Home Uncategorized ಪತ್ನಿಯೊಂದಿಗೆ ಜಗಳವಾಡಿ ಕೋಪದಲ್ಲಿ 2 ವರ್ಷದ ಮಗುವನ್ನು ಬಾಲ್ಕನಿಯಿಂದ ಎಸೆದ ಪಾಪಿ ತಂದೆ

ಪತ್ನಿಯೊಂದಿಗೆ ಜಗಳವಾಡಿ ಕೋಪದಲ್ಲಿ 2 ವರ್ಷದ ಮಗುವನ್ನು ಬಾಲ್ಕನಿಯಿಂದ ಎಸೆದ ಪಾಪಿ ತಂದೆ

1
0
bengaluru

ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾಧೆಯನ್ನು ನೀವು ಕೇಳಿರಬಹುದು, ಹಾಗೆಯೇ ಈ ಗಂಡ-ಹೆಂಡಿರ ಜಗಳದಲ್ಲಿ ಮಗುವಿನ ಪ್ರಾಣಕ್ಕೆ ಅಪಾಯ ಬಂದೊದಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಜಗಳವಾಡಿ ಬಳಿಕ 3 ಅಂತಸ್ತಿನ ಎತ್ತರದ ಬಾಲ್ಕನಿಯಿಂದ ಎರಡು ವರ್ಷದ ಮಗುವನ್ನು ಎಸೆದು ಬಳಿಕ ತಾನೂ ಜಿಗಿದಿದ್ದಾನೆ.

ಗಾಯಗೊಂಡಿರುವ ತಂದೆ ಮಗನನ್ನು ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್​ ಸೈನ್ಸ್​ಗೆ ದಾಖಲಿಸಲಾಗಿದೆ.
ಶುಕ್ರವಾರ ರಾತ್ರಿ ನವದೆಹಲಿಯ ಕಲ್ಕಾಜಿಯ ಕೊಳಗೇರಿಯಲ್ಲಿ ಘಟನೆ ನಡೆದಿದೆ. ಮಾನ್​ಸಿಂಗ್ ಹಾಗೂ ಆತನ ಪತ್ನಿ ಪೂಜಾ ಕಳೆದ ಕೆಲವು ತಿಂಗಳುಗಳಿಂದ ಜಗಳವಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: 8 ತಿಂಗಳ ಮಗು ನುಂಗಿದ್ದ ಬಾಟಲ್‌ ಮುಚ್ಚಳವನ್ನು ಯಶಸ್ವಿಯಾಗಿ ಹೊರತೆಗೆದ ಬೆಂಗಳೂರಿನ ವೈದ್ಯರು

ಪೂಜಾ ತನ್ನ ಮನೆಯಿಂದ ಹೊರಟು ತನ್ನ ಇಬ್ಬರು ಮಕ್ಕಳೊಂದಿಗೆ ಕಲ್ಕಾಜಿಯಲ್ಲಿರುವ ತನ್ನ ಅಜ್ಜಿಯ ಮನೆಗೆ ಬಂದಿದ್ದಳು.
ನಿನ್ನೆ ರಾತ್ರಿ ಆತ ಪೂಜಾಳನ್ನು ಭೇಟಿಯಾಗಿದ್ದ, ಜಗಳವಾಡಿದ್ದ, ಕೋಪದ ಭರದಲ್ಲಿ ಅವನು ತನ್ನ ಮಗನನ್ನು ಬಾಲ್ಕನಿಯಿಂದ ಕೆಳಗೆ ಎಸೆದು ಬಳಿಕ ತಾನೂ ಕೂಡ ಹಾರಿದ್ದನು. ವ್ಯಕ್ತಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

bengaluru

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

bengaluru

LEAVE A REPLY

Please enter your comment!
Please enter your name here