Home Uncategorized ಬನಶಂಕರಿ ದೇವಾಲಯಕ್ಕೆ ಕಂದಾಯ ಇಲಾಖೆ ನಮಗೆ ಭೂಮಿ ನೀಡಿತ್ತು: ಕೇಂದ್ರ ಉಪಾಧ್ಯಾಯರ ಸಂಘ

ಬನಶಂಕರಿ ದೇವಾಲಯಕ್ಕೆ ಕಂದಾಯ ಇಲಾಖೆ ನಮಗೆ ಭೂಮಿ ನೀಡಿತ್ತು: ಕೇಂದ್ರ ಉಪಾಧ್ಯಾಯರ ಸಂಘ

36
0

ಅಕ್ರಮವಾಗಿ ದೇವಸ್ಥಾನದ ಆಸ್ತಿಯ ಮೇಲೆ ಹಕ್ಕು ಸಾಧಿಸುತ್ತಿದ್ದಾರೆಂಬ ಬನಶಂಕರಿ ದೇವಸ್ಥಾನ ಸಮಿತಿಯ ಆರೋಪವನ್ನು ಕೇಂದ್ರ ಉಪಾಧ್ಯಾಯರ ಸಂಘ ತಳ್ಳಿಹಾಕಿದ್ದು, 1984ರಲ್ಲಿ ಕಂದಾಯ ಇಲಾಖೆಯ ಸಹಾಯಕ ಆಯುಕ್ತರಿಂದ ಜಮೀನು ಮಂಜೂರಾಗಿದೆ ಎಂದು ಹೇಳಿದೆ. ಬೆಂಗಳೂರು: ಅಕ್ರಮವಾಗಿ ದೇವಸ್ಥಾನದ ಆಸ್ತಿಯ ಮೇಲೆ ಹಕ್ಕು ಸಾಧಿಸುತ್ತಿದ್ದಾರೆಂಬ ಬನಶಂಕರಿ ದೇವಸ್ಥಾನ ಸಮಿತಿಯ ಆರೋಪವನ್ನು ಕೇಂದ್ರ ಉಪಾಧ್ಯಾಯರ ಸಂಘ ತಳ್ಳಿಹಾಕಿದ್ದು, 1984ರಲ್ಲಿ ಕಂದಾಯ ಇಲಾಖೆಯ ಸಹಾಯಕ ಆಯುಕ್ತರಿಂದ ಜಮೀನು ಮಂಜೂರಾಗಿದೆ ಎಂದು ಹೇಳಿದೆ.

ಈ ಸಂಬಂಧ ಮುಜರಾತಿ ಇಲಾಖೆಗೆ ದೂರು ನೀಡಿರುವುದಾಗಿಯೂ ಸಂಘ ಹೇಳಿಕೊಂಡಿದೆ. ಜರಗನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 63/2 ಮತ್ತು 63/3ರಲ್ಲಿ ಒಪ್ಪಿಗೆ ಸೂಚಿಸಿದ 2,31,250 ರೂ.ಗಳನ್ನು ಈಗಾಗಲೇ ಎರಡು ಕಂತುಗಳಲ್ಲಿ ಪಾವತಿಸಲಾಗಿದೆ. ನಂತರ ಹಕ್ಕುಗಳು, ಹಿಡುವಳಿ ಮತ್ತು ಇತರೆ ದಾಖಲೆಗಳನ್ನು (ಆರ್‌ಟಿಸಿ) ನೀಡಲಾಯಿತು, ಆಸ್ತಿ ಸಂಘಕ್ಕೆ ಸೇರಿದ್ದಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಲೇಔಟ್ ರಚನೆಗೆ ಎರಡು ಬಾರಿ ಅಧಿಸೂಚನೆ ಹೊರಡಿಸಿದಾಗಲೂ ಸಂಘವು ಅದನ್ನು ಪ್ರಶ್ನಿಸಿ, ಹಕ್ಕು ತಮಗೇ ಸೇರಿದ್ದು ಎಂದು ಪ್ರಶ್ನಿಸಿ, ಪ್ರಕ್ರಿಯೆ ಸ್ಥಗಿತಗೊಳಿಸಿತ್ತು ಎಂದು ತಿಳಿಸಿದೆ.

“ನಮ್ಮನ್ನು ಈಗ ಭೂಗಳ್ಳರೆಂದು ಬಿಂಬಿಸಲಾಗುತ್ತಿದೆ. ಜಮೀನು ಸಂಘಕ್ಕೆ ಸೇರಿದ್ದು ಎಂಬುದನ್ನು ಸ್ಥಾಪಿಸಲು ದಾಖಲೆಗಳನ್ನು ತೋರಿಸುತ್ತೇವೆ’’ ಎಂದು ಕೇಂದ್ರ ಉಪಾಧ್ಯಾಯರ ಸಂಘದ ಅಧ್ಯಕ್ಷ ನಂಜೇಶ್ ಗೌಡ ಅವರು ಹೇಳಿದ್ದಾರೆ.

ಮುಜರಾಯಿ ಇಲಾಖೆ ಅಧಿಕಾರಿಗಳು ಮಾತನಾಡಿ, ಸಂಘವು ತಮ್ಮನ್ನು ಸಂಪರ್ಕಿಸಿರುವುದನ್ನು ದೃಢಪಡಿಸಿದೆ.

ಪರಿಶೀಲನೆಗಾಗಿ ಎಲ್ಲ ದಾಖಲೆಗಳನ್ನು ಒದಗಿಸುವಂತೆ ಸಂಘಕ್ಕೆ ಸೂಚಿಸಲಾಗಿದೆ. ದಾಖಲೆಗಳನ್ನು ಪರಿಶೀಲಿಸಿ, ಮುಂದಿನ ಕ್ರಮಗಳ ಕುರಿತು ನಿರ್ಧರಿಸುತ್ತೇವೆಂದು ತಿಳಿಸಿದ್ದಾರೆ.

ವಿವಾದದ ನಂತರ 3 ಎಕರೆ 26 ಗುಂಟಾಗಳಲ್ಲಿರುವ ದೇವಾಲಯದ ಗಡಿಯನ್ನು ಮುಜರಾಯಿ ಅಧಿಕಾರಿಗಳು ಕಾವಲು ಕಾಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬನಶಂಕರಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಎಚ್.ಬಸವರಾಜು ಮಾತನಾಡಿ, ಭೂಮಿ ವಿವಾದಲ್ಲಿ ಈಗಷ್ಟೇ ಸಂಘ ಕಾಣಿಸಿಕೊಳ್ಳುತ್ತಿದೆ. ಆದರೆ ಜರಗನಹಳ್ಳಿ ಗ್ರಾಮದ ದೇವಸ್ಥಾನದ ನಿವೇಶನ ಸೇರಿದಂತೆ 141 ಎಕರೆ ಭೂಮಿಯನ್ನು 1935ರಲ್ಲಿ ಭೂಮಾಲೀಕರಾದ ಬಸಪ್ಪ ಶ್ಯಾಟ್ಟರ್ ಮತ್ತು ಶಂಕ್ರಪ್ಪ ಶೆಟ್ಟರ್ ಅವರು ಸರ್ಕಾರಕ್ಕೆ ದಾನ ಮಾಡಿದ್ದಾರೆ. “ನಾವು ಸಂಘದಿಂದ ದಾಖಲೆಗಳನ್ನು ಕೂಡ ಪರಿಶೀಲಿಸುತ್ತೇವೆ. ಪ್ರಸ್ತುತ ವಿವಾದಿತ ಭೂಮಿಯಲ್ಲಿ ಕಾವಲು ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here