ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಬಹು ಮಾದರಿ ಸಾರಿಗೆ ಹಬ್ ( ಎಂಎಂಟಿಹೆಚ್) ಆರಂಭಕ್ಕೆ ನುರಿತ ಕಾರ್ಮಿಕರ ಕೊರತೆಯೇ ಅಡ್ಡಿಯಾಗಿದೆ. ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಬಹು ಮಾದರಿ ಸಾರಿಗೆ ಹಬ್ (ಎಂಎಂಟಿಹೆಚ್) ಆರಂಭಕ್ಕೆ ನುರಿತ ಕಾರ್ಮಿಕರ ಕೊರತೆಯೇ ಅಡ್ಡಿಯಾಗಿದೆ.
ವಿಭಿನ್ನ ಸಾರಿಗೆ ಮೋಡ್ ಗಳಿಗೆ ಬದಲಾವಣೆ ಮಾಡಿಕೊಳ್ಳುವುದಕ್ಕೆ ಪ್ರಯಾಣಿಕರಿಗೆ ಅನುವು ಮಾಡಿಕೊಡುವ ವ್ಯವಸ್ಥೆಯನ್ನು ಎಂಎಂಟಿಹೆಚ್ ಮೂಲಕ ಕಲ್ಪಿಸಲು ಉದ್ದೇಶಿಸಲಾಗಿದೆ. ಸೆ.01 ರಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಂಎಂಟಿಹೆಚ್ ಭಾಗಶಃ ಸಿದ್ಧವಾಗಲಿದ್ದು, 2 ನೇ ಟರ್ಮಿನಲ್ ನಿಂದ ಆರಂಭವಾಗುವ ನಿರೀಕ್ಷೆ ಇದೆ. 1,39,371 ಚದರ ಮೀಟರ್ ವ್ಯಾಪ್ತಿಯಲ್ಲಿರಲಿರುವ ಈ ಹಬ್ ನಲ್ಲಿ ಪಾರ್ಕಿಂಗ್ ಹಾಗೂ ಡೆವಲ್ಪ್ಮೆಂಟ್ ಸ್ಪೇಸ್ ಸಹ ಇರಲಿದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳಿಂದ ದುರ್ನಡತೆ; ಒಸಿಐ ಮಹಿಳೆ ಆರೋಪ, ಕ್ಷಮೆಯಾಚನೆಗೆ ಆಗ್ರಹ
ಬಿಐಎಎಲ್ ನ ವಕ್ತಾರರೊಬ್ಬರು ಈ ಬಗ್ಗೆ ಮಾತನಾಡಿದ್ದು, ಎಂಎಂಟಿಹೆಚ್ ಒಂದೇ ಸೂರಿನಡಿ, ಖಾಸಗಿ ಕಾರು ಪಾರ್ಕಿಂಗ್, ಟ್ಯಾಕ್ಸಿ ಸೇವೆಗಳು, BMTC ಮತ್ತು KSRTC ಯಿಂದ ನಿರ್ವಹಿಸಲ್ಪಡುವ ನಗರದ ಒಳಗೆ ಮತ್ತು ಹೊರಗೆ ಸಂಪರ್ಕ ಕಲ್ಪಿಸುವ ಬಸ್ ಗಳ ಲಭ್ಯತೆ, ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಸೇರಿದಂತೆ ವೈವಿಧ್ಯಮಯ ಸಾರಿಗೆ ಆಯ್ಕೆಗಳನ್ನು ನೀಡಲಿದೆ. ಈ ಯೋಜನೆಯ ಗಡುವನ್ನು ಮೇ ತಿಂಗಳಿಗೆ ವಿಧಿಸಲಾಗಿತ್ತು. ಆದರೆ ಎಲೆಕ್ಟ್ರಾನಿಕ್ ಘಟಕಗಳ ಪೂರೈಕೆ ಹಾಗೂ ನುರಿತ ಕಾರ್ಮಿಕರ ಅಲಭ್ಯತೆಯಿಂದಾಗಿ ಯೋಜನೆ ಜಾರಿ ವಿಳಂಬವಾಗಿದೆ ಎಂದು ವಿವರಿಸಿದ್ದಾರೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ಎಂಎಂಟಿಹೆಚ್
ಎಂಎಂಟಿಹೆಚ್ 1,200 ಕ್ಕೂ ಹೆಚ್ಚು ಪಾರ್ಕಿಂಗ್ ಸ್ಥಳಗಳನ್ನು ಒದಗಿಸುತ್ತದೆ, ಇದರಲ್ಲಿ ಖಾಸಗಿ ವಾಹನಗಳಿಗೆ ಸ್ಥಳಾವಕಾಶಗಳು, ಕಡಿಮೆ ಚಲನಶೀಲತೆ ಹೊಂದಿರುವ ಜನರಿಗೆ ವಾಹನಗಳು ಮತ್ತು ಎಲೆಕ್ಟ್ರಿಕ್ ವಾಹನಗಳೂ ಸೇರಿವೆ. ಹೆಚ್ಚುವರಿಯಾಗಿ, ಬಸ್ ಮತ್ತು ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿಗಳಿಗೆ ಪಿಕ್ ಅಪ್ ಮತ್ತು ಡ್ರಾಪ್ ಮಾಡಲು ಮೀಸಲಾದ ಪ್ರದೇಶವಿದೆ. ಈ ಮೆಗಾ ಮೂಲಸೌಕರ್ಯ ಯೋಜನೆಗೆ ಆಗಿರುವ ನಿಖರವಾದ ವೆಚ್ಚದ ಬಗ್ಗೆ ಮಾಹಿತಿ ಇಲ್ಲವಾದರೂ, ಈ ಒಟ್ಟಾರೆ ಮೂಲಸೌಕರ್ಯ ವಿಸ್ತರಣೆಗೆ 13000 ಕೋಟಿ ರೂ. ಹೂಡಿಕೆ ಮಾಡಿದ್ದೇವೆ ಎಂದು ಬಿಐಎಎಲ್ ನ ವಕ್ತಾರರು ಹೇಳಿದ್ದಾರೆ.