Home Uncategorized ಬಜೆಟ್ 2023: ವೃತ್ತಿಪರ ತೆರಿಗೆ ವಿನಾಯಿತಿ ಮಿತಿ 15 ರಿಂದ 25 ಸಾವಿರಕ್ಕೆ ಏರಿಕೆ

ಬಜೆಟ್ 2023: ವೃತ್ತಿಪರ ತೆರಿಗೆ ವಿನಾಯಿತಿ ಮಿತಿ 15 ರಿಂದ 25 ಸಾವಿರಕ್ಕೆ ಏರಿಕೆ

9
0
bengaluru

ಕಡಿಮೆ ಆದಾಯದವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವೃತ್ತಿಪರ ತೆರಿಗೆ (Profession Tax) ಯನ್ನು 15 ಸಾವಿರದಿಂದ 25 ಸಾವಿರಕ್ಕೆ ಏರಿಕೆ ಮಾಡಿರುವುದಾಗಿ ಬಜೆಟ್ ಮಂಡನೆ ವೇಳೆ ಘೋಷಿಸಿದ್ದಾರೆ.  ಬೆಂಗಳೂರು: ಕಡಿಮೆ ಆದಾಯದವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವೃತ್ತಿಪರ ತೆರಿಗೆ (Profession Tax) ಯನ್ನು 15 ಸಾವಿರದಿಂದ 25 ಸಾವಿರಕ್ಕೆ ಏರಿಕೆ ಮಾಡಿರುವುದಾಗಿ ಬಜೆಟ್ ಮಂಡನೆ ವೇಳೆ ಘೋಷಿಸಿದ್ದಾರೆ. 

ವೃತ್ತಿಪರ ತೆರಿಗೆ ವಿನಾಯಿತಿ ಮಿತಿ ಏರಿಕೆಯಿಂದಾಗಿ ಕಡಿಮೆ ವರಮಾನದ ವರ್ಗಕ್ಕೆ ಅನುಕೂಲವಾಗಲಿದೆ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ 2023: ರೈತ ಸ್ನೇಹಿ ಯೋಜನೆಗಳು, ಸಾಲದ ಅವಧಿಯ ಮಿತಿ, ಕೃಷಿ ಸಬ್ಸಿಡಿ ಹೆಚ್ಚಳ; ಬಜೆಟ್ ನಲ್ಲಿ ಏನೇನಿದೆ?
 
25 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವವರಿಂದ ವೃತ್ತಿಪರ ತೆರಿಗೆ ಪಡೆಯಲಾಗುವುದಿಲ್ಲ. 25 ಸಾವಿರ ರೂಗಿಂತ ಹೆಚ್ಚು ಸಂಬಳ ಪಡೆಯುವವರು 200 ರೂ ವೃತ್ತಿ ತೆರಿಗೆ ಪಾವತಿಸಬೇಕಾಗುತ್ತದೆ.

ತೆರಿಗೆ ಕುರಿತು ಬಜೆಟ್ ನಲ್ಲಿ ಪ್ರಸ್ತಾಪವಾದ ಅಂಶಗಳು ಹೀಗಿವೆ… 

bengaluru

ರಾಜ್ಯದಲ್ಲಿ ಜಿಎಸ್​ಟಿ ಸಂಗ್ರಹ ಗಣನೀಯವಾಗಿ ಹೆಚ್ಚಿದೆ. 2022-23ರ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ಸಿಗುವ ಜಿಎಸ್​ಟಿ ಪರಿಹಾರ ಸೇರಿ ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹವು 93,558 ಕೋಟಿ ರೂ ಎಂದು ಅಂದಾಜು ಮಾಡಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯು ಜಿಎಸ್​ಟಿ ಪರಿಹಾರ ಹೊರತುಪಡಿಸಿ 72,010 ಕೋಟಿ ರೂ ಗುರಿ ಹೊಂದಿತ್ತು. ಇದನ್ನು ಮೀರಿ 83,010 ಕೋಟಿ ರೂ ಸಂಗ್ರಹ ಮಾಡಲಾಗುತ್ತಿದೆ. ಕೇಂದ್ರದಿಂದ ಜಿಎಸ್​ಟಿ ಪರಿಹಾರವಾಗಿ 10,548 ಕೋಟಿ ರೂ ಸಿಗಲಿದೆ.

2023-24 ರ ಸಾಲಿನ ವರ್ಷಕ್ಕೆ ಜಿಎಸ್​ಟಿ ಪರಿಹಾರ ಹೊರತುಪಡಿಸಿ 92,000 ಕೋಟಿ ರೂ ತೆರಿಗೆ ಸಂಗ್ರಹಿಸಬೇಕೆಂದು ವಾಣಿಜ್ಯ ಇಲಾಖೆಗೆ ಗುರಿ ಕೊಡಲಾಗಿದೆ.

bengaluru

LEAVE A REPLY

Please enter your comment!
Please enter your name here