Home Uncategorized ಪಾರ್ಟ್ ಟೈಂ, ವರ್ಕ್ ಫ್ರಂ ಹೋಂ ಉದ್ಯೋಗದ ಸಂದೇಶ ಬಂದರೆ ಜೋಕೆ; ಪ್ರೀಪೇಯ್ಡ್ ಟಾಸ್ಕ್ ಹಗರಣಕ್ಕೆ...

ಪಾರ್ಟ್ ಟೈಂ, ವರ್ಕ್ ಫ್ರಂ ಹೋಂ ಉದ್ಯೋಗದ ಸಂದೇಶ ಬಂದರೆ ಜೋಕೆ; ಪ್ರೀಪೇಯ್ಡ್ ಟಾಸ್ಕ್ ಹಗರಣಕ್ಕೆ ಮೈಸೂರಿಗರೇ ಟಾರ್ಗೆಟ್!

1
0
Advertisement
bengaluru

ಮುಂದಿನ ಬಾರಿ ವಾಟ್ಸಾಪ್ ಮತ್ತು ಟೆಲಿಗ್ರಾಂನಲ್ಲಿ ಲಾಭದಾಯಕ ಪಾರ್ಟ್ ಟೈಂ ಅಥವಾ ಪ್ರಿಪೇಯ್ಡ್ ಉದ್ಯೋಗಗಳನ್ನು ನೀಡುವ ಸಂದೇಶವನ್ನು ನೀವು ಕಂಡರೆ, ಜಾಗರೂಕರಾಗಿರಿ. ಏಕೆಂದರೆ, ನಿಮ್ಮ ಬ್ಯಾಂಕ್ ಖಾತೆಯಿಂದ ಎಲ್ಲಾ ಹಣವನ್ನು ನೀವು ಕಳೆದುಕೊಳ್ಳಬಹುದು. ಮೈಸೂರು: ಮುಂದಿನ ಬಾರಿ ವಾಟ್ಸಾಪ್ ಮತ್ತು ಟೆಲಿಗ್ರಾಂನಲ್ಲಿ ಲಾಭದಾಯಕ ಪಾರ್ಟ್ ಟೈಂ ಅಥವಾ ಪ್ರಿಪೇಯ್ಡ್ ಉದ್ಯೋಗಗಳನ್ನು ನೀಡುವ ಸಂದೇಶವನ್ನು ನೀವು ಕಂಡರೆ, ಜಾಗರೂಕರಾಗಿರಿ. ಏಕೆಂದರೆ, ನಿಮ್ಮ ಬ್ಯಾಂಕ್ ಖಾತೆಯಿಂದ ಎಲ್ಲಾ ಹಣವನ್ನು ನೀವು ಕಳೆದುಕೊಳ್ಳಬಹುದು.

ಪಾರ್ಟ್ ಟೈಂ ಉದ್ಯೋಗಾಕಾಂಕ್ಷಿಗಳು ಮತ್ತು ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಬಯಸುವವರು ಪ್ರಿಪೇಯ್ಡ್ ಟಾಸ್ಕ್ ಹಗರಣಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಮತ್ತು ಸೈಬರ್ ಅಪರಾಧಿಗಳು ಕಳೆದ ಕೆಲವು ತಿಂಗಳುಗಳಲ್ಲಿ ಮೈಸೂರಿನಲ್ಲಿಯೇ ಕನಿಷ್ಠ 30 ಸಂತ್ರಸ್ತರ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ಸಂಪೂರ್ಣ ಖಾಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರುಗಳ ಪ್ರಕಾರ, ಎಲ್ಲಾ ಸೈಬರ್ ವಂಚನೆಗಳಲ್ಲಿ ಸುಮಾರು ಶೇ 60 ರಷ್ಟು ಪ್ರಕರಣಗಳು ಈ ಪ್ರಿಪೇಯ್ಡ್ ಟಾಸ್ಕ್ ಹಗರಣಕ್ಕೆ ಸಂಬಂಧಿಸಿದೆ. 20 ಸಾವಿರದಿಂದ 35 ಲಕ್ಷದವರೆಗೆ ಜನರು ಹಣ ಕಳೆದುಕೊಂಡಿದ್ದಾರೆ.

ಸಂತ್ರಸ್ತರ ನಂಬಿಕೆ ಗಳಿಸುವ ಸಲುವಾಗಿ ವೃತ್ತಿಪರರಂತೆ ನಟಿಸುವ ವಂಚಕರು, ಭ್ರಮೆಯ ಜಾಲವೊಂದನ್ನು ಹೆಣೆಯುತ್ತಾರೆ. ಸಂತ್ರಸ್ತರಿಗೆ ನಂಬಿಕೆ ಬರುವಂತೆ ಮಾಡಲು ಮೊದಲಿಗೆ ಕೆಲವು ಪಾವತಿಗಳನ್ನು ಮಾಡುತ್ತಾರೆ. ಆದರೆ, ನಂತರ ಸಂತ್ರಸ್ತರು ಹೆಚ್ಚು ಗಳಿಸಲು ಹೆಚ್ಚು ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತಾರೆ. ಅಂತಿಮವಾಗಿ ಹೆಚ್ಚಿನ ಹಣ ಹೂಡಿಕೆ ಮಾಡಿದ ನಂತರ ಅವರು ಕಣ್ಮರೆಯಾಗುತ್ತಾರೆ.

bengaluru bengaluru

ಇದನ್ನೂ ಓದಿ: ಕ್ರಿಕೆಟ್ ಬುಕ್ಕಿಯಿಂದ ಉದ್ಯಮಿಗೆ 58 ಕೋಟಿ ರೂಪಾಯಿಗಳ ಮಹಾ ವಂಚನೆ

ಪ್ರಿಪೇಯ್ಡ್ ಟಾಸ್ಕ್‌ಗಳೆಂದರೆ, YouTube ವಿಡಿಯೋಗಳನ್ನು ವೀಕ್ಷಿಸುವುದು, ಪರಿಶೀಲಿಸುವುದು ಮತ್ತು ಲೈಕ್ ಮಾಡುವುದನ್ನು ಒಳಗೊಂಡಿರುತ್ತದೆ. 

ಈ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರಿಗೆ, ಸಂತ್ರಸ್ತರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾದ ಖಾತೆಗಳು ದೇಶದಾದ್ಯಂತ ಹರಡಿರುವ ವಿವಿಧ ಬ್ಯಾಂಕ್ ಶಾಖೆಗಳಲ್ಲಿವೆ ಎಂಬುದು ತಿಳಿದುಬಂದಿದೆ. ಇಂತಹ ಪ್ರಿಪೇಯ್ಡ್ ಟಾಸ್ಕ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೈಬರ್ ಕ್ರೈಂ ಪೊಲೀಸರು ಜನರಿಗೆ ಸಲಹೆ ನೀಡಿದ್ದಾರೆ.


bengaluru

LEAVE A REPLY

Please enter your comment!
Please enter your name here