Home Uncategorized ಪೌರಕಾರ್ಮಿಕರಿಗೆ ನಕಲಿ ದಾಖಲೆಗಳನ್ನು ನೀಡಲಾಗಿದೆ, ನಾವು ಮುಷ್ಕರ ನಡೆಸುತ್ತೇವೆ: ಸಂಘ ಆರೋಪ

ಪೌರಕಾರ್ಮಿಕರಿಗೆ ನಕಲಿ ದಾಖಲೆಗಳನ್ನು ನೀಡಲಾಗಿದೆ, ನಾವು ಮುಷ್ಕರ ನಡೆಸುತ್ತೇವೆ: ಸಂಘ ಆರೋಪ

20
0

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹಲವು ವಾರ್ಡ್‌ಗಳಲ್ಲಿ ಒಂದೇ ಕುಟುಂಬದ ಒಬ್ಬರಿಗಿಂತ ಹೆಚ್ಚು ಸದಸ್ಯರನ್ನು ಪೌರಕಾರ್ಮಿಕರಾಗಿ ನೇಮಕ ಮಾಡಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ಪೌರಕಾರ್ಮಿಕರು ಆರೋಪಿಸಿದ್ದಾರೆ.  ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹಲವು ವಾರ್ಡ್‌ಗಳಲ್ಲಿ ಒಂದೇ ಕುಟುಂಬದ ಒಬ್ಬರಿಗಿಂತ ಹೆಚ್ಚು ಸದಸ್ಯರನ್ನು ಪೌರಕಾರ್ಮಿಕರಾಗಿ ನೇಮಕ ಮಾಡಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ಪೌರಕಾರ್ಮಿಕರು ಆರೋಪಿಸಿದ್ದಾರೆ. 

3 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರ ನೇಮಕಾತಿ ಆದೇಶ ರದ್ದುಪಡಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ, ಲಂಚ ನೀಡಿ, ನಿಜವಾದ ಕಾರ್ಮಿಕರಿಗೆ ಅವಕಾಶ ವಂಚಿತರನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 

ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ಆಗ್ರಹಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಕರ್ನಾಟಕ ಪೌರಕಾರ್ಮಿಕ ಸಂಘ ತಿಳಿಸಿದೆ.

ಸಂಘದ ಅಧ್ಯಕ್ಷ ತ್ಯಾಗರಾಜ್, ಬಿಬಿಎಂಪಿಯಲ್ಲಿ ಪೌರಕಾರ್ಮಿಕರ ನೇಮಕಾತಿ ಕುರಿತು ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ನಂತರ, ದಶಕದಿಂದ ಪಾಲಿಕೆಯೊಂದಿಗೆ ಕೆಲಸ ಮಾಡುತ್ತಿರುವ ಅನೇಕ ಸಂಘದ ಸದಸ್ಯರನ್ನು ಕೈಬಿಡಲಾಗಿದೆ. “ಹಲವು ಪ್ರಕರಣಗಳಲ್ಲಿ, ಒಂದೇ ಕುಟುಂಬದ ಸದಸ್ಯರ ಹೆಸರುಗಳು ನೇಮಕಾತಿ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಒಂದು ನಿದರ್ಶನದಲ್ಲಿ ಎಸ್‌ಟಿ ಸಮುದಾಯದ ‘ಬೋಯ’ ಎಂದು ಗುರುತಿಸಲಾದ ಕುಟುಂಬದಲ್ಲಿ 30 ಸದಸ್ಯರನ್ನು ನೇಮಕ ಮಾಡಲಾಗಿದ್ದು, ಇನ್ನೊಂದು ಪ್ರಕರಣದಲ್ಲಿ ಪೌರಕಾರ್ಮಿಕ ನಾರಾಯಣ ಅವರ ಪುತ್ರ ನರೇಶ್ ಅವರನ್ನು ಪಟ್ಟಿಗೆ ಸೇರಿಸಲಾಗಿದೆ. ಆದರೆ, ತಂದೆ-ಮಗನ ಜನ್ಮದಿನಾಂಕದಲ್ಲಿ ಮಗ ತಂದೆಗಿಂತ ಒಂದು ವರ್ಷ ದೊಡ್ಡವನು ಎಂದು ತೋರಿಸಿರುವುದು ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ತ್ಯಾಗರಾಜ್ ಹೇಳಿದರು.

ಇದನ್ನೂ ಓದಿ: ‘ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ’ಯಡಿ 5,188 ಮನೆಗಳ ನಿರ್ಮಾಣ: ರಾಜ್ಯ ಸರ್ಕಾರ

ಪಾಲಿಕೆಗೆ ಸಂಘ ನಿರಾಕ್ಷೇಪಣಾ ಪತ್ರವನ್ನೂ ನೀಡಿತ್ತು. ನಾವು ಬೃಹತ್ ಪ್ರತಿಭಟನೆಯನ್ನು ಪ್ರಾರಂಭಿಸಿ ಕಸ ಸಂಗ್ರಹಿಸದರೆ, ರಸ್ತೆ ಸ್ವಚ್ಛಗೊಳಿಸದೆ ಮುಷ್ಕರ ಮಾಡುತ್ತೇವೆ ಎಂದರು. 

ಗಿರಿನಗರ ವಾರ್ಡ್‌ನ ಪೌರಕಾರ್ಮಿಕರಾದ ಅಂಜನಮ್ಮ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೇಮಕಾತಿ ಆದೇಶ ರದ್ದುಪಡಿಸಿ ತನಿಖೆ ನಡೆಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳದೆ ಬೇರೆ ದಾರಿಯಿಲ್ಲ ಎಂದು ಎಚ್ಚರಿಸಿದರು.

LEAVE A REPLY

Please enter your comment!
Please enter your name here