Home Uncategorized ನೂರು ವರ್ಷವಾದರೂ ಅಕ್ಷರಶಃ ಅದಿನ್ನೂ ಕುಗ್ರಾಮವೇ! ಅನಾರೋಗ್ಯ ಪೀಡಿತರನ್ನ ಚೇರ್ ಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸ್ತಾರೆ

ನೂರು ವರ್ಷವಾದರೂ ಅಕ್ಷರಶಃ ಅದಿನ್ನೂ ಕುಗ್ರಾಮವೇ! ಅನಾರೋಗ್ಯ ಪೀಡಿತರನ್ನ ಚೇರ್ ಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸ್ತಾರೆ

7
0
Advertisement
bengaluru

ಅದು ಕಾಡಂಚಿನ ಗ್ರಾಮ, ಅಲ್ಲಿ ಶತಮಾನಗಳಿಂದ ನೂರಾರು ಕುಟುಂಬಗಳು ವಾಸ ಮಾಡುತ್ತಿವೆ.. ಕಾಡನ್ನೆ ನಂಬಿ ಬದುಕುತ್ತಿರುವ ಆ ಗ್ರಾಮಕ್ಕೆ ಕನಿಷ್ಠ ಮೂಲಭೂತ ಸೌಲಭ್ಯಗಳು ಇಲ್ಲ.. ಕುಡಿಯಲಿಕ್ಕೆ ನೀರು, ಸಂಚಾರಕ್ಕೆ ರಸ್ತೆ ಇಲ್ಲದೆ (infrastructure) ಗ್ರಾಮಸ್ಥರು ನಿತ್ಯ ಪರದಾಡುತ್ತಿದ್ದಾರೆ.. ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದರೆ ಅವರನ್ನ ಗ್ರಾಮಸ್ಥರೇ ಹೊತ್ತಿಕೊಂಡು ಆಸ್ಪತ್ರೆಗೆ ಬರುವ ಪರಿಸ್ಥಿತಿ ಇದೆ.. ಸರ್ಕಾರದ ಈ ನಿರ್ಲಕ್ಷ್ಯಕ್ಕೆ ಅಲ್ಲಿಯ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಹೌದು ಹೀಗೆ ಕೋಲಿನ ಮಧ್ಯೆ ಚೇರ್‌ನ್ನ ಕಟ್ಟಿ, ಅನಾರೋಗ್ಯ ಪೀಡಿತರನ್ನ ಹೇಗಲ ಮೇಲೆ ಹೊತ್ತು ಸಾಗುತ್ತಿರುವ ಜನ.. ರಸ್ತೆ ಇಲ್ಲದೆ ಕಾಡಿನ ಮಧ್ಯೆ ರೋಗಿಯನ್ನ ಹೊತ್ತು ಬರುತ್ತಿರುವ ಗ್ರಾಮಸ್ಥರು.. ಈ ದೃಶ್ಯ ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ (Ankola Taluk) ಹಟ್ಟಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವರ್ಲಿಬೇಣ ಗ್ರಾಮದಲ್ಲಿ (varlibena village).. ಎಸ್ ಶತಮಾಗಳಿಂದ ವರ್ಲಿಬೇಣ ಗ್ರಾಮಸ್ಥರು ಕಾಡನ್ನೆ ನಂಬಿಕೊಂಡು ಅಲ್ಲಿಯೇ ಜೀವನ ಮಾಡುತ್ತಿದ್ದಾರೆ.

ಕಾಡಿನ ಮಧ್ಯೆ ಇರುವ ಈ ಗ್ರಾಮಕ್ಕೆ ಸರ್ಕಾರ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಸಹ ನೀಡಿಲ್ಲ. ಹಟ್ಟಿಕೇರಿ ಗ್ರಾಮದಿಂದ 8 ಕಿ ಮೀ ದೂರ ಇರುವ ಈ ಗ್ರಾಮ, ಅಲ್ಲಿಯ ಜಜ ಸಿಟಿಗೆ ಅಥವಾ ಪಂಚಾಯತಿಗೆ ಬರಬೇಕಾದರೆ ಸುಮಾರು 3.5 ಕಿಮೀ ವರಗೆ ಕಾಡಿನ ಮಧ್ಯೆಯ ರಸ್ತೆ ಕಾಲ್ನಡಿಗೆಯಲ್ಲಿ ಬರಬೇಕು. ಸ್ವಾತಂತ್ರ್ಯ ಬಂದು ದೇಶಕ್ಕೆ 75 ವರ್ಷ ಕಳೆದರೂ ಈ ಗ್ರಾಮಕ್ಕೆ ಮಾತ್ರ ಯಾವ ಸೌಲಭ್ಯಗಳನ್ನೂ ಸರ್ಕಾರ ನೀಡಿಲ್ಲ. ಹೀಗಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ…

ಇನ್ನು ವರ್ಲಿಬೇಣ ಗ್ರಾಮದ ನೂರಾ ಪೊಕ್ಕಾ ಗೌಡ ಎಂಬ ವಯೋವೃದ್ಧ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ. ನಿನ್ನೆ ಬುಧವಾರ ಸಂಜೆ ವೇಳೆಗೆ ದಿಢೀರ‌ನೆ ಎದೆ ನೋವು ಅಂತಾ ವೃದ್ಧ ಕೆಳಗೆ ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು ಅಂದ್ರೆ ಗ್ರಾಮಕ್ಕೆ ರಸ್ತೆ ವ್ಯವಸ್ಥೆಯೇ ಇಲ್ಲ. ಹೀಗಾಗಿ ಗ್ರಾಮಸ್ಥರು ಒಟ್ಟು ಗೂಡಿ ಜೋಳಿಗೆ ಕಟ್ಟಿಕೊಂಡು.. ಹೊತ್ತು ಸಾಗಿದ್ದಾರೆ.. ಈ ದೃಶ್ಯ ನೋಡಿದ್ರೆ ಎಂತಹವರ ಮನ ಕಲುಕದೆ ಇರದು..

ಸರಿ ಸುಮಾರು 4 ಕಿಮೀ ವರೆಗೆ ವೃದ್ಧನನ್ನು ಗ್ರಾಮಸ್ಥರು ಹೊತ್ತು ಸಾಗಿದ್ದಾರೆ… ನಂತರದಲ್ಲಿ ಹಟ್ಟಿಕೇರಿ ಗ್ರಾಮದ ಬಳಿ ಬರುತ್ತಿದ್ದಂತೆ ಅಲ್ಲಿಂದ ವಾಹನದ ವ್ಯವಸ್ಥೆ ಮಾಡಿಕೊಂಡು ಅಂಕೋಲಾದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.. ಅದೃಷ್ಟ ದೊಡ್ಡದಿತ್ತು… ಆ ಹಿರಿಯ ಜೀವ ಬದುಕುಳಿದಿದೆ. ಪ್ರತಿ ದಿನ ಈ ಗ್ರಾಮಸ್ಥರು ರಸ್ತೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.. ಈ ಗ್ರಾಮದಲ್ಲಿ ಸುಮಾರು 50 ಕ್ಕೂ ಹೆಚ್ಚು ಕುಟುಂಬಗಳು ಇವೆ..

bengaluru bengaluru

ಇವರು ಇಲ್ಲಿ ಕೃಷಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ.. ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೂ ಕಳಿಸದ ಪರಿಸ್ಥಿತಿ ಇದೆ.. ಗ್ರಾಮದಲ್ಲಿನ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಉಪಯೋಗ ವಾಗುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು…

ಇದನ್ನೂ ಓದಿ: ಸಾಹಿತಿಗಳ ಪ್ರತಿಮೆಗಳುಳ್ಳ ಬಯಲು ವಸ್ತುಸಂಗ್ರಹಾಲಯ ಸ್ಥಾಪನೆಗೆ ಸರ್ಕಾರದ ಚಿಂತನೆ: ಸಿಎಂ ಬಸವರಾಜ ಬೊಮ್ಮಾಯಿ

ಒಟ್ಟಿನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ.. ಈ ಗ್ರಾಮಕ್ಕೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನ ಸರ್ಕಾರ ಕಲ್ಪಿಸಿಲ್ಲವೆಂದರೆ ನಿಜಕ್ಕೂ ಅದು ದುರ್ದೈವದ ಸಂಗತಿ. ಇನ್ನಾದರೂ ಸಂಬಂಧಿಸಿದವರು ಇತ್ತ ಕಡೆ ಗಮನ ಹರಿಸಿ ಸಮಸ್ಯೆಗೆ ಪರಿಹಾರ ನೀಡುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.

ವರದಿ: ವಿನಾಯಕ ಬಡಿಗೇರ, ಟಿವಿ 9, ಕಾರವಾರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


bengaluru

LEAVE A REPLY

Please enter your comment!
Please enter your name here