Home Uncategorized ನೀವು ವರದಿ ಮಾಡದೆ ಸೈಲೆಂಟ್ ಆಗಿರಿ, ಬೀದಿನಾಯಿಗಳನ್ನು ನಾವು ನಿಭಾಯಿಸುತ್ತೇವೆ: ಅವುಗಳನ್ನು ಕೊಲ್ಲದೆ ಬೇರೆ ದಾರಿಯಿಲ್ಲ;...

ನೀವು ವರದಿ ಮಾಡದೆ ಸೈಲೆಂಟ್ ಆಗಿರಿ, ಬೀದಿನಾಯಿಗಳನ್ನು ನಾವು ನಿಭಾಯಿಸುತ್ತೇವೆ: ಅವುಗಳನ್ನು ಕೊಲ್ಲದೆ ಬೇರೆ ದಾರಿಯಿಲ್ಲ; ಪ್ರತಾಪ್ ಸಿಂಹ

11
0
bengaluru

ನೀವು (ಮಾಧ್ಯಮ) ಬೀದಿ ನಾಯಿಗಳ ಬಗ್ಗೆ ವರದಿ ಮಾಡುವುದನ್ನು ನಿಲ್ಲಿಸಿ ಮತ್ತು ಮೌನವಾಗಿರಿ, ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲು ನಮಗೆ ಅವಕಾಶ ಮಾಡಿಕೊಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಮೈಸೂರು: ನೀವು (ಮಾಧ್ಯಮ) ಬೀದಿ ನಾಯಿಗಳ ಬಗ್ಗೆ ವರದಿ ಮಾಡುವುದನ್ನು ನಿಲ್ಲಿಸಿ ಮತ್ತು ಮೌನವಾಗಿರಿ, ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲು ನಮಗೆ ಅವಕಾಶ ಮಾಡಿಕೊಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಹ, ತೆಲಂಗಾಣದಲ್ಲಿ ಬೀದಿ ನಾಯಿಗಳ ಹಿಂಡು ಐದು ವರ್ಷದ ಮಗುವನ್ನು ಕೊಂದು ಹಾಕಿದ ಭೀಕರ ಘಟನೆಯನ್ನು ಪ್ರಸ್ತಾಪಿಸಿದರು. ಮೈಸೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಾಣಿ ಪ್ರಿಯರಿಂದಾಗಿ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಬೀದಿ ನಾಯಿಗಳು ತಮ್ಮ ಮಕ್ಕಳನ್ನು ಕಚ್ಚಿದಾಗ ಅವರಿಗೆ ಸಮಸ್ಯೆಯ ಅರಿವಾಗುತ್ತದೆ. ಬೀದಿ ನಾಯಿಗಳಿಗೆ ಆಹಾರ ನೀಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ, ಆ ಕೆಲಸವನ್ನು ಅವರು ಅಂದುಕೊಳ್ಳುವಂತೆ ದೊಡ್ಡ ಸಾಮಾಜಿಕ ಸೇವೆಯೂ ಅಲ್ಲ. ಸಮಸ್ಯೆ ಬಗೆಹರಿಸಲು ಬೀದಿ ನಾಯಿಗಳನ್ನು ಕೊಲ್ಲಬೇಕು’ ಎಂದರು.

ಮಾಧ್ಯಮ ಪ್ರತಿನಿಧಿಗಳ ಬೆಂಬಲ ಕೋರಿದ ಅವರು, ”ಸುಪ್ರೀಂ ಕೋರ್ಟ್ ಆದೇಶವಿರುವುದರಿಂದ ಬೀದಿ ನಾಯಿಗಳನ್ನು ಕೊಲ್ಲುವಂತಿಲ್ಲ. ಬೀದಿನಾಯಿಗಳನ್ನು ಕೊಂದಾಗ ನಮ್ಮದೇ ಪಕ್ಷದ ನಾಯಕರು ಸಮಸ್ಯೆ ಸೃಷ್ಟಿಸುತ್ತಾರೆ. ಮಾಧ್ಯಮಗಳು ಕೂಡ ಬೀದಿ ನಾಯಿಗಳ ಮೇಲಿನ ದಾಳಿಯ ಘಟನೆಗಳನ್ನು ಚರ್ಚೆಗೆ ತೆಗೆದುಕೊಳ್ಳುತ್ತವೆ.

bengaluru

ಹುಲಿಗಳು ಮತ್ತು ಆನೆಗಳು ಒಂದು ಅಥವಾ ಎರಡು ಮರಿಗಳನ್ನು ಹೊಂದಿದ್ದರೆ, ನಾಯಿಗಳು ಸುಮಾರು 10 ಮರಿಗಳನ್ನು ಹೊಂದಿರುತ್ತವೆ. ಯಾವುದೇ ಅನುಕಂಪವಿಲ್ಲದೆ ಅವರನ್ನು ಕೊಲ್ಲಬೇಕು ಎಂದರು.

ಬೀದಿ ನಾಯಿಗಳು ತನ್ನನ್ನು ಹಿಂಬಾಲಿಸಿ ಅಪಘಾತಕ್ಕೆ ಕಾರಣವಾಗಿತ್ತು ಎಂದು ಹೇಳಿದ ಸಂಸದರು, ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಅನೇಕ ಬೈಕ್ ಸವಾರರು ಮೂಳೆ ಮುರಿದುಕೊಂಡಿದ್ದಾರೆ ಎಂದು ಹೇಳಿದರು.  ಅಂತಹ ಬೀದಿ ನಾಯಿಗಳನ್ನು ತಪ್ಪಿಸಬೇಕಾದರೆ, ನಾವು ಪ್ರಾರಂಭಿಸಿದ ಕ್ರಮವನ್ನು ನೀವು ಮಾಧ್ಯಮಗಳಲ್ಲಿ ವರದಿ ಮಾಡುವುದನ್ನು ನಿಲ್ಲಿಸಬೇಕು ಎಂದರು. ನೀವು ಕೆಲ ದಿನ ಸುಮ್ಮನಿದ್ದು ಕ್ರಮ ಕೈಗೊಳ್ಳಲು ಅವಕಾಶ ಮಾಡಿಕೊಡಿ ಎಂದು ಸುದ್ದಿಗಾರರಿಗೆ ತಿಳಿಸಿದರು.

ಆಹಾರ, ಮಾಂಸದ ತ್ಯಾಜ್ಯವನ್ನು ರಸ್ತೆ ಬದಿ ಅಥವಾ ಖಾಲಿ ಜಾಗದಲ್ಲಿರೆಸ್ಟೋರೆಂಟ್‌ಗಳು, ಚಿಕನ್ ಮತ್ತು ಮಟನ್ ಸ್ಟಾಲ್‌ಗಳ ಸುರಿಯುತ್ತವೆ ಇದನ್ನು ಬೀದಿ ನಾಯಿಗಳು ಸೇವಿಸುತ್ತವೆ, ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಅವರು ಪೌರಾಡಳಿತ ಅಧಿಕಾರಿಗಳಿಗೆ ಸೂಚಿಸಿದರು. ವರದಿಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಬೀದಿ ನಾಯಿಗಳು 21 ಮಕ್ಕಳನ್ನು ಕೊಂದಿವೆ ಎಂದು ತಿಳಿದು ಬಂದಿದೆ. ಮೈಸೂರಿನಲ್ಲಿ ಇಂತಹ ಪರಿಸ್ಥಿತಿ ನಮಗೆ ಬೇಡ ಎಂದು ಹೇಳಿದರು.

bengaluru

LEAVE A REPLY

Please enter your comment!
Please enter your name here