Home Uncategorized ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ: ಶಿವಾನಂದ ಪಾಟೀಲ್

ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ: ಶಿವಾನಂದ ಪಾಟೀಲ್

6
0
bengaluru

ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆಂದು ಮಾಜಿ ಸಚಿವ, ಬಸವನಬಾಗೇವಾಡಿ ತಾಲೂಕಿನ ಕಾಂಗ್ರೆಸ್‌ ಶಾಸಕ ಶಿವಾನಂದ ಪಾಟೀಲ್ ಅವರು ಹೇಳಿದ್ದಾರೆ. ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆಂದು ಮಾಜಿ ಸಚಿವ, ಬಸವನಬಾಗೇವಾಡಿ ತಾಲೂಕಿನ ಕಾಂಗ್ರೆಸ್‌ ಶಾಸಕ ಶಿವಾನಂದ ಪಾಟೀಲ್ ಅವರು ಹೇಳಿದ್ದಾರೆ.

ಬಬಲೇಶ್ವರ ನನ್ನ ಹಳೆಯ ಕ್ಷೇತ್ರ. ಈ ಹಿಂದೆ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಕೆಲವು ಅನಿವಾರ್ಯ ಕಾರಣಗಳಿಂದ ಅದನ್ನು ತೊರೆಯಬೇಕಾಯಿತು, ಅದಕ್ಕೆ ಇಂದಿಗೂ ವಿಷಾದಿಸುತ್ತೇನೆಂದು ಹೇಳಿದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಬಲೇಶ್ವರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ. ಆದರೆ, ನಾನು ಎಲ್ಲಿಂದ ಸ್ಪರ್ಧಿಸಬೇಕೆಂಬುದನ್ನು ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ. ಅವರ ನಿರ್ಧಾರಕ್ಕೆ ತಲೆ ಬಾಗುತ್ತೇನೆಂದು ತಿಳಿಸಿದ್ದಾರೆ.

ಇದೇ ವೇಳೆ ಬಸವನಬಾಗೇವಾಡಿಯಿಂದ ಎಂ.ಬಿ.ಪಾಟೀಲ್ ಸ್ಪರ್ಧಿಸಿದರೆ ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.

bengaluru

ಎಂಬಿ ಪಾಟೀಲ್ ಅವರನ್ನು ಇದೇ ವೇಳೆ ಬಸವನಬಾಗೇವಾಡಿಯಿಂದ ಎಂ.ಬಿ.ಪಾಟೀಲ್ ಸ್ಪರ್ಧಿಸಿದರೆ ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು. ಎಂಬಿ.ಪಾಟೀಲ್ ಅವರನ್ನು ಅವರನ್ನು ಪೂರ್ಣ ಹೃದಯದಿಂದ ಸ್ವಾಗತಿಸುವುದಲ್ಲದೆ, ಅವರ ಗೆಲುವಿಗಾಗಿ ಪ್ರಚಾರ ಮಾಡುತ್ತೇನೆಂದು ತಿಳಿಸಿದರು.

ಬಳಿಕ ಬಸವನಬಾಗೇವಾಡಿ, ವಿಜಯಪುರ ಮತ್ತು ಬಬಲೇಶ್ವರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿರುವುದನ್ನು ಪಾಟೀಲ್ ಅವರು, ಒಪ್ಪಿಕೊಂಡಿದ್ದಾರೆ.

ಬಬಲೇಶ್ವರ ವಿಧಾನಸಭಾ ಕ್ಷೇತ್ರವನ್ನು ಈಗಾಗಲೇ ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಅವರು ಪ್ರತಿನಿಧಿಸುತ್ತಿದ್ದಾರೆ.

bengaluru

LEAVE A REPLY

Please enter your comment!
Please enter your name here