ನೀರು ಕಾಯಿಸುವ ವಿದ್ಯುತ್ ಶಾಕ್ ಹೊಡೆದು ಅಜ್ಜ, ಅಜ್ಜಿ ಮತ್ತು ಮೊಮ್ಮಗಳು ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ಶಾಹುನಗರದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಬೆಳಗಾವಿ: ನೀರು ಕಾಯಿಸುವ ವಿದ್ಯುತ್ ಶಾಕ್ ಹೊಡೆದು ಅಜ್ಜ, ಅಜ್ಜಿ ಮತ್ತು ಮೊಮ್ಮಗಳು ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ಶಾಹುನಗರದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಮನೆಯಲ್ಲಿ ನೀರು ಕಾಯಿಸಲು ಕಾಯಿಲ್ ಹಾಕಿದ ವೇಳೆ ಮೊದಲಿಗೆ ಮೊಮ್ಮಗಳಿಗೆ ವಿದ್ಯುತ್ ತಗುಲಿದೆ, ನಂತರ ಆಕೆಯನ್ನು ಕಾಪಾಡಲು ಅಜ್ಜ- ಅಜ್ಜಿ ಹೋದಾಗ ಅವರಿಗೂ ವಿದ್ಯುತ್ ತಾಗಿ, ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬೆಳಗಾವಿಯ ಶಾಹು ನಗರದ 7ನೇ ಕ್ರಾಸ್‌ನ ನಿರ್ಮಾಣ ಹಂತದ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು, ಮೃತರು ಮೂಲತಃ ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾದ ಈರಪ್ಪಾ ಗಂಗಪ್ಪ ಲಮಾನಿ(50), ಶಾಂತವ್ವ ಈರಪ್ಪಾ ಲಮಾನಿ(45) ಮತ್ತು ಅನ್ನಪೂರ್ಣ ಹುನ್ನಪ್ಪಾ ಲಮಾನಿ (8) ಎಂದು ಗುರುತಿಸಲಾಗಿದೆ.
ಈ ನಡುವೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಧಾವಿಸಿದ ಎಪಿಎಂಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.