Home Uncategorized ಪ್ರೇಮ ವೈಫಲ್ಯ: ಮನನೊಂದು ಎಂಎಸ್ ರಾಮಯ್ಯ ಆಸ್ಪತ್ರೆಯ ದಂತ ವೈದ್ಯೆ ಆತ್ಮಹತ್ಯೆಗೆ ಶರಣು!

ಪ್ರೇಮ ವೈಫಲ್ಯ: ಮನನೊಂದು ಎಂಎಸ್ ರಾಮಯ್ಯ ಆಸ್ಪತ್ರೆಯ ದಂತ ವೈದ್ಯೆ ಆತ್ಮಹತ್ಯೆಗೆ ಶರಣು!

8
0
bengaluru

ನಗರದ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಂತ ವೈದ್ಯೆಯಾಗಿದ್ದ ಪ್ರಿಯಾಂನ್ಷಿ ತ್ರಿಪಾಠಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು: ನಗರದ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಂತ ವೈದ್ಯೆಯಾಗಿದ್ದ ಪ್ರಿಯಾಂನ್ಷಿ ತ್ರಿಪಾಠಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಉತ್ತರಪ್ರದೇಶದ ಲಖನೌ ಮೂಲದ ಪ್ರಿಯಾಂನ್ಷಿ 25ರಂದು ಬೆಂಗಳೂರಿನ ಸಂಜಯನಗರದಲ್ಲಿ ಆತ್ಮಹತ್ಯೆ ಮಾಡಿದ್ದಾರೆ. ಪ್ರಿಯಾಂನ್ಷಿ ತ್ರಿಪಾಠಿ ವೈದ್ಯ ಸುಮಿತ್ ಎಂಬಾತನನ್ನು ಪ್ರೀತಿಸುತ್ತಿದ್ದು ಅದನ್ನು ಪ್ರಿಯಕರನ ಮುಂದೆ ಹೇಳಿಕೊಂಡಿದ್ದಾಳೆ. ಇದಕ್ಕೆ ಸುಮಿತ್ ನಿರಾಕರಿಸಿದ್ದು ಈ ಹಿನ್ನೆಲೆಯಲ್ಲಿ ಪ್ರಿಯಾಂನ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಈ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಿಯಾಂನ್ಷಿ ತಂದೆ ದೂರು ದಾಖಲಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ನನ್ನ ಮಗಳಿಗೆ ಸುಮಿತ್ ಮದ್ಯಪಾನ ಮಾಡುವಂತೆ, ಸಿಗರೇಟ್ ಸೇದುವಂತೆ ಒತ್ತಾಯಿಸುತ್ತಾ ಹಿಂಸೆ ಕೊಡುತ್ತಿದ್ದನು. ಇದರ ಜೊತೆಗೆ ಹಣಕ್ಕಾಗಿ ಒತ್ತಾಯಿಸಿದ್ದನು. ಈ ವಿಷಯವನ್ನು ಮಗಳು ಹೇಳಿದಾಗ ನಾನು ಆತನಿಗೆ ಕರೆ ಮಾಡಿ ತೊಂದರೆ ಕೊಂಡದಂತೆ ಮನವಿ ಮಾಡಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ; ಪ್ರಿಯತಮೆಯ ಚಿಕ್ಕಪ್ಪ ಸೇರಿ ನಾಲ್ವರ ಬಂಧನ 

bengaluru

ಆದರೆ ಈ ಬಗ್ಗೆ ತನಿಖೆಕೈಗೊಂಡಿದ್ದ ಪೊಲೀಸರಿಗೆ ಕೆಲ ಮಾಹಿತಿ ಸಿಕ್ಕಿದೆ. ಅದರಂತೆ ಯುವತಿಯೇ ಆತನನ್ನ ಪ್ರೀತಿಸುತ್ತಿದ್ದು ಆತ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಳಿಕ ದೂರು ವಾಪಸ್ ಪಡೆಯುವುದಾಗಿ ಪ್ರಿಯಾಂನ್ಷಿ ತಂದೆ ಕೇಳಿದ್ದಾರೆ. ಆದರೆ ಪ್ರಕರಣದ ತನಿಖೆ ಹಿನ್ನಲೆ ಎಫ್​ಐಆರ್ ದಾಖಲಿಸಿದ್ದ ಕಾರಣ ಪೊಲೀಸರು ಯುವತಿ ಪ್ರೇಮವೈಫಲ್ಯ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿ ನೀಡಿದ್ದಾರೆ.

bengaluru

LEAVE A REPLY

Please enter your comment!
Please enter your name here