ನು ಪ್ರಾರಂಭಿಸುವಂತಿಲ್ಲ. ಪ್ರವೇಶ/ ನಿರ್ಗಮನ ಕೇಂದ್ರಗಳ ಸುರಕ್ಷತಾ ಕ್ರಮಗಳು:ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನರ್ ಮತ್ತು ಸಾನಿಟೈಸರ್ಗಳ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು.

  • ಪ್ರವೇಶ/ ನಿರ್ಗಮನ ಸ್ಥಳಗಳಲ್ಲಿ ಜನಸಂದಣಿಯನ್ನು ತಪ್ಪಿಸಬೇಕು.ವಿವಿಧ ಕೋರ್ಸುಗಳಿಗೆ ಸೀಮಿತ ವಿದ್ಯಾರ್ಥಿ ಸಂಖ್ಯೆಯನ್ನು ನಿಗಧಿಗೊಳಿಸಿ, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನದ ಸಮಯಗಳನ್ನು ಅನುಸರಿಸಬೇಕು.
  • ಆವರಣದ ಒಳಗೆ ಮತ್ತು ಹೊರಗೆ ಕ್ಯೂ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ನೆಲದ ಮೇಲೆ 6 ಅಡಿಗಳ ಅಂತರವಿರುವ ನಿರ್ದಿಷ್ಟ ಗುರುತುಗಳನ್ನು ಮಾಡುವುದು ಮತ್ತು ಅದನ್ನು ಪಾಲಿಸಬೇಕು.
  • ಒಂದು ವೇಳೆ ಪ್ರವೇಶ/ ನಿರ್ಗಮನಕ್ಕೆ ಒಂದಕ್ಕಿಂತ ಹೆಚ್ಚು ಗೇಟ್ ಗಳನ್ನು ಸಂಸ್ಥೆಯು ಹೊಂದಿದ್ದಲ್ಲಿ,ಜನಸಂದ ಣಿಯನ್ನು ತಪ್ಪಿಸಲು,ಎಲ್ಲಾ ಗೇಟ್ ಗಳನ್ನು ಸಾಕಷ್ಟು ಎಚ್ಚರಿಕೆಯಿಂದ ಬಳಸಬೇಕು.ವಿದ್ಯಾರ್ಥಿಗಳ ಪ್ರವೇಶ ಮತ್ತು ನಿರ್ಗಮನದ ಮೇಲ್ವಿಚಾರಣೆಯನ್ನು ಮಾಡಬೇಕು.
  • ವಿದ್ಯಾರ್ಥಿ,ಬೋಧಕ,ಬೋಧಕೇತರ ಸಿಬ್ಬಂದಿಯ ಥರ್ಮಲ್‌ ತಪಾಸಣೆ,ಮುಖಗವಸು/ ಮಾಸ್ಕ್ ಧರಿಸುವುದು, ಕೈಗಳನ್ನು ಶುದ್ಧಿಗೊಳಿಸುವುದನ್ನು ಎಲ್ಲಾ ಪ್ರವೇಶ ಕೇಂದ್ರಗಳಲ್ಲಿ ಖಚಿತಪಡಿಸಿಕೊಳ್ಳಬೇಕು.
  • ಜ್ವರ,ಕೆಮ್ಮು,ಉಸಿರಾಟದ ತೊಂದರೆಯ ಲಕ್ಷಣಗಳನ್ನು ಹೊಂದಿರುವವರು ಶಿಕ್ಷಣ ಸಂಸ್ಥೆಯ ಆವರಣದೊಳಗೆ ಪ್ರವೇಶಿಸುವುದನ್ನು ನಿಷೇಧಿಸುವುದು.
    ತರಗತಿ ಕೊಠಡಿಗಳು ಮತ್ತು ಇತರ ಕಲಿಕಾ ತಾಣಗಳು ಹೇಗಿರಬೇಕು:
  • ಎಲ್ಲಾ ಕಲಿಕಾ ಸ್ಥಳಗಳಲ್ಲಿ ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಬೇಕು.ಆಗಾಗ್ಗೆ ಸ್ಪರ್ಶಿಸಲ್ಪಡುವ ಡೋರ್ ನಾಬ್ ಗಳು,ಎಲಿವೇಟರ್ ಬಟನ್ ಗಳು,ಹ್ಯಾಂಡ್ ರೈಲ್ ಗಳು,ಕುರ್ಚಿಗಳು,ಬೆಂಚುಗಳು,ವಾಶ್ ರೂಮ್ ಫಿಕ್ಚರ್ ಗಳು ಇತ್ಯಾದಿ,ಎಲ್ಲಾ ತರಗತಿಗಳು,ಪ್ರಯೋಗಾಲಯಗಳು,ಲಾಕರ್ ಗಳು,ಪಾರ್ಕಿಂಗ್ ಪ್ರದೇಶಗಳು ಹಾಗೂ ತರಗತಿ ಗಳಲ್ಲಿ ಸ್ವಚ್ಛಗೊಳಿಸುವಿಕೆ ಮತ್ತು ನಿಯತ ಸೋಂಕು ತಡೆಗಟ್ಟುವಿಕೆ (1% ಸೋಡಿಯಂ ಹೈಪೋಕ್ಲೋರೈಟ್ ಬಳಸಿ) ಪ್ರಕ್ರಿಯೆಯನ್ನು ತರಗತಿಗಳು ಪ್ರಾರಂಭವಾಗುವ ಮುನ್ನ ಮತ್ತು ದಿನದ ಕೊನೆಯಲ್ಲಿ ಕಡ್ಡಾಯಗೊಳಿಸ ಬೇಕು.ಬೋಧನಾ ಸಾಮಗ್ರಿಗಳು,ಕಂಪ್ಯೂಟರ್,ಲ್ಯಾಪ್ ಟಾಪ್,ಪ್ರಿಂಟರ್ ಗಳನ್ನು ನಿಯಮಿತವಾಗಿ 70% ಆಲ್ಕೋಹಾಲ್ ಸ್ವೈಪ್ ನಿಂದ ಒರೆಸಿ ಸೋಂಕು ತೆಗೆಯಬೇಕು.
  • ತರಗತಿಗಳು,ಪ್ರಯೋಗಾಲಯಗಳು,ಕಂಪ್ಯೂಟರ್ ಲ್ಯಾಬ್ ಗಳು,ಗ್ರಂಥಾಲಯಗಳು ಮತ್ತು ಅಲ್ಲಿನ ಆಸನಗಳನ್ನು ಸ್ವಚ್ಚವಾಗಿಡಬೇಕು ಹಾಗೂ ಆಸನಗಳ ನಡುವೆ ಅಂತರವನ್ನು ಗುರುತಿಸಬೇಕು.
  • ಉಗುಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದು.
  • ಆರೋಗ್ಯ ಸೇತು ಆ್ಯಪ್’ ಅನ್ನು ಮೊಬೈಲ್ ನಲ್ಲಿ ಅನುಸ್ಥಾಪನೆಗೊಳಿಸಿ ಬಳಸುವ ಕುರಿತು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸಲಹೆ ನೀಡುವುದು.
  • ಅವಶ್ಯಕತೆಗೆ ಅನುಸಾರವಾಗಿ ಜಿಲ್ಲಾ ಆರೋಗ್ಯ ಕೇಂದ್ರದ ಸಹಾಯದೊಂದಿಗೆ ವೈದ್ಯಕೀಯ ಸಮಾಲೋಚ ಕರನ್ನು ವಿದ್ಯಾರ್ಥಿಗಳು ಭೇಟಿಮಾಡಿ ತಮ್ಮ ಆತಂಕ,ಮಾನಸಿಕ ಒತ್ತಡ ಅಥವಾ ಭಯದ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸುವುದು.
  • ಸಾಮಾಜಿಕ ಅಂತರ ಕಾಪಾಡಲು ಶಿಕ್ಷಣ ಸಂಸ್ಥೆಗಳ ಆಯಕಟ್ಟಿನ ಸ್ಥಳಗಳಲ್ಲಿ ಸೂಚನಾ ಫಲಕ,ಚಿಹ್ನೆ,ಭಿತ್ತಿಪ ತ್ರಗಳನ್ನು ಪ್ರದರ್ಶಿಸಬೇಕು.ಸಂಸ್ಥೆಯ ಕೋವಿಡ್ ಕೋಶ/ ಕಾರ್ಯಪಡೆಯ ವಿವರಗಳನ್ನು ಪ್ರಚುರಗೊಳಿಸಬೇಕು (ತುರ್ತು ಸಂಖ್ಯೆ,ಸಹಾಯವಾಣಿ ಸಂಖ್ಯೆ,ಇಮೇಲ್ ಐಡಿ ಮತ್ತು ಸಂಪರ್ಕ).
    *ಶಿಕ್ಷಕರು,ಅಧಿಕಾರಿಗಳು,ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸುವುದನ್ನು ಕಡ್ಡಾಯಗೊಳಿಸುವುದು.
  • ಶಿಕ್ಷಣ ಸಂಸ್ಥೆಗಳು ಅಗತ್ಯಾನುಸಾರ ಬೋಧನಾ ಸಮಯವನ್ನು ವಿಸ್ತರಿಸಬಹುದು ಅಥವಾ ಪರಿವರ್ತಿಸುವುದು.
  • ತರಗತಿ ಕೊಠಡಿ,ಕಲಿಕಾ ತಾಣಗಳಲ್ಲಿ ಸ್ಥಳಾವಕಾಶದ ಲಭ್ಯತೆಯನ್ನು ಆಧರಿಸಿ,ತರಗತಿಗಳಿಗೆ ಹಾಜರಾಗಲು 50%ವರೆಗಿನ ವಿದ್ಯಾರ್ಥಿಗಳಿಗೆ ರೊಟೇಷನ್ ಆಧಾರದ ಮೇಲೆ ಅವಕಾಶ ನೀಡುವುದು.
  • ಸಂದರ್ಶಕರಿಗೆ ಪ್ರವೇಶ ನೀಡಬಾರದು ಅಥವಾ ಅವರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಪ್ರವೇಶಾವಕಾಶ ನೀಡಿದಲ್ಲಿ ಸಂದರ್ಶಕರ ಸಂಪೂರ್ಣ ಸಂಪರ್ಕ ವಿವರಗಳನ್ನು ಅವನು/ ಅವಳು ಭೇಟಿ ಯಾಗುವ ವ್ಯಕ್ತಿಗಳ ಹೆಸರುಗಳ ಜೊತೆಗೆ ನಿರ್ವಹಿಸತಕ್ಕದ್ದು.
  • ವಿದ್ಯಾರ್ಥಿಗೆ ಅಥವಾ ಅವರ ಮನೆಯಲ್ಲಿ ಯಾವುದೇ ವ್ಯಕ್ತಿಗೆ ಕೋವಿಡ್ ಸೊಂಕಿನ ಲಕ್ಷಣಗಳಾದ ನೆಗಡಿ, ಕೆಮ್ಮು,ಜ್ವರ,ಮೂಗು ಸೋರುವುದು ಮುಂತಾದ ಲಕ್ಷಣಗಳಿದ್ದಲ್ಲಿ ವಿದ್ಯಾರ್ಥಿಯನ್ನು ಕಾಲೇಜಿಗೆ ಕಳುಹಿಸದೆ ಹಾಗೂ ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಪಡೆಯುವ ಬಗ್ಗೆ ವಿದ್ಯಾರ್ಥಿ ಹಾಗೂ ಪೋಷಕರಿಗೆ ಅರಿವು ಮೂಡಿಸುವುದು.
  • ವಿದ್ಯಾರ್ಥಿಗಳು ಕಾಲೇಜಿನ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ಕೈಗ ಳನ್ನು ಸ್ವಚ್ಚಗೊಳಿಸಿಕೊಳ್ಳಲು ಅವಕಾಶ ಕಲ್ಪಿಸತಕ್ಕದ್ದು.ಅಗತ್ಯತೆಗೆ ಅನುಸಾರ ಥರ್ಮಲ್ ಸ್ಕ್ಯಾನರ್ ಗಳನ್ನು ಒದಗಿಸಿಕೊಳ್ಳುವುದು ಮತ್ತು ಪ್ರತಿ ದಿನ ಪ್ರತಿ ವಿದ್ಯಾರ್ಥಿಯ ದೇಹದ ಉಷ್ಣತೆಯನ್ನು ಕಡ್ಡಾಯವಾಗಿ ಪರೀಕ್ಷಿ ಸುವುದು.
  • ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶಿಸುವ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗೆ ರೋಗ ಲಕ್ಷಣಗಳು ಇದ್ದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ಕ್ರಮವಹಿಸುವುದು ಹಾಗೂ ಅವರಿಗೆ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಲು ಸೂಚಿಸುವುದು ಮತ್ತು ಮಾರ್ಗದರ್ಶನ ನೀಡುವುದು.
  • ಕಾಲೇಜಿಗೆ ಬರುವ ಪ್ರತಿ ವಿದ್ಯಾರ್ಥಿಯು ಕಡ್ಡಾಯವಾಗಿ ಮತ್ತು ಸರಿಯಾಗಿ ಮಾಸ್ಕ್ (ಮುಖ ಕವಚ) ಧರಿಸಿರುವು ದನ್ನು ಖಚಿತಪಡಿಸಿಕೊಳ್ಳುವುದು.ವಿದ್ಯಾರ್ಥಿಗಳು ಕಾಲೇಜಿನ ಆವರಣ,ತರಗತಿ ಕೊಠಡಿ,ಪ್ರಯೋಗಾಲಯ,ಗ್ರಂ ಥಾಲಯ,ಹಾಸ್ಟೆಲ್,ಉಪಹಾರ ಗೃಹ,ಕ್ರೀಡಾಂಗಣ,ಬ್ಯಾಂಕ್ ಸೇರಿದಂತೆ ಯಾವುದೇ ಸ್ಥಳ ಹಾಗೂ ಸಂದರ್ಭ ಗಳಲ್ಲಿಯೂ ಗುಂಪು ಸೇರದೆ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಸೂಚಿಸು ವುದು.
  • ವಿದ್ಯಾರ್ಥಿಗಳು / ಕಾಲೇಜು ಸಿಬ್ಬಂದಿ ಬಳಸಿದ ಮಾಸ್ಕ್ ಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಸೂಕ್ತ ಕಸದ ತೊಟ್ಟಿ / ಬುಟ್ಟಿಗಳ ವ್ಯವಸ್ಥೆ ಮಾಡುವುದು.
  • ಕಾಲೇಜಿನ ಪ್ರಾಂಶುಪಾಲರು, ಬೋಧಕರು ಮತ್ತು ಆಡಳಿತ ಸಿಬ್ಬಂದಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರ ಬೇಕು ಹಾಗೂ ಅಗಿಂದಾಗ್ಗೆ ಸಾಬೂನು/ ಸ್ಯಾನಿಟೈಸರ್ ನಿಂದ ಕೈತೊಳೆದುಕೊಳ್ಳುವುದು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.
  • ಕಾಲೇಜಿನ ಪ್ರಾಂಶುಪಾಲರು,ಬೋಧಕರು,ಆಡಳಿತ ಸಿಬ್ಬಂದಿಗಳಲ್ಲಿ ಯಾರಿಗಾದರೂ ಕೋವಿಡ್ ಸೊಂಕಿನ ಲಕ್ಷಣಗಳು ಇದ್ದಲ್ಲಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಯನ್ನು ಮಾಡಿಸುವುದು.
  • ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆರೋಗ್ಯಕರ,ಶುಚಿ ಮತ್ತು ಸ್ವಾಸ್ಯವಾದ ಆಹಾರ ಪದಾರ್ಥಗಳನ್ನು ಬಳಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸುವುದು ಹಾಗೂ ವಿದ್ಯಾರ್ಥಿಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವ್ಯಾಯಾಮ,ಯೋಗ,ಸರಳ ಪ್ರಾಣಾಯಾಮಗಳನ್ನು ಸಾಮಾಜಿಕ ಅಂತರದೊಂದಿಗೆ ಮಾಡುವಂತೆ ಪ್ರೇರೇಪಿಸುವುದು.
  • ಹೆಚ್ಚಿನ ಸಲಹೆ,ಮಾರ್ಗದರ್ಶನ ಮತ್ತು ಸಂಶಯಗಳ ನಿವಾರಣೆಗಾಗಿ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪ ರ್ಕಿಸುವುದು.ವಿದ್ಯಾರ್ಥಿಗಳ ಪೋಷಕರಿಂದ ನಿರಂತರ ಪ್ರತಿಕ್ರಿಯೆ(Continuous Feedback)ಪಡೆಯಲು ಕಾಲೇ ಜು ಹಂತದಲ್ಲಿ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುವುದು.
  • ಕಾಲೇಜು ಹಂತದಲ್ಲಿ ಕೋವಿಡ್ ಮಾರ್ಗಸೂಚಿಗಳ ಅನುಸರಣೆ ಹಾಗೂ ಕೋವಿಡ್-19ರ ಸಾಂಕ್ರಾಮಿಕ ಹಿನ್ನ ಲೆಯಲ್ಲಿ ಉದ್ಭವಿಸುವಂತಹ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಬೋಧಕವರ್ಗ ಹಾಗೂ ಬೋಧಕೇತರ ಸಿಬ್ಬಂದಿಯನ್ನೊಳಗೊಂಡ ಕೋವಿಡ್ ಕಾರ್ಯಪಡೆ(Taskforce)ಯನ್ನು ಪ್ರಾಂಶುಪಾಲರು ತಮ್ಮ ಅಧ್ಯಕ್ಷತೆ ಯಲ್ಲಿ ರಚಿಸುವುದು.
  • ವಿಶ್ವವಿದ್ಯಾಲಯ ಹಂತದಲ್ಲಿ ಕೋವಿಡ್ ಮಾರ್ಗಸೂಚಿಗಳ ಅನುಸರಣೆ ಹಾಗೂ ಕೋವಿಡ್-19ರ ಸಾಂಕ್ರಾಮಿ ಕ ಹಿನ್ನಲೆಯಲ್ಲಿ ಉದ್ಭವಿಸುವಂತಹ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಕೋವಿಡ್ ಕಾರ್ಯಪಡೆ (Task force) ಯನ್ನು ರಚಿಸಲು ಉಪಕುಲಪತಿಗಳು ಕ್ರಮಕೈಗೊಳ್ಳುವುದು.
  • ಪ್ರತಿ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಿಂದ ನಿಯತವಾಗಿ ಶೈಕ್ಷಣಿಕ ಚಟುವಟಿಕೆ ಗಳಿಗೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ದತ್ತಾಂಶಗಳನ್ನು ಪಡೆಯಲು ಕ್ರಮಕೈಗೊಳ್ಳುವುದು.ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದರ ಬಗ್ಗೆ ಸಂಬಂಧಿಸಿದ ಕಾಲೇಜು ಪ್ರಾಂಶುಪಾಲರೊoದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಗೆ ಕಾಲೇಜುಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ವಿಶ್ವವಿ ದ್ಯಾಲಯವು ನಿಗಾವಹಿಸುವುದು.
  • ಕಾಲೇಜಿನಲ್ಲಿ ಒಂದು ಪ್ರತ್ಯೇಕ ಕೊಠಡಿಯನ್ನು ಮೀಸಲಿಟ್ಟು ಅದರಲ್ಲಿ ಕೋವಿಡ್ ಪ್ರಥಮ ಚಿಕಿತ್ಸೆಗಾಗಿ ಕೋ ವಿಡ್ ಕಿಟ್‌ಗಳನ್ನು ಹಾಗೂ ಅಗತ್ಯತೆಗೆ ಅನುಸಾರವಾಗಿ ಪಲ್ಸ್-ಆಕ್ಸಿಮೀಟರ್‌ಗಳನ್ನು ಒದಗಿಸಿಕೊಳ್ಳುವುದು.
  • ಕ್ಯಾಂಪಸ್ ನಲ್ಲಿ ಸಾಕಷ್ಟು ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
  • ಮಾನಸಿಕ ಆರೋಗ್ಯ & ಯೋಗಕ್ಷೇಮಕ್ಕೆ ಶಿಕ್ಷಣ ಸಚಿವಾಲಯದ ವೆಬ್ ಸೈಟ್ ನಲ್ಲಿ ರಚಿಸಲಾಗಿರುವ “ಮನೋ ದರ್ಪಣ್” ಹೆಸರಿನ ವೆಬ್ ಪೇಜ್ ನ ಬಗ್ಗೆ ಎಲ್ಲಾ ಬೋಧಕ ಸದಸ್ಯರು,ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಅರಿವು ಮೂಡಿಸಬೇಕು.ಈ ವೆಬ್ ಪೇಜ್ ಸಲಹೆ,ಪ್ರಾಯೋಗಿಕ ಸಲಹೆಗಳು,ಭಿತ್ತಿಪತ್ರಗಳು,ವೀಡಿಯೋಗಳು, ಮನೋಸಾಮಾಜಿಕ ಬೆಂಬಲ,FAQ ಮತ್ತು ಆನ್ ಲೈನ್ ಪ್ರಶ್ನೆ ಮಾಡುವ ಅವಕಾಶಗಳನ್ನು ಒಳಗೊಂಡಿದ್ದು, ಇವುಗಳ ಸದುಪಯೋಗ ಪಡಿಸಿಕೊಳ್ಳಲು ಕ್ರಮವಹಿಸಬೇಕು.ವಿದ್ಯಾರ್ಥಿಗಳಿಗೆ ಟೆಲಿ ಕೌನ್ಸಲಿಂಗ್ ನೀಡುವ ರಾ ಷ್ಟ್ರೀಯ ಟೋಲ್ ಫ್ರೀ ಸಹಾಯವಾಣಿ (84454440632)ಅನ್ನು ಸ್ಥಾಪಿಸಲಾಗಿದ್ದು,ಅದನ್ನು ಮಾನಸಿಕ ಆರೋ ಗ್ಯದ ಸಮಸ್ಯೆಗಳನ್ನು ಪರಿಹರಿಸಲು ಬಳಸಿಕೊಳ್ಳುವುದು.
  • ಕೇಂದ್ರ ಆರೋಗ್ಯ & ಕುಟುಂಬ ಕಲ್ಯಾಣ ಸಚಿವಾಲಯ https://www.mohfw.gov.in ನವರ ಕೆಳಕಂಡ ವಿಡಿ ಯೋ ಮತ್ತು ಡಾಕ್ಯುಮೆಂಟ್ ಲಿಂಕ್ ಗಳನ್ನು ವಿಶ್ವವಿದ್ಯಾಲಯ/ಕಾಲೇಜು ವೆಬ್ ಸೈಟ್ ನಲ್ಲಿ ಪ್ರಕಟಿಸುವುದು ಮತ್ತು ಸದರಿ ಲಿಂಕ್ ಗಳನ್ನು ವಿದ್ಯಾರ್ಥಿಗಳು ಮತ್ತು ಬೋಧಕರೊಂದಿಗೆ ಇ-ಮೇಲ್,ಸಾಮಾಜಿಕ ಜಾಲತಾಣಗ ಳಾದ ಫೇಸ್ ಬುಕ್,ವಾಟ್ಸಾಪ್ ಮತ್ತು ಟ್ವಿಟರ್ ಮೂಲಕ ಹಂಚಿಕೊಳ್ಳುವುದು.
  • ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಲು ಪ್ರಾಯೋಗಿಕ ಸಲಹೆಗಳು. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ನೋಡಿ.https://www.youtube.com/watch?v=uHB3WJsLJ8s&feature=youtube

ಕೋವಿಡ್‌-19ರ ಸಮಯದಲ್ಲಿ ನಮ್ಮ ಮನಸ್ಸನ್ನು ನಿಭಾಯಿಸುವ ಬಗ್ಗೆ.ಡಾಕ್ಯೂಮೆಂಟ್‌ ನೋಡಲು ಈ ಕೆಳಗಿ ನ ಲಿಂಕ್‌ ಕ್ಲಿಕ್‌ ಮಾಡಿ. https://www.mohfw.gov.in/pdf/MindingourmindsduringCoronaeditedat.pdf

  • ಕೋವಿಡ್‌-19 ಸಮಯದಲ್ಲಿ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೇಗೆ ನಿರ್ವಹಿಸುವುದು ಎಂಬು ದರ ಕುರಿತು ವಿವಿಧ ಆರೋಗ್ಯ ತಜ್ಞರ ಅಭಿಪ್ರಾಯಗಳನ್ನು ಪಾಲಿಸುವುದು. ಅದಕ್ಕೆ ಅಗತ್ಯವಾದ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.https://www.youtube.com/watch?v=iuKhtSehp24&feature=youtube

ನಡೆವಳಿಕೆಯ ಸ್ವಾಸ್ಥ್ಯ: ಟೋಲ್ ಫ್ರೀ ಸಹಾಯವಾಣಿ – 0804611007
ವಿದ್ಯಾರ್ಥಿಗಳು,ಶಿಕ್ಷಕರು ಮತ್ತು ಸಿಬ್ಬಂದಿಗೆ ಜಾಗೃತಿ:*ಕೋವಿಡ್-19 ಸೋಂಕು ಹೇಗೆ ಹರಡುತ್ತದೆ, ಸೋಂಕಿನ ಸಾಮಾನ್ಯ ಲಕ್ಷಣಗಳು ಮತ್ತು ಅದರ ಹರಡುವಿಕೆಯನ್ನು ನಿಯಂತ್ರಿಸಲು ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು.‌

  • ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು,ಉದಾಹರಣೆಗೆ,ಕೈಗಳನ್ನು ಹೇಗೆ ತೊಳೆಯುವುದು,ಕೆಮ್ಮುವುದು ಅಥವಾ ಸೀನುವುದು ಹೇಗೆ ಹಾಗೂ ಮುಖ,ಕಣ್ಣು,ಬಾಯಿ ಮತ್ತು ಮೂಗುಗಳನ್ನು ಮುಟ್ಟುವುದನ್ನು ತಪ್ಪಿಸುವುದರ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ನಿಯಮಿತವಾಗಿ ತಿಳಿಸುವುದು.
  • ಸಾಮಾಜಿಕ ಅಂತರ,ಮುಖಕವಚ/ ಮಾಸ್ಕ್ ಧರಿಸುವುದು,ಸ್ವಚ್ಛತೆ ಇತ್ಯಾದಿಗಳ ಅಗತ್ಯವನ್ನು ಮನವರಿಕೆ ಮಾ ಡುವುದು.
  • ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವ್ಯಾಯಾಮ,ಯೋಗ, ಪ್ರಾಣಾಯಾಮ,ಧ್ಯಾನ ಮತ್ತು ಮುಂತಾದ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು.
    *ಮಾನಸಿಕ ಆರೋಗ್ಯವನ್ನು ಸುಧಾರಿಸಲು ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ಸ್ನೇಹಿತರು,ಶಿಕ್ಷಕರು ಮತ್ತು ಪೋಷಕರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಬೇಕು.ಏಕಾಗ್ರತೆ,ಸಕಾರಾತ್ಮಕ ಮನೋಭಾವ,ಉತ್ತಮ ಆಹಾರ ಸೇವನೆ,ವಿಶ್ರಾಂತಿ ಮತ್ತು ನಿದ್ರೆಗಳ ಆವಶ್ಯಕತೆಯ ಬಗ್ಗೆ ಮನವರಿಕೆ ಮಾಡಿಕೊಡುವುದು.
  • ಶುಚಿರುಚಿಯಾದ ಆಹಾರ ಮತ್ತು ತಾಜಾ ಹಣ್ಣುಗಳ ಸೇವನೆ,ಆಗಾಗ್ಗೆ ಬಿಸಿ ನೀರು ಕುಡಿಯುವುದು,ಜಂಕ್ ಫುಡ್ ಅಥವಾ ಇತರೆ ವಸ್ತುಗಳನ್ನು ತ್ಯಜಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಅರಿ ವು ಮೂಡಿಸುವುದು.
  • ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್,ಆಡಿಯೋ,ವಿಡಿಯೋ ಮತ್ತಿತರ ಮಾಧ್ಯಮ ಬಿಡಿಭಾಗಗಳನ್ನು ಶುಚಿಗೊಳಿ ಸುವಂತೆ ತಿಳಿಸುವುದು.
  • ವಿದ್ಯಾರ್ಥಿಗಳು ತಮ್ಮ ಲ್ಯಾಪ್‌ಟಾಪ್‌ಗಳು,ಆಡಿಯೋ,ವಿಡಿಯೋ ಮತ್ತು ಇತರ ಮಾಧ್ಯಮ ಪರಿಕರಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸುವಂತೆ ತಿಳಿಸುವುದು.
  • ಕೋವಿಡ್-19 ನ ಸೋಂಕು,ಪರಿಣಾಮ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಮುಕ್ತವಾಗಿ ಚರ್ಚಿಸುವುದು.ವೈರ ಸ್‌ನಿಂದ ಉಂಟಾಗುವ ಸೋಂಕಿನ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಕ್ಯಾಂಪಸ್ ನ ಸೂಕ್ತ ಸ್ಥಳಗಳಲ್ಲಿ ಪೋಸ್ಟರ್ ಮತ್ತು ಸ್ಟಿಕ್ಕರ್‌ಗಳನ್ನು ಅಂಟಿಸಬೇಕು.‌
  • ವಿಕಲಚೇತನರಿಗೆ ಸೂಕ್ತ ಮತ್ತು ಸಮಯೋಚಿತ ಸೌಲಭ್ಯಗಳನ್ನು ಒದಗಿಸಬೇಕು.ಜಾತಿ,ಮತ,ಲಿಂಗ ತಾರತಮ್ಯ ಮಾಡಬಾರದು.
  • ಪುಸ್ತಕಗಳು,ಇತರ ಕಲಿಕಾ ಸಾಮಗ್ರಿಗಳು ಮತ್ತು ತಿನ್ನಬಹುದಾದ ವಸ್ತುಗಳನ್ನು ಹಂಚಿಕೊಳ್ಳುವುದನ್ನು ನಿರು ತ್ಸಾಹಗೊಳಿಸಬೇಕು. ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ/ರಾಜ್ಯ ಸರ್ಕಾ ರದಿಂದ ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸು ವುದು.
  • ಹಾಸ್ಟೆಲ್‌ಗಳಿಗೆ ಸಂಬoಧಿಸಿದ ಆರೋಗ್ಯ ಮಾರ್ಗಸೂಚಿಗಳನ್ನು ಸಮಾಜ ಕಲ್ಯಾಣ/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹೊರಡಿಸಲಿದ್ದು ಸದರಿ ಮಾರ್ಗಸೂಚಿಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಹಾಗೂ ಇತರೆ ಎಲ್ಲಾ ಹಾಸ್ಟೆಲ್‌ಗಳಲ್ಲಿಯೂ ಕಡ್ಡಾಯವಾಗಿ ಅನುಸರಿಸುವುದು.
  • ಜಿಲ್ಲೆಯಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ಸಾಂಕ್ರಾಮಿಕ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೋವಿಡ್ ಉಸ್ತುವಾರಿ ಮತ್ತು ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಸಮಿತಿಯ ಅಧ್ಯಕ್ಷರಾಗಿದ್ದು,ಜಿಪಂ ಸಿಇಓ,ಜಿಲ್ಲಾ ವೈದ್ಯಾಧಿಕಾರಿ,ಜಿಲ್ಲಾ ಸರ್ಜ ನ್‌,ಜಿಲ್ಲಾ ಸಾರಿಗೆ ಅಧಿಕಾರಿ (ಆರ್ಟಿಓ),ಕೆಎಸ್‌ಆರ್‌ಟಿಯ ವಿಭಾಗೀಯ ನಿಯಂತ್ರಣಾಧಿಕಾರಿ,ಸಮಾಜ ಕಲ್ಯಾಣ ಇಲಾಖೆಯ ಜಿಜಿಲ್ಲಾ ಅಧಿಕಾರಿ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ,ಅಲ್ಪಸಂಖ್ಯಾ ತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ,ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರು ಸದಸ್ಯ ರಾಗಿರುತ್ತಾರೆ.

ಜಿಲ್ಲಾ ಮಟ್ಟದ ಸಮಿತಿಯ ಪಾತ್ರ ಮತ್ತು ಕರ್ತವ್ಯಗಳು:

  • ಜಿಲ್ಲೆಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಮತ್ತು ಸಾಮಾನ್ಯ ಮಾರ್ಗಸೂಚಿಗಳ ಅನುಷ್ಠಾನವನ್ನು ಪರಿವೀಕ್ಷಿಸುವುದು.
  • ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಅವಶ್ಯಕತೆಗನುಸಾರವಾಗಿ ಕೋವಿಡ್ ತಪಾಸಣೆ ನಡೆಸುವುದು
  • ವಿದ್ಯಾರ್ಥಿಗಳಿಗೆ ಸಾರಿಗೆ ಮತ್ತು ಬಸ್‌ಪಾಸ್ ವ್ಯವಸ್ಥೆ ಕಲ್ಪಿಸುವುದು. ಕಾಲೇಜುಗಳಿಗೆ ಕೋವಿಡ್ ಪ್ರಥಮ ಚಿಕಿತ್ಸೆ ಕಿಟ್‌ಗಳನ್ನು ಒದಗಿಸುವುದು.
  • ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಇತರೆ ಹಾಸ್ಟೆಲ್‌ಗಳನ್ನು ಪ್ರಾರಂಬಿಸುವುದು ಮತ್ತು ಸದರಿ ಹಾಸ್ಟೆಲ್‌ಗಳಲ್ಲಿ ಕೋವಿಡ್ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು.
  • ವಿದ್ಯಾರ್ಥಿಗಳಲ್ಲಿ ಕರೋನ ಹರಡುವಿಕೆಯನ್ನು ತಡೆಗಟ್ಟುವ ಕುರಿತಂತೆ ಜಾಗೃತಿ ಮೂಡಿಸುವುದು.

ಈ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಶಾಲಾ ಕಾಲೇಜುಗಳನ್ನು ಆರಂಭಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಮಾರ್ಗಸೂಚಿಗಳಲ್ಲಿ ತಿಳಿಸಿದೆ

About the Author

The Bengaluru Live

Administrator

Visit Website View All Posts

Post navigation

Previous: ಕರ್ತವ್ಯದಲ್ಲಿದ್ದ ಪಿಎಸ್ಐ ಮೇಲೆ ಹಲ್ಲೆ; ಆರೋಪಿ ಸೆರೆ
Next: ಭೂ ಸುಧಾರಣೆ ಕಾನೂನು (ತಿದ್ದುಪಡಿ) ಸುಗ್ರಿವಾಜ್ಞೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಅಂಗೀಕರಿಸಿದ ಹೈಕೋರ್ಟ್‌

Related Stories

ವೇದಿಕೆಯ ಎದುರು ಚಪ್ಪರದ ಕೆಳಗೆ ಕುಳಿತಿರುವ ಜನಸ್ತೋಮ
  • ಕರ್ನಾಟಕ

ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ: ಹೊಸಕೋಟೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ 499 ಅರ್ಜಿ ಸ್ವೀಕಾರ, ಸಚಿವ ಮುನಿಯಪ್ಪ

The Bengaluru Live November 15, 2026 1:54 AM
ಅಲಂಕೃತ ಚಪ್ಪರದ ಕೆಳಗೆ ಹೂಮಾಲೆ ಹಾಕಿದ ಎರಡು ಪುತ್ಥಳಿಗಳು
  • ಕರ್ನಾಟಕ
  • ರಾಜಕೀಯ

ಜಾಲಿಗೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಪುತ್ಥಳಿ ಅನಾವರಣ: 40 ವರ್ಷಗಳ ಒಳಮೀಸಲಾತಿ ಹೋರಾಟ ಅಂತ್ಯ ಎಂದ ಮುನಿಯಪ್ಪ

The Bengaluru Live November 15, 2026 1:52 AM
ಶಾಲಾ ಕಾರ್ಯಕ್ರಮದಲ್ಲಿ ಬಣ್ಣದ ಕೈಪಿಡಿಗಳನ್ನು ಹಿಡಿದ ಸಮವಸ್ತ್ರದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಕೆಲವು ಪುರುಷರು
  • ಕರ್ನಾಟಕ
  • ಶಿಕ್ಷಣ

ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ

The Bengaluru Live November 15, 2026 1:47 AM

Latest Post

ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ: ಹೊಸಕೋಟೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ 499 ಅರ್ಜಿ ಸ್ವೀಕಾರ, ಸಚಿವ ಮುನಿಯಪ್ಪ ವೇದಿಕೆಯ ಎದುರು ಚಪ್ಪರದ ಕೆಳಗೆ ಕುಳಿತಿರುವ ಜನಸ್ತೋಮ
  • ಕರ್ನಾಟಕ

ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ: ಹೊಸಕೋಟೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ 499 ಅರ್ಜಿ ಸ್ವೀಕಾರ, ಸಚಿವ ಮುನಿಯಪ್ಪ

November 15, 2026 1:54 AM
ಜಾಲಿಗೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಪುತ್ಥಳಿ ಅನಾವರಣ: 40 ವರ್ಷಗಳ ಒಳಮೀಸಲಾತಿ ಹೋರಾಟ ಅಂತ್ಯ ಎಂದ ಮುನಿಯಪ್ಪ ಅಲಂಕೃತ ಚಪ್ಪರದ ಕೆಳಗೆ ಹೂಮಾಲೆ ಹಾಕಿದ ಎರಡು ಪುತ್ಥಳಿಗಳು
  • ಕರ್ನಾಟಕ
  • ರಾಜಕೀಯ

ಜಾಲಿಗೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಪುತ್ಥಳಿ ಅನಾವರಣ: 40 ವರ್ಷಗಳ ಒಳಮೀಸಲಾತಿ ಹೋರಾಟ ಅಂತ್ಯ ಎಂದ ಮುನಿಯಪ್ಪ

November 15, 2026 1:52 AM
ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ ಶಾಲಾ ಕಾರ್ಯಕ್ರಮದಲ್ಲಿ ಬಣ್ಣದ ಕೈಪಿಡಿಗಳನ್ನು ಹಿಡಿದ ಸಮವಸ್ತ್ರದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಕೆಲವು ಪುರುಷರು
  • ಕರ್ನಾಟಕ
  • ಶಿಕ್ಷಣ

ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ

November 15, 2026 1:47 AM
ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ ಮಕ್ಕಳ ವಿಜ್ಞಾನ ಜಾತ್ರೆಯ ವೇದಿಕೆಯಲ್ಲಿ ಅಧಿಕಾರಿಗಳು ಮತ್ತು ಕೇಸರಿ ವಸ್ತ್ರದ ಸ್ವಾಮೀಜಿ ದೀಪ ಬೆಳಗುತ್ತಿರುವುದು
  • ಕರ್ನಾಟಕ
  • ಶಿಕ್ಷಣ

ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ

November 15, 2026 1:47 AM
ಕೈಗಾರಿಕೆಗಳ ಬಳಿಯೇ ಕಾರ್ಮಿಕರಿಗೆ ವಸತಿ: ಶ್ರಮಿಕ್ ನಿವಾಸ್ ನೀತಿ, ಕಂಪನಿಗೆ ₹25 ಕೋಟಿವರೆಗೆ ಸಬ್ಸಿಡಿ ನೀಲಿ ಕರ್ನಾಟಕ ಹಿನ್ನೆಲೆಯ ಮುಂದೆ ಕಟ್ಟಡದ ಚಿತ್ರವಿರುವ ಕೈಪಿಡಿಗಳನ್ನು ಹಿಡಿದ ಮೂವರು
  • ಕರ್ನಾಟಕ

ಕೈಗಾರಿಕೆಗಳ ಬಳಿಯೇ ಕಾರ್ಮಿಕರಿಗೆ ವಸತಿ: ಶ್ರಮಿಕ್ ನಿವಾಸ್ ನೀತಿ, ಕಂಪನಿಗೆ ₹25 ಕೋಟಿವರೆಗೆ ಸಬ್ಸಿಡಿ

November 15, 2026 1:42 AM
ಆಹಾರ ಭದ್ರತೆ, ನೀರಾವರಿ, ಕೈಗಾರಿಕೆಗೆ ನೆಹರು ದೂರದೃಷ್ಟಿಯೇ ಅಡಿಪಾಯ: ಕೆಪಿಸಿಸಿ ಮಕ್ಕಳ ದಿನಾಚರಣೆಯಲ್ಲಿ ಸಿದ್ದರಾಮಯ್ಯ ವೇದಿಕೆಯ ಮೇಲೆ ಹೂಮಾಲೆ ಹಾಕಿದ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಬಿಳಿ ಉಡುಪಿನ ವ್ಯಕ್ತಿ ಪುಷ್ಪ ನಮನ ಸಲ್ಲಿಸುತ್ತಿರುವುದು
  • ಬೆಂಗಳೂರು ನಗರ
  • ರಾಜಕೀಯ

ಆಹಾರ ಭದ್ರತೆ, ನೀರಾವರಿ, ಕೈಗಾರಿಕೆಗೆ ನೆಹರು ದೂರದೃಷ್ಟಿಯೇ ಅಡಿಪಾಯ: ಕೆಪಿಸಿಸಿ ಮಕ್ಕಳ ದಿನಾಚರಣೆಯಲ್ಲಿ ಸಿದ್ದರಾಮಯ್ಯ

November 15, 2026 1:37 AM

ನೀವು ತಪ್ಪಿಸಿಕೊಂಡಿರಬಹುದು

ವೇದಿಕೆಯ ಎದುರು ಚಪ್ಪರದ ಕೆಳಗೆ ಕುಳಿತಿರುವ ಜನಸ್ತೋಮ
  • ಕರ್ನಾಟಕ

ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ: ಹೊಸಕೋಟೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ 499 ಅರ್ಜಿ ಸ್ವೀಕಾರ, ಸಚಿವ ಮುನಿಯಪ್ಪ

The Bengaluru Live November 15, 2026 1:54 AM
ಅಲಂಕೃತ ಚಪ್ಪರದ ಕೆಳಗೆ ಹೂಮಾಲೆ ಹಾಕಿದ ಎರಡು ಪುತ್ಥಳಿಗಳು
  • ಕರ್ನಾಟಕ
  • ರಾಜಕೀಯ

ಜಾಲಿಗೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಪುತ್ಥಳಿ ಅನಾವರಣ: 40 ವರ್ಷಗಳ ಒಳಮೀಸಲಾತಿ ಹೋರಾಟ ಅಂತ್ಯ ಎಂದ ಮುನಿಯಪ್ಪ

The Bengaluru Live November 15, 2026 1:52 AM
ಶಾಲಾ ಕಾರ್ಯಕ್ರಮದಲ್ಲಿ ಬಣ್ಣದ ಕೈಪಿಡಿಗಳನ್ನು ಹಿಡಿದ ಸಮವಸ್ತ್ರದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಕೆಲವು ಪುರುಷರು
  • ಕರ್ನಾಟಕ
  • ಶಿಕ್ಷಣ

ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ

The Bengaluru Live November 15, 2026 1:47 AM
ಮಕ್ಕಳ ವಿಜ್ಞಾನ ಜಾತ್ರೆಯ ವೇದಿಕೆಯಲ್ಲಿ ಅಧಿಕಾರಿಗಳು ಮತ್ತು ಕೇಸರಿ ವಸ್ತ್ರದ ಸ್ವಾಮೀಜಿ ದೀಪ ಬೆಳಗುತ್ತಿರುವುದು
  • ಕರ್ನಾಟಕ
  • ಶಿಕ್ಷಣ

ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ

The Bengaluru Live November 15, 2026 1:47 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ: ಹೊಸಕೋಟೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ 499 ಅರ್ಜಿ ಸ್ವೀಕಾರ, ಸಚಿವ ಮುನಿಯಪ್ಪ
  • ಜಾಲಿಗೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಪುತ್ಥಳಿ ಅನಾವರಣ: 40 ವರ್ಷಗಳ ಒಳಮೀಸಲಾತಿ ಹೋರಾಟ ಅಂತ್ಯ ಎಂದ ಮುನಿಯಪ್ಪ
  • ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ
  • ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ
©Copyright 2025 The Bengaluru Live All rights reserved. | MoreNews by AF themes.