Home Uncategorized ಪಿಲ್ಲರ್ ದುರಂತದ ಬಳಿಕ ಈಗ ಬ್ರಿಗೇಡ್ ರಸ್ತೆಯಲ್ಲಿ ಸಿಂಕ್ ಹೋಲ್ ಸಮಸ್ಯೆ; ಬೈಕ್ ಸವಾರನಿಗೆ ಗಾಯ 

ಪಿಲ್ಲರ್ ದುರಂತದ ಬಳಿಕ ಈಗ ಬ್ರಿಗೇಡ್ ರಸ್ತೆಯಲ್ಲಿ ಸಿಂಕ್ ಹೋಲ್ ಸಮಸ್ಯೆ; ಬೈಕ್ ಸವಾರನಿಗೆ ಗಾಯ 

22
0
Advertisement
bengaluru

ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು ಇತ್ತೀಚೆಗೆ ಮೆಟ್ರೋ ಪಿಲ್ಲರ್ ಕುಸಿದು ಇಬ್ಬರು ಸಾವನ್ನಪ್ಪಿದ್ದ ಘಟನೆ ಬೆನ್ನಲ್ಲೇ ಬ್ರಿಗೇಡ್ ರಸ್ತೆಯಲ್ಲಿ ಸಿಂಕ್ ಹೋಲ್ (ರಸ್ತೆ ಕುಳಿ) ಸಮಸ್ಯೆ ಎದುರಾಗಿದೆ.  ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು ಇತ್ತೀಚೆಗೆ ಮೆಟ್ರೋ ಪಿಲ್ಲರ್ ಕುಸಿದು ಇಬ್ಬರು ಸಾವನ್ನಪ್ಪಿದ್ದ ಘಟನೆ ಬೆನ್ನಲ್ಲೇ ಬ್ರಿಗೇಡ್ ರಸ್ತೆಯಲ್ಲಿ ಸಿಂಕ್ ಹೋಲ್ (ರಸ್ತೆ ಕುಳಿ) ಸಮಸ್ಯೆ ಎದುರಾಗಿದೆ. 

ಮೆಟ್ರೋ ಹತ್ತಿರವೇ ಇರುವ ಬ್ರಿಗೇಡ್ ರಸ್ತೆಯಲ್ಲಿ ಏಕಾ ಏಕಿ ಸಿಂಕ್ ಹೋಲ್ ಸಮಸ್ಯೆ ಕಾಣಿಸಿಕೊಂಡಿದ್ದು, ಓರ್ವ ದ್ವಿಚಕ್ರ ವಾಹನ ಸವಾರ ಸಿಂಕ್ ಹೋಲ್ ಒಳಗೆ ಬಿದ್ದು ಗಾಯಗೊಂಡಿದ್ದಾರೆ.

#BBMP#Bengaluru‘s prime location Brigade Road big developed sinkhole, biker injured opposite Brigade Towers.@XpressBengaluru,@NewIndianXpress,@BoskyKhanna,@BBMPCOMM,@AshwiniMS_TNIE,@KannadaPrabha,@ramupatil_TNIE pic.twitter.com/u5xTHqyFxk
— Mohammed Yacoob (@yacoobExpress) January 12, 2023

 
ಈ ಘಟನೆ ಹೇಗೆ ನಡೆಯಿತು ಎಂಬುದರ ಬಗ್ಗೆ ಪೊಲೀಸರು ಇನ್ನಷ್ಟೇ ತನಿಖೆ ನಡೆಸಬೇಕಿದೆ. ಗಾಯಗೊಂಡ ವ್ಯಕ್ತಿಯನ್ನು ಫೋರ್ಟಿಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು.

bengaluru bengaluru

ಇದನ್ನೂ ಓದಿ: ತ್ವರಿತಗತಿ ಕಾಮಗಾರಿಯಿಂದ ಅಪಘಾತ ಸಂಭವಿಸಿಲ್ಲ: ಬಿಎಂಆರ್‌ಸಿಎಲ್ ಸ್ಪಷ್ಟನೆ
 
ವರದಿಗಳ ಪ್ರಕಾರ, ಬೈಕರ್ ನ್ನು ಪುನೀತ್ ಎಂದು ಗುರುತಿಸಲಾಗಿದ್ದು, ಮಧ್ಯಾಹ್ನ 12:15 ರ ವೇಳೆಗೆ ಬ್ರಿಗೇಡ್ ಟವರ್ಸ್ ನ ಬಳಿ ಈ ಘಟನೆ ನಡೆದಿದೆ. ಘಟನೆ ನಡೆದ ಸ್ಥಳ ಬಿಬಿಎಂಪಿ ಕೇಂದ್ರ ಕಚೇರಿಗೆ ಒಂದು ಕಿ.ಮೀ ದೂರದಲ್ಲಿ ನಡೆದಿದೆ.

ರಸ್ತೆ ಕುಳಿಗೆ ಬಿದ್ದು ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಬಳಿಕ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಅಶೋಕ್ ನಗರ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬೆನ್ನಲ್ಲೇ ಆ ಪ್ರದೇಶದಲ್ಲಿ ಸಂಚಾರ ದಟ್ಟಣೆ ಹೆಚ್ಚಾಯಿತು, ಆದರೆ ನಾವು ತಕ್ಷಣವೇ ಸಂಚಾರ ಮಾರ್ಗವನ್ನು ಬದಲಾಯಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 
 


bengaluru

LEAVE A REPLY

Please enter your comment!
Please enter your name here