Home Uncategorized ನಿಮ್ಮ ಕರ್ಮ ನಿಮ್ಮನ್ನು ಬಿಡುವುದಿಲ್ಲ: ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಆರೋಪದ ಬೆನ್ನಲ್ಲೇ ಡಿ.ಕೆ ರವಿ...

ನಿಮ್ಮ ಕರ್ಮ ನಿಮ್ಮನ್ನು ಬಿಡುವುದಿಲ್ಲ: ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಆರೋಪದ ಬೆನ್ನಲ್ಲೇ ಡಿ.ಕೆ ರವಿ ಪತ್ನಿ ಟ್ವೀಟ್

12
0
bengaluru

ಐಪಿಎಸ್ ಅಧಿಕಾರಿ ಡಿ ರೂಪ ಸರಣಿ ಆರೋಪಗಳನ್ನು ಮಾಡಿರುವ ಬೆನ್ನಲ್ಲೇ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ಟ್ವೀಟ್ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ.  ಬೆಂಗಳೂರು: ಕರ್ನಾಟಕದಲ್ಲಿ ಐಎಎಸ್ vs ಐಪಿಎಸ್ ಮಹಿಳಾ ಅಧಿಕಾರಿಗಳ ಜಟಾಪಟಿ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ ರೂಪ ಸರಣಿ ಆರೋಪಗಳನ್ನು ಮಾಡಿರುವ ಬೆನ್ನಲ್ಲೇ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ಟ್ವೀಟ್ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ. 

ರೋಹಿಣಿ ಸಿಂಧೂರಿ ವಿರುದ್ಧದ ಆರೋಪದಲ್ಲಿ ರೂಪಾ ಮೌದ್ಗಿಲ್ ಅವರು ಡಿ.ಕೆ ರವಿ ಸಾವಿನ ಪ್ರಕರಣವನ್ನು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಡಿ.ಕೆ ರವಿ ಪತ್ನಿ ಟ್ವೀಟ್ ಮಹತ್ವ ಪಡೆದುಕೊಂಡಿದೆ. 

“ Karma will get back at you , sooner or later it surely will ”
— Kusuma Hanumantharayappa (@KusumaH_INC) February 19, 2023

ಕೇವಲ ಒಂದು ಸಾಲಿನಲ್ಲಿ ಟ್ವೀಟ್ ಮಾಡಿರುವ ಡಿ.ಕೆ ರವಿ ಪತ್ನಿ, “ Karma will get back at you , sooner or later it surely will ” (ನಿಧಾನವಾಗಿ ಅಥವಾ ವೇಗವಾಗಿ, ಒಟ್ಟಿನಲ್ಲಿ ಕರ್ಮ ನಿಮ್ಮನ್ನು ಬಿಡುವುದಿಲ್ಲ) ಎಂದು ಮಾರ್ಮಿಕವಾಗಿ ಬರೆದಿದ್ದಾರೆ.
 
ಡಿ.ಕೆ ರವಿ, ಐಎಎಸ್‌, ಸಂಭಾವಿತ ವ್ಯಕ್ತಿ. ಸಿಬಿಐ ರಿಪೋರ್ಟ್‌ನಲ್ಲಿ ಅವರ ಚಾಟ್ಸ್ ಬಗ್ಗೆ ಉಲ್ಲೇಖ ಇದ್ದು, ರವಿ ಅವರು ಎಂದಾದರೂ ಎಲ್ಲೆ ಮೀರಿ ಮೆಸೇಜ್ ಮಾಡಿದ ತಕ್ಷಣವೇ ಅವರನ್ನು ಬ್ಲಾಕ್ ಮಾಡಬಹುದಿತ್ತು. ಆದರೆ ರೋಹಿಣಿ, ಡಿ.ಕೆ ರವಿ ಅವರನ್ನು ಪರ್ಮನೆಂಟ್ ಆಗಿ ಬ್ಲಾಕ್ ಮಾಡಲಿಲ್ಲ. ಬ್ಲಾಕ್ ಮಾಡದೆ ಇದ್ದದ್ದು ಉತ್ತೇಜನ ಕೊಡುವ ಹಾಗೆ ಎಂಬಂತೆಯೇ ಕಾಣುತ್ತದೆ ಎಂಬುದು ಅನೇಕರ ಅಭಿಪ್ರಾಯ. ಡಿ.ಕೆ. ರವಿ ತೀರಿ ಹೋದ ಕೆಲ ತಿಂಗಳು ಮುಂಚೆ ಕನ್ನಡದ ಹುಡುಗ, ಐಪಿಎಸ್ ಅಧಿಕಾರಿ ಎನ್‌ ಹರೀಶ್ ಅವರ ಜತೆ ರೋಹಿಣಿ ಮದುವೆಯಾಗಲಿದ್ದಾರೆ ಎಂಬ ವಿಚಾರ ಹರಿದಾಡಿತ್ತು. ಆದರೆ, ಆತ, ಈಕೆಗಾಗಿ ಕಾದು ಕಾದು ಆತ್ಮಹತ್ಯೆ ಮಾಡಿಕೊಂಡದ್ದು, ಎಂದು ಹಲವರು ಹೇಳಿದರೂ, ನಾನು ಅದನ್ನು ನಂಬಲಿಲ್ಲ, ಈಗೂ ನಂಬಿಲ್ಲ ಎಂದು ರೂಪಾ ಮೌದ್ಗಿಲ್  ಟ್ವೀಟ್ ಮಾಡಿದ್ದರು.

bengaluru
bengaluru

LEAVE A REPLY

Please enter your comment!
Please enter your name here