ನಂದಿ ಆರ್ಥಿಕ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ರಸ್ತೆಯನ್ನು (NICE road) ಬಳಸುವ ಪ್ರಯಾಣಿಕರು ಇಂದು ಜುಲೈ 1 ರಿಂದ ಶೇಕಡಾ 10ರಿಂದ 11ರಷ್ಟು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬೆಂಗಳೂರು: ನಂದಿ ಆರ್ಥಿಕ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ರಸ್ತೆಯನ್ನು (NICE road) ಬಳಸುವ ಪ್ರಯಾಣಿಕರು ಇಂದು ಜುಲೈ 1 ರಿಂದ ಶೇಕಡಾ 10ರಿಂದ 11ರಷ್ಟು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಕಂಪನಿಯ ಅಧಿಕಾರಿಗಳ ಪ್ರಕಾರ, ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯ ಘಟಕಗಳಾದ ಪೆರಿಫೆರಲ್ ರಸ್ತೆ ಮತ್ತು ಲಿಂಕ್ ರಸ್ತೆಗಳ ಟೋಲ್ ದರಗಳನ್ನು ರಾಜ್ಯ ಸರ್ಕಾರದೊಂದಿಗಿನ ಟೋಲ್ ರಿಯಾಯಿತಿ ಒಪ್ಪಂದದ ಪ್ರಕಾರ ಪರಿಷ್ಕರಿಸಲಾಗಿದೆ.
ಪರಿಷ್ಕರಣೆಯಂತೆ ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆವರೆಗೆ ಕಾರುಗಳಿಗೆ 50 ರೂಪಾಯಿ, ದ್ವಿಚಕ್ರ ವಾಹನಕ್ಕೆ 25 ರೂಪಾಯಿ, ಅದೇ ರೀತಿ ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ ಕಾರುಗಳಿಗೆ 40 ರೂಪಾಯಿ, ದ್ವಿಚಕ್ರ ವಾಹನಗಳಿಗೆ 15 ರೂಪಾಯಿ, ಸಂಪರ್ಕ ರಸ್ತೆಯಲ್ಲಿ ಕಾರುಗಳಿಗೆ 60 ರೂಪಾಯಿ, ದ್ವಿಚಕ್ರ ವಾಹನಗಳಿಗೆ 20 ರೂಪಾಯಿ, ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಕಾರುಗಳಿಗೆ 55 ರೂಪಾಯಿ ಮತ್ತು ದ್ವಿಚಕ್ರ ವಾಹನಗಳಿಗೆ 15 ರೂಪಾಯಿ ವಿಧಿಸಲಾಗುತ್ತದೆ.
ನೀತಿಯ ಪ್ರಕಾರ ಟೋಲ್ ಶುಲ್ಕವನ್ನು ಪರಿಷ್ಕರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಭಿವೃದ್ಧಿಪಡಿಸಿದ ನಂತರ ಮತ್ತು ಟೋಲ್ ಶುಲ್ಕವನ್ನು ಹೆಚ್ಚಿಸಿದ ನಂತರ ಈ ಮಾರ್ಗಗಳಲ್ಲಿ ಟೋಲ್ ಶುಲ್ಕವನ್ನು ಪರಿಷ್ಕರಿಸಲಾಗಿದೆ ಎನ್ನುತ್ತಾರೆ ಪ್ರಯಾಣಿಕರು.
ಇತ್ತೀಚೆಗೆ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದೀಗ ಟೋಲ್ ಶುಲ್ಕ ಪರಿಷ್ಕರಣೆಯಿಂದ ವಾಹನ ಸವಾರರಿಗೆ ಹೆಚ್ಚುವರಿ ಹೊರೆಯಾಗಲಿದೆ. ನಾನು ಪ್ರತಿದಿನ ಕಚೇರಿಗೆ ಹೋಗಲು NICE ರಸ್ತೆಯನ್ನು ಬಳಸುತ್ತೇನೆ. ಟೋಲ್ ಶುಲ್ಕ ಪರಿಷ್ಕರಣೆ ಖಂಡಿತವಾಗಿಯೂ ನನಗೆ ಹೆಚ್ಚಿನ ಹೊರೆಯಾಗುತ್ತದೆ ಎನ್ನುತ್ತಾರೆ ಪ್ರಯಾಣಿಕ ಪ್ರದೀಪ್.