Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಕೈಗಾರಿಕೆಗಳ ಬಳಿಯೇ ಕಾರ್ಮಿಕರಿಗೆ ವಸತಿ: ಶ್ರಮಿಕ್ ನಿವಾಸ್ ನೀತಿ, ಕಂಪನಿಗೆ ₹25 ಕೋಟಿವರೆಗೆ ಸಬ್ಸಿಡಿ
  • ಕರ್ನಾಟಕ

ಕೈಗಾರಿಕೆಗಳ ಬಳಿಯೇ ಕಾರ್ಮಿಕರಿಗೆ ವಸತಿ: ಶ್ರಮಿಕ್ ನಿವಾಸ್ ನೀತಿ, ಕಂಪನಿಗೆ ₹25 ಕೋಟಿವರೆಗೆ ಸಬ್ಸಿಡಿ

ಶ್ರಮಿಕ್ ನಿವಾಸ್ ನೀತಿಯಡಿ ಮೊದಲ ಹಂತದಲ್ಲಿ 30 ಸಾವಿರ ಮನೆ ನಿರ್ಮಿಸಲಾಗುವುದು, ಕಂಪನಿಗೆ ಗರಿಷ್ಠ ₹25 ಕೋಟಿ ಸಬ್ಸಿಡಿ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
The Bengaluru Live November 15, 2026 1:42 AM
ನೀಲಿ ಕರ್ನಾಟಕ ಹಿನ್ನೆಲೆಯ ಮುಂದೆ ಕಟ್ಟಡದ ಚಿತ್ರವಿರುವ ಕೈಪಿಡಿಗಳನ್ನು ಹಿಡಿದ ಮೂವರು

ಶ್ರಮಿಕ್ ನಿವಾಸ್ ನೀತಿ ಬಿಡುಗಡೆ ಸಂದರ್ಭದಲ್ಲಿ ನೀತಿ ಕೈಪಿಡಿಗಳನ್ನು ಪ್ರದರ್ಶಿಸಿದ ದೃಶ್ಯ. ಫೋಟೊ: ಸಚಿವ ಎಂ.ಬಿ. ಪಾಟೀಲ ಅವರ ಮಾಧ್ಯಮ ತಂಡ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ತಯಾರಿಕಾ ವಲಯದಲ್ಲಿ ಶ್ರಮದಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ಅವರು ಕೆಲಸ ಮಾಡುವ ಕೈಗಾರಿಕೆಗಳ ಹತ್ತಿರವೇ ಗುಣಮಟ್ಟದ ವಸತಿ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಶ್ರಮಿಕ್ ನಿವಾಸ್’ ನೀತಿಯನ್ನು ಜಾರಿಗೆ ತಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ (ನ.12) ಈ ನೀತಿಯನ್ನು ಅನಾವರಣಗೊಳಿಸಿದ್ದಾರೆ. ಶ್ರಮದ ಕೆಲಸ ಮಾಡುವ ಉದ್ಯೋಗಿಗಳಿಗೆ ನೆಮ್ಮದಿ ನೀಡುವ ಸೂರು ಕಲ್ಪಿಸುವುದು ಸರ್ಕಾರದ ಉದ್ದೇಶ; ಇದರಿಂದ ಅವರು ದಿನನಿತ್ಯ ಬೇರೆ ಊರುಗಳಿಂದ ಸಂಚರಿಸುವ ತೊಂದರೆ ತಪ್ಪಿ, ಉತ್ಪಾದಕತೆ ಹೆಚ್ಚುತ್ತದೆ ಎಂದು ಪಾಟೀಲ ಹೇಳಿದರು. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಿರುವ ಕೈಗಾರಿಕೆಗಳ ಸನಿಹದಲ್ಲೇ ಡಾರ್ಮಿಟರಿ, ಒಂದು ರೂಮಿನ ಮನೆ ಮತ್ತು ಎರಡು ರೂಮಿನ ಮನೆಗಳನ್ನು ಕಟ್ಟಿ, ಕೈಗೆಟುಕುವ ಬಾಡಿಗೆ ದರದಲ್ಲಿ ಅಥವಾ ಉಚಿತವಾಗಿ ವಾಸಕ್ಕೆ ಕೊಡಲಾಗುವುದು ಎಂದರು.

ಈ ಮನೆಗಳಿಗೆ ಕೈಗಾರಿಕೆಗಳಿಗೆ ಇರುವ ದರದಲ್ಲೇ ನೀರು ಮತ್ತು ವಿದ್ಯುತ್ ಪೂರೈಸಲಾಗುವುದು. ಉದ್ಯೋಗಿಗಳು ವಾಸ ಮಾಡಲು ಶುರು ಮಾಡಿದ ದಿನದಿಂದ ಪರಿಗಣಿಸಿ, ಸಬ್ಸಿಡಿ ಹಣವನ್ನು 3 ವರ್ಷಗಳಲ್ಲಿ 3 ಸಮಾನ ಕಂತುಗಳಲ್ಲಿ ನೀಡಲಾಗುವುದು ಎಂದು ಅವರು ಹೇಳಿದರು.

“ರಾಜ್ಯದ ಕೈಗಾರಿಕಾ ಪ್ರದೇಶಗಳು ಬೃಹತ್ ಹೂಡಿಕೆಗೆ ಅನುಕೂಲವಾಗುವಂಥ ಮತ್ತು ಆಕರ್ಷಣೀಯ ಸೌಕರ್ಯಗಳನ್ನು ಹೊಂದಿರಬೇಕು ಎನ್ನುವುದು ನಮ್ಮ ಬಯಕೆ” ಎಂದ ಪಾಟೀಲ, ಶ್ರಮಿಕ್ ನಿವಾಸ್ ಯೋಜನೆಯಡಿ ಮೊದಲ ಹಂತದಲ್ಲಿ 30 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು ಎಂದರು. 100 ಉದ್ಯೋಗಿಗಳಿಗೆ ವಸತಿ ಕೊಟ್ಟರೆ ₹1 ಕೋಟಿ, 1,000 ಉದ್ಯೋಗಿಗಳಿಗೆ ವಸತಿ ಕಲ್ಪಿಸಿದರೆ ₹10 ಕೋಟಿ ಮತ್ತು 2,500 ಕೆಲಸಗಾರರಿಗೆ ವಸತಿ ಒದಗಿಸಿದರೆ ಗರಿಷ್ಠ ₹25 ಕೋಟಿ ಸಬ್ಸಿಡಿ ನೀಡಲಾಗುವುದು; ಬೃಹತ್ ಕೈಗಾರಿಕೆಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಈ ಯೋಜನೆಯಡಿ ಗರಿಷ್ಠ 10 ಚ.ಮೀ. ವಿಸ್ತೀರ್ಣದ ಡಾರ್ಮಿಟರಿ, ಗರಿಷ್ಠ 30 ಚ.ಮೀ. ವಿಸ್ತೀರ್ಣದ ಸಿಂಗಲ್ ಬೆಡ್ ರೂಮ್ ಮತ್ತು ಗರಿಷ್ಠ 60 ಚ.ಮೀ. ವಿಸ್ತೀರ್ಣದ ಡಬಲ್ ಬೆಡ್ ರೂಮ್ ಮನೆಗಳನ್ನು ಕಟ್ಟಲು ಅವಕಾಶವಿದೆ. ಉದ್ಯಮಿಗಳು ಕೆಐಎಡಿಬಿ ಮೂಲಕ ತಮಗೆ ಮಂಜೂರಾಗಿರುವ ನಿವೇಶನದ ಒಳಗೇ ಇವನ್ನು ಕಟ್ಟುವುದು ಕಡ್ಡಾಯ ಎಂದು ಅವರು ಮಾಹಿತಿ ನೀಡಿದರು.

ವರ್ಷಕ್ಕೆ ಗರಿಷ್ಠ 10 ಸಾವಿರ ಕೆಲಸಗಾರರಿಗೆ ವಸತಿ ಒದಗಿಸುವುದು ಗುರಿಯಾಗಿದ್ದು, ಇನ್ನೂ ಹೆಚ್ಚಿನ ಕೆಲಸಗಾರರ ಕೋರಿಕೆಗಳನ್ನು ಮುಂದಿನ ವರ್ಷ ಪರಿಗಣಿಸಲಾಗುವುದು ಎಂದು ಪಾಟೀಲ ಹೇಳಿದರು. ಕಂಪನಿಗಳ ಕಾಯಂ ಉದ್ಯೋಗಿಗಳು ಮಾತ್ರ ಅರ್ಹರಾಗಿದ್ದು, ಕೆಲಸಗಾರರ ಅವಲಂಬಿತರನ್ನು ಇದರಡಿ ಪರಿಗಣಿಸಲಾಗುವುದಿಲ್ಲ. ಒಂದು ಕಂಪನಿಗೆ ಗರಿಷ್ಠ ₹25 ಕೋಟಿವರೆಗೆ ಸಬ್ಸಿಡಿ ಕೊಡಲಾಗುವುದು ಎಂದರು.

“ಕೆಲಸಗಾರರು ಕೈಗಾರಿಕೆಗಳ ಅವಿಭಾಜ್ಯ ಅಂಗ. ಪರಿಶ್ರಮದಿಂದ ಕೂಡಿದ ಕೆಲಸ ಮಾಡುವವರು ನೆಮ್ಮದಿಯಿಂದ ಇರಬೇಕು ಎನ್ನುವುದು ನಮ್ಮ ಸದಾಶಯ. ವಸತಿ ಸೌಕರ್ಯದಿಂದ ಕೆಲಸಗಾರರ ಅನಗತ್ಯ ಓಡಾಟ ತಪ್ಪಿ, ಕೈಗಾರಿಕೆಗಳ ಉತ್ಪಾದಕತೆಯೂ ಹೆಚ್ಚುತ್ತದೆ. ಇದರಿಂದ ರಾಜ್ಯದ ಆರ್ಥಿಕತೆಗೆ ಲಾಭವಾಗಲಿದೆ. ಹೀಗಾಗಿಯೇ ನಾವು ಶ್ರಮಿಕ್ ನಿವಾಸ್ ಯೋಜನೆಯನ್ನು ಜಾರಿಗೆ ತಂದಿದ್ದೇವೆ” ಎಂದು ಪಾಟೀಲ ಹೇಳಿದರು.

About the Author

The Bengaluru Live

Administrator

Visit Website View All Posts

Post navigation

Previous: ಆಹಾರ ಭದ್ರತೆ, ನೀರಾವರಿ, ಕೈಗಾರಿಕೆಗೆ ನೆಹರು ದೂರದೃಷ್ಟಿಯೇ ಅಡಿಪಾಯ: ಕೆಪಿಸಿಸಿ ಮಕ್ಕಳ ದಿನಾಚರಣೆಯಲ್ಲಿ ಸಿದ್ದರಾಮಯ್ಯ
Next: ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ

Related Stories

ವೇದಿಕೆಯ ಎದುರು ಚಪ್ಪರದ ಕೆಳಗೆ ಕುಳಿತಿರುವ ಜನಸ್ತೋಮ
  • ಕರ್ನಾಟಕ

ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ: ಹೊಸಕೋಟೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ 499 ಅರ್ಜಿ ಸ್ವೀಕಾರ, ಸಚಿವ ಮುನಿಯಪ್ಪ

The Bengaluru Live November 15, 2026 1:54 AM
ಅಲಂಕೃತ ಚಪ್ಪರದ ಕೆಳಗೆ ಹೂಮಾಲೆ ಹಾಕಿದ ಎರಡು ಪುತ್ಥಳಿಗಳು
  • ಕರ್ನಾಟಕ
  • ರಾಜಕೀಯ

ಜಾಲಿಗೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಪುತ್ಥಳಿ ಅನಾವರಣ: 40 ವರ್ಷಗಳ ಒಳಮೀಸಲಾತಿ ಹೋರಾಟ ಅಂತ್ಯ ಎಂದ ಮುನಿಯಪ್ಪ

The Bengaluru Live November 15, 2026 1:52 AM
ಶಾಲಾ ಕಾರ್ಯಕ್ರಮದಲ್ಲಿ ಬಣ್ಣದ ಕೈಪಿಡಿಗಳನ್ನು ಹಿಡಿದ ಸಮವಸ್ತ್ರದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಕೆಲವು ಪುರುಷರು
  • ಕರ್ನಾಟಕ
  • ಶಿಕ್ಷಣ

ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ

The Bengaluru Live November 15, 2026 1:47 AM

Latest Post

ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ: ಹೊಸಕೋಟೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ 499 ಅರ್ಜಿ ಸ್ವೀಕಾರ, ಸಚಿವ ಮುನಿಯಪ್ಪ ವೇದಿಕೆಯ ಎದುರು ಚಪ್ಪರದ ಕೆಳಗೆ ಕುಳಿತಿರುವ ಜನಸ್ತೋಮ
  • ಕರ್ನಾಟಕ

ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ: ಹೊಸಕೋಟೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ 499 ಅರ್ಜಿ ಸ್ವೀಕಾರ, ಸಚಿವ ಮುನಿಯಪ್ಪ

November 15, 2026 1:54 AM
ಜಾಲಿಗೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಪುತ್ಥಳಿ ಅನಾವರಣ: 40 ವರ್ಷಗಳ ಒಳಮೀಸಲಾತಿ ಹೋರಾಟ ಅಂತ್ಯ ಎಂದ ಮುನಿಯಪ್ಪ ಅಲಂಕೃತ ಚಪ್ಪರದ ಕೆಳಗೆ ಹೂಮಾಲೆ ಹಾಕಿದ ಎರಡು ಪುತ್ಥಳಿಗಳು
  • ಕರ್ನಾಟಕ
  • ರಾಜಕೀಯ

ಜಾಲಿಗೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಪುತ್ಥಳಿ ಅನಾವರಣ: 40 ವರ್ಷಗಳ ಒಳಮೀಸಲಾತಿ ಹೋರಾಟ ಅಂತ್ಯ ಎಂದ ಮುನಿಯಪ್ಪ

November 15, 2026 1:52 AM
ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ ಶಾಲಾ ಕಾರ್ಯಕ್ರಮದಲ್ಲಿ ಬಣ್ಣದ ಕೈಪಿಡಿಗಳನ್ನು ಹಿಡಿದ ಸಮವಸ್ತ್ರದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಕೆಲವು ಪುರುಷರು
  • ಕರ್ನಾಟಕ
  • ಶಿಕ್ಷಣ

ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ

November 15, 2026 1:47 AM
ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ ಮಕ್ಕಳ ವಿಜ್ಞಾನ ಜಾತ್ರೆಯ ವೇದಿಕೆಯಲ್ಲಿ ಅಧಿಕಾರಿಗಳು ಮತ್ತು ಕೇಸರಿ ವಸ್ತ್ರದ ಸ್ವಾಮೀಜಿ ದೀಪ ಬೆಳಗುತ್ತಿರುವುದು
  • ಕರ್ನಾಟಕ
  • ಶಿಕ್ಷಣ

ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ

November 15, 2026 1:47 AM
ಕೈಗಾರಿಕೆಗಳ ಬಳಿಯೇ ಕಾರ್ಮಿಕರಿಗೆ ವಸತಿ: ಶ್ರಮಿಕ್ ನಿವಾಸ್ ನೀತಿ, ಕಂಪನಿಗೆ ₹25 ಕೋಟಿವರೆಗೆ ಸಬ್ಸಿಡಿ ನೀಲಿ ಕರ್ನಾಟಕ ಹಿನ್ನೆಲೆಯ ಮುಂದೆ ಕಟ್ಟಡದ ಚಿತ್ರವಿರುವ ಕೈಪಿಡಿಗಳನ್ನು ಹಿಡಿದ ಮೂವರು
  • ಕರ್ನಾಟಕ

ಕೈಗಾರಿಕೆಗಳ ಬಳಿಯೇ ಕಾರ್ಮಿಕರಿಗೆ ವಸತಿ: ಶ್ರಮಿಕ್ ನಿವಾಸ್ ನೀತಿ, ಕಂಪನಿಗೆ ₹25 ಕೋಟಿವರೆಗೆ ಸಬ್ಸಿಡಿ

November 15, 2026 1:42 AM
ಆಹಾರ ಭದ್ರತೆ, ನೀರಾವರಿ, ಕೈಗಾರಿಕೆಗೆ ನೆಹರು ದೂರದೃಷ್ಟಿಯೇ ಅಡಿಪಾಯ: ಕೆಪಿಸಿಸಿ ಮಕ್ಕಳ ದಿನಾಚರಣೆಯಲ್ಲಿ ಸಿದ್ದರಾಮಯ್ಯ ವೇದಿಕೆಯ ಮೇಲೆ ಹೂಮಾಲೆ ಹಾಕಿದ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಬಿಳಿ ಉಡುಪಿನ ವ್ಯಕ್ತಿ ಪುಷ್ಪ ನಮನ ಸಲ್ಲಿಸುತ್ತಿರುವುದು
  • ಬೆಂಗಳೂರು ನಗರ
  • ರಾಜಕೀಯ

ಆಹಾರ ಭದ್ರತೆ, ನೀರಾವರಿ, ಕೈಗಾರಿಕೆಗೆ ನೆಹರು ದೂರದೃಷ್ಟಿಯೇ ಅಡಿಪಾಯ: ಕೆಪಿಸಿಸಿ ಮಕ್ಕಳ ದಿನಾಚರಣೆಯಲ್ಲಿ ಸಿದ್ದರಾಮಯ್ಯ

November 15, 2026 1:37 AM

ನೀವು ತಪ್ಪಿಸಿಕೊಂಡಿರಬಹುದು

ವೇದಿಕೆಯ ಎದುರು ಚಪ್ಪರದ ಕೆಳಗೆ ಕುಳಿತಿರುವ ಜನಸ್ತೋಮ
  • ಕರ್ನಾಟಕ

ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ: ಹೊಸಕೋಟೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ 499 ಅರ್ಜಿ ಸ್ವೀಕಾರ, ಸಚಿವ ಮುನಿಯಪ್ಪ

The Bengaluru Live November 15, 2026 1:54 AM
ಅಲಂಕೃತ ಚಪ್ಪರದ ಕೆಳಗೆ ಹೂಮಾಲೆ ಹಾಕಿದ ಎರಡು ಪುತ್ಥಳಿಗಳು
  • ಕರ್ನಾಟಕ
  • ರಾಜಕೀಯ

ಜಾಲಿಗೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಪುತ್ಥಳಿ ಅನಾವರಣ: 40 ವರ್ಷಗಳ ಒಳಮೀಸಲಾತಿ ಹೋರಾಟ ಅಂತ್ಯ ಎಂದ ಮುನಿಯಪ್ಪ

The Bengaluru Live November 15, 2026 1:52 AM
ಶಾಲಾ ಕಾರ್ಯಕ್ರಮದಲ್ಲಿ ಬಣ್ಣದ ಕೈಪಿಡಿಗಳನ್ನು ಹಿಡಿದ ಸಮವಸ್ತ್ರದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಕೆಲವು ಪುರುಷರು
  • ಕರ್ನಾಟಕ
  • ಶಿಕ್ಷಣ

ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ

The Bengaluru Live November 15, 2026 1:47 AM
ಮಕ್ಕಳ ವಿಜ್ಞಾನ ಜಾತ್ರೆಯ ವೇದಿಕೆಯಲ್ಲಿ ಅಧಿಕಾರಿಗಳು ಮತ್ತು ಕೇಸರಿ ವಸ್ತ್ರದ ಸ್ವಾಮೀಜಿ ದೀಪ ಬೆಳಗುತ್ತಿರುವುದು
  • ಕರ್ನಾಟಕ
  • ಶಿಕ್ಷಣ

ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ

The Bengaluru Live November 15, 2026 1:47 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ: ಹೊಸಕೋಟೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ 499 ಅರ್ಜಿ ಸ್ವೀಕಾರ, ಸಚಿವ ಮುನಿಯಪ್ಪ
  • ಜಾಲಿಗೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಪುತ್ಥಳಿ ಅನಾವರಣ: 40 ವರ್ಷಗಳ ಒಳಮೀಸಲಾತಿ ಹೋರಾಟ ಅಂತ್ಯ ಎಂದ ಮುನಿಯಪ್ಪ
  • ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ
  • ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ
©Copyright 2025 The Bengaluru Live All rights reserved. | MoreNews by AF themes.