Home Uncategorized ಪಾಕ್-ಬೆಂಗಳೂರು ಪ್ರೀತಿ ಎಡವಟ್ಟು: ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿ

ಪಾಕ್-ಬೆಂಗಳೂರು ಪ್ರೀತಿ ಎಡವಟ್ಟು: ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿ

20
0

ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿದ್ದ ಪಾಕಿಸ್ತಾನ ಯುವತಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಪ್ರೀತಿ-ಪ್ರೇಮ-ಮದುವೆ ವಿಚಾರ ಇದೀಗ ಮತ್ತೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು ಕೆಲ ಅಂತಾರಾಷ್ಟ್ರೀಯ ಮಾಧ್ಯಮಗಳು ಈ ವರದಿಯನ್ನು ಬಿತ್ತರಿಸುತ್ತಿವೆ. ಬೆಂಗಳೂರು: ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿದ್ದ ಪಾಕಿಸ್ತಾನ ಯುವತಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಪ್ರೀತಿ-ಪ್ರೇಮ-ಮದುವೆ ವಿಚಾರ ಇದೀಗ ಮತ್ತೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು ಕೆಲ ಅಂತಾರಾಷ್ಟ್ರೀಯ ಮಾಧ್ಯಮಗಳು ಈ ವರದಿಯನ್ನು ಬಿತ್ತರಿಸುತ್ತಿವೆ.

ಹೌದು.. ಈ ವಿಶಿಷ್ಠ ಕಥೆಯನ್ನು ಈ ಹಿಂದೆ ಅಂದರೆ ಜನವರಿ 24 ರಂದು TNIE ವರದಿ ಮಾಡಿತ್ತು. ಅಕ್ರಮ ವಾಸ್ತವ್ಯದ ಆರೋಪದ ಮೇಲೆ ಭಾರತೀಯ ಪತಿಯೊಂದಿಗೆ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ 19ರ ಹರೆಯದ ಪಾಕಿಸ್ತಾನಿ ಯುವತಿ ಕಳೆದ ತಿಂಗಳು ಪಾಕಿಸ್ತಾನಕ್ಕೆ ವಾಪಸ್ ಕೂಡ ಆಗಿದ್ದಳು. ಇದೇ ಕಥೆ ಇದೀಗ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಅಕ್ರಮ ಮಾಂಸ ದಂಧೆ ಆರೋಪದ ಮೇಲೆ ಮಾಜಿ ಸಚಿವ ಯಾಕೂಬ್ ಖುರೇಷಿ ಹಾಗೂ ಪುತ್ರನ ಬಂಧನ

ಮೂಲಗಳ ಪ್ರಕಾರ, ಮೊಹಮ್ಮದ್ ಸೊಹೈಲ್ ಜೀವಾನಿ ಅವರ ಪುತ್ರಿ ಮತ್ತು ಪಾಕಿಸ್ತಾನದ ಹೈದರಾಬಾದ್‌ನ ಪಿಗ್ಗೊಟ್ ಮೆಮೋರಿಯಲ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಇಕ್ರಾ ಜೀವಾನಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತನ್ನ ಭಾರತದ ‘ಪತಿ’ ಮುಲಾಯಂ ಸಿಂಗ್ ಅವರೊಂದಿಗೆ ನೇಪಾಳದ ಮೂಲಕ ಮಾನ್ಯ ವೀಸಾ ಇಲ್ಲದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಳು. ಈ ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದ ಅಲಹಾಬಾದ್ ಮೂಲದ ನಿವಾಸಿಯಾಗಿದ್ದಾನೆ. ಆತನನ್ನು ಸಮೀರ್ ಅನ್ಸಾರಿ ಎಂದು ಕರೆಯಲಾಗುತ್ತಿತ್ತು. ಸಮೀರ್ ಅನ್ಸಾರಿ ಎಂಬುದು ಆತನ ಸಾಮಾಜಿಕ ಜಾಲತಾಣ ಖಾತೆ ಹೆಸರು.

ಸಮೀರ್ ಅನ್ಸಾರಿ ಎಂಬ ತನ್ನ ಆನ್‌ಲೈನ್ ಹೆಸರನ್ನು ಹೊಂದಿದ್ದ ಜೀವನಿ ಮತ್ತು ಯಾದವ್, ಗೇಮಿಂಗ್ ಅಪ್ಲಿಕೇಶನ್‌ನಲ್ಲಿ ಇಕ್ರಾ ಅವರನ್ನು ಭೇಟಿಯಾಗಿದ್ದ. ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಜೀವಾನಿ ಅವರ ಪೋಷಕರು ತಮ್ಮ ಮಗಳು ಭಾರತೀಯ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎಂದು ತಿಳಿದುಕೊಂಡು ಪಾಕಿಸ್ತಾನದಲ್ಲಿ ಆಕೆಗೆ ಮದುವೆಗೆ ಮುಂದಾದರು. ಇದನ್ನು ಅನ್ಸಾರಿ ತಿಳಿಸಿದ್ದ ಯುವತಿ ಇಕ್ರಾ ಅಲ್ಲಿಂದ ತನ್ನನ್ನು ಕರೆಸಿಕೊಳ್ಳುವಂತೆ ಕೇಳಿದ್ದಳು. ಆಕೆಮಾನ್ಯವಾದ ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿದ್ದರಿಂದ, ಯಾದವ್ ಅಲಿಯಾಸ್ ಸಮೀರ್ ಅನ್ಸಾರಿ ಆಕೆಯನ್ನು ನೇಪಾಳದ ಕಠ್ಮಂಡುವಿಗೆ ಬರಲು ಹೇಳಿದ್ದ. ಅದರಂತೆ ಆಕೆ ಕಠ್ಮಂಡುವಿಗೆ ಆಗಮಿಸಿ ನಂತರ ಪ್ರವಾಸಿ ವೀಸಾವನ್ನು ಪಡೆದಳು. ಇಬ್ಬರೂ ಅಲ್ಲಿ ಭೇಟಿಯಾದರು ಮತ್ತು ನೇಪಾಳದಲ್ಲಿ ವಿವಾಹವಾದರು ಎಂದು ವರದಿಯಾಗಿದೆ. 

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವತಿ ಬಂಧನ

“ನಂತರ ದಂಪತಿಗಳು ಭಾರತ-ನೇಪಾಳ ಗಡಿಯನ್ನು ದಾಟಿ ಬಸ್ಸಿನಲ್ಲಿ ಪಾಟ್ನಾಗೆ ಬಂದಿದ್ದು, ಅಲ್ಲಿಂದ, ಅವರು ಸೆಪ್ಟೆಂಬರ್ 2022 ರ ಕೊನೆಯ ವಾರದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಯಾದವ್ ಪ್ರಸಿದ್ಧ ಐ-ಟಿ ಕಂಪನಿಯಲ್ಲಿ ಭದ್ರತಾ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ. ಇಬ್ಬರೂ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಿದ್ದರು. ಭಾರತೀಯ ಗುರುತಿನ ಚೀಟಿ ಮತ್ತು ಪಾಸ್‌ಪೋರ್ಟ್‌ನೊಂದಿಗೆ ಆಕೆಗೆ ಸಹಾಯ ಮಾಡಲು, ಯಾದವ್ ತನ್ನ ಸಂಬಂಧಿಕರ ಆಧಾರ್ ಕಾರ್ಡ್ ಅನ್ನು ಎಡಿಟ್ ಮಾಡಿದ್ದ. ಅದರ ಮೇಲೆ ಅವಳ ಛಾಯಾಚಿತ್ರ ಮತ್ತು ಹೆಸರನ್ನು ಹಾಕಿಸಿದ್ದ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಸೆಪ್ಟೆಂಬರ್ 19 ರಂದು ಇಕ್ರಾಳ ತಂದೆ ಹೈದರಾಬಾದ್ ನಗರ (ಪಾಕಿಸ್ತಾನ) ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು. ಇತ್ತ ಯುವತಿ ಇಕ್ರಾ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಸಂಪರ್ಕದಲ್ಲಿದ್ದಳು. ಪಾಕಿಸ್ತಾನದ ದೂರವಾಣಿ ಸಂಪರ್ಕವನ್ನು ಬೇಧಿಸಿದ್ದ ಪೊಲೀಸರು ಜನವರಿ 23 ರಂದು ಯುವತಿ ಇಕ್ರಾಳನ್ನು ಭಾರತದಲ್ಲಿ ಅಕ್ರಮವಾಗಿ ತಂಗಿದ್ದಕ್ಕಾಗಿ ಬಂಧಿಸಿದ್ದರು. ಮತ್ತು ನಂತರ ಪಾಕಿಸ್ತಾನಕ್ಕೆ ವಾಪಸು ಕಳುಹಿಸಿದ್ದರು. ಅಂತೆಯೇ ವಂಚನೆ ಪ್ರಕರಣ ಮತ್ತು ವಿದೇಶಿ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 ರ ಅಡಿಯಲ್ಲಿ ಯಾದವ್ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 

LEAVE A REPLY

Please enter your comment!
Please enter your name here