Home Uncategorized ಪಿಎಂ ಕಿಸಾನ್ ಸಮ್ಮಾನ್: ಬೆಳಗಾವಿಯಿಂದ ದೇಶದ ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿದ...

ಪಿಎಂ ಕಿಸಾನ್ ಸಮ್ಮಾನ್: ಬೆಳಗಾವಿಯಿಂದ ದೇಶದ ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿದ ಪ್ರಧಾನಿ ಮೋದಿ

14
0
bengaluru

ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿಂದು  ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗಳಿಗೆ 13ನೇ ಕಂತಿನ ಹಣವನ್ನು ಜಮೆ ಮಾಡಿದರು.  ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗಳಿಗೆ 13ನೇ ಕಂತಿನ ಹಣವನ್ನು ಜಮೆ ಮಾಡಿದರು. 8 ಕೋಟಿಗೂ ಅಧಿಕ ರೈತರ ಖಾತೆಗಳಿಗೆ ತಲಾ 2 ಸಾವಿರದಂತೆ ಒಟ್ಟಾರೆ ರೂ. 16,800 ಕೋಟಿ ಹಣವನ್ನು ನೇರವಾಗಿ ವರ್ಗಾವಣೆ ಮಾಡುವ ಮೂಲಕ ಹೋಳಿ ಗಿಫ್ಟ್ ನೀಡಿದರು.

ಇದೇ ವೇಳೆ ಜಲ ಜೀವನ್ ಮಿಷನ್ ಯೋಜನೆಯಡಿ ರೂ. 2,240 ಕೋಟಿ ಮೊತ್ತದ ಜಲಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು.

ಇದನ್ನೂ ಓದಿ: ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ, ಜನಸಾಗರ!

ನಂತರ ಮಾತನಾಡಿದ ಪ್ರಧಾನಿ, ಬೆಳಗಾವಿಯಿಂದ ದೇಶದ ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. 50 ಸಾವಿರ ಕೋಟಿಗೂ ಹೆಚ್ಚು ಹಣ ಮಹಿಳೆಯರ ಖಾತೆಗೆ ಹಣ ತಲುಪಿದೆ. ದೇಶದಲ್ಲಿ ಅತಿ ಹೆಚ್ಚು ಸಣ್ಣ ರೈತರಿದ್ದು, ಈ ಯೋಜನೆಯಿಂದ ಅವರಿಗೆ ಅನುಕೂಲವಾಗಲಿದೆ. ಯಾವುದೇ ಭ್ರಷ್ಟಾಚಾರವಿಲ್ಲದ ಹಣ ರೈತರ ಕೈ ಸೇರುತ್ತಿದೆ ಮೊಬೈಲ್ ನಲ್ಲಿ ಮೆಸೇಜ್ ಪರಿಶೀಲಿಸಿ ಎಂದರು. 

Karnataka | All farmers of India have been connected with Belagavi here today, crores of farmers have been credited with over Rs 16,000 cr from here. This instalment is a greeting of Holi: PM Modi in Belagavi pic.twitter.com/t8e58TTDw4
— ANI (@ANI) February 27, 2023

2014ರ ನಂತರ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಆಗಿದೆ. ಕೃಷಿಯಲ್ಲಿ ಆಧುನಿಕ ಬದಲಾವಣೆ ತರಲಾಗುತ್ತಿದೆ.  ಪ್ರಸ್ತುತ ವರ್ಷ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಾಕೃತಿಕ ಸಹಜ ಕೃಷಿ ಕಾಯಕ್ಕೆ ಆಧ್ಯತೆ ನೀಡಲಾಗುತ್ತಿದೆ. ಸಿರಿ ಧಾನ್ಯ ಬೆಳೆಗಳ ಬೆಳವಣಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ರೈಲ್ವೆ ಕಾಮಗರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೆಳಗಾವಿ ರೈಲು ನಿಲ್ದಾಣ ಆಶ್ಚರ್ಯ ಮತ್ತು ಅಭಿಮಾನ ಉಂಟು ಮಾಡುವಷ್ಟು ಅಧುನಿಕರಣಗೊಳಿಸಲಾಗಿದೆ.  ಡಬಲ್ ಎಂಜನಿ ಸರ್ಕರದ ಕಾರಣ ಮನೆ ಮನೆಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ: ರೂ.450 ಕೋಟಿ ವೆಚ್ಚದ ನೂತನ ವಿಮಾನ ನಿಲ್ದಾಣ ಉದ್ಘಾಟನೆ, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಕಾಂಗ್ರೆಸ್ ಕುಟುಂಬದ ರಾಜಕಾರಣ ದೇವರಾಜ್ ಅರಸ್, ವೀರೇಂದ್ರ ಪಾಟೀಲ ಅಪಮಾನ ಮಾಡಿದೆ. ಮಲ್ಲಿಕಾರ್ಜು ಖರ್ಗೆ ಅವರಿಗೆ ಗೌರವಿಸುತ್ತೇನೆ.  ಆದರೆ, ಕಾಂಗ್ರೆಸ್ ದಲ್ಲಿ ಅವರಿಗೆ ಸೂಕ್ತ ಗೌರವ ದೊರೆಯುತ್ತಿಲ್ಲ. ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸಲಾಗುತ್ತಿದೆ.  ಕಾಂಗ್ರೆಸ್ ಪಕ್ಷದಲ್ಲಿ ನಿರಾಸೆಯ ಭಾವದಲ್ಲಿ ನರಳುತ್ತಿದೆ ಎಂದು ಟೀಕಿಸಿದರು. ಬೆಳಗಾವಿ ಜನತೆ ನೀಡಿದ ಅಭೂತಪೂರ್ವ ಸ್ವಾಗತಕ್ಕೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಬೆಳಗಾವಿ ಜನತೆ ತೋರಿದ ಅಗಮ್ಯೆ ಪ್ರೀತಿಯನ್ನು ಕರ್ನಾಟಕದ ಅಭಿವೃದ್ಧಿಯ ಮೂಲಕ ಬಡ್ಡಿಸಹಿತ ಋಣ ತೀರಿಸುವುದಾಗಿ ಭರವಸೆ ನೀಡಿದರು.
 
ಬಸವರಾಜ್ ಬೊಮ್ಮಾಯಿ ಮಾತು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿ. ಪ್ರಧಾನಿಯವರಿಗೆ ಕೋರಿದ ರೋಡ್ ಶೋ ಮೂಲಕ ಭವ್ಯ ಸ್ವಾಗತ ಐತಿಹಾಸಿಕವಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ರೈತರಿಗೆ ನೇರವಾಗಿ ಹಣ ಸಂದಾಯವಾಗುವುದು ವಿಶ್ವದಲ್ಲಿಯೇ ಮಾದರಿಯಾಗಿದೆ. ಬೆಳೆವಿಮೆ ಯೋಜನೆಯ ಈ ವರ್ಷ ಅತೀ ಹೆಚ್ಚು ಬಿಡುಗಡೆ ಆಗಿದೆ. ರೈತರಗಾಗಿ ವಿಶೇಷ ಯೋಜನೆಗಳ ಎಂ.ಎಚ್.ಪಿ.  ಜಾರಿಗೊಳಿಸಲಾಗಿದೆ.  ನೂತನ ರೈಲು ನಿಲ್ದಾಣ, ರಾಷ್ಟಿçÃಯ ಹೆದ್ದಾರಿ ನಿರ್ಮಾಣ ದಾಖಲಾರ್ಹ ಕೆಲಸ, ಹುಬ್ಬಳಿ ಅಂಕೋಲ, ಧಾರವಾಡ- ಬೆಳಗಾವಿ ರೈಲು ಮಾರ್ಗ ಶೀಘ್ರದಲ್ಲಿ ನಿರ್ಮಾಣವಾಗಲಿದೆ. ಎಂದು ತಿಳಿಸಿದರು.

ಅನಿಶ್ಚಿತತೆಯಿಂದ ನಿಶ್ವಿತತೆಯತ್ತ ಪ್ರಧಾನಿಯವರು ಸರ್ಕಾರ ಕೈಗೊಂಡು ಹೋಗುತ್ತಿದ್ದಾರೆ.  ಕಳೆದ ಮೂರು ವರ್ಷಗಳಲ್ಲಿ ಹತ್ತುಕೋಟಿ ಮನೆ ಮನೆಗಳಿಗೆ ಕುಡಿಯುವ ನೀರು ಪೂರೈಸುವುದರ ಮೂಲಕ ಆಧುನಿಕ ಭಗೀರತರಾಗಿದ್ದಾರೆ ಪ್ರಧಾನಿ ಆಗಿದ್ದಾರೆ. ಪ್ರಧಾನಿ ಮಂತ್ರಿ ಅವರ ದೂರದೃಷ್ಟಿಯಿಂದ  ಜನಪರ ಕೆಲಸಗಳನ್ನು ಮಾಡುವುದರ ಮೂಲಕ ಜಗತ್ತು ಗಮನಿಸುವಂತೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.

LEAVE A REPLY

Please enter your comment!
Please enter your name here