Home Uncategorized ಬರ ಘೋಷಣೆ ಮಾನದಂಡ ಬದಲು, ಕೇಂದ್ರಕ್ಕೆ ಸಿಎಂ ಪತ್ರ

ಬರ ಘೋಷಣೆ ಮಾನದಂಡ ಬದಲು, ಕೇಂದ್ರಕ್ಕೆ ಸಿಎಂ ಪತ್ರ

12
0

ಬರ ಘೋಷಣೆ ಮಾನದಂಡ ಬದಲು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.  ಬೆಂಗಳೂರು: ಬರ ಘೋಷಣೆ ಮಾನದಂಡ ಬದಲು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ. 

ರಾಜ್ಯದಲ್ಲಿ ಮಳೆ ಕೊರತೆಯಿಂದ ಹಲವು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಈ ತಾಲೂಕುಗಳ ಬರ ಘೋಷಣೆಗೆ ಈಗಿರುವ ನಿಯಮಗಳು ಅಡ್ಡಿಯಾಗಿವೆ ಹಾಗಾಗಿ ಬರ ಘೋಷಣೆಯ ಮಾನದಂಡಗಳನ್ನು ಬದಲಿಸುವಂತೆ ಸಿಎಂ ಆಗ್ರಹಿಸಿದ್ದಾರೆ.. 

ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಗೆ ಸಿಎಂ ಪತ್ರ ಬರೆದಿದ್ದು, ಈಗಿನ ನಿಯಮಗಳ ಪ್ರಕಾರ, ರಾಜ್ಯದಲ್ಲಿ ಬರ ಪೀಡಿತ ಪ್ರದೇಶಗಳ ಘೋಷಣೆ ಮಾಡಿದರೆ ರೈತರು ಬೆಳೆ ವೈಫಲ್ಯದ ಸಂದರ್ಭದಲ್ಲಿ ಇನ್ ಪುಟ್ ಸಬ್ಸಿಡಿಗಳನ್ನು ಕಳೆದುಕೊಳ್ಳುತ್ತಾರೆ ಹೀಗಾಗಿ ನಿಯಮಗಳನ್ನು ಬದಲಿಸಬೇಕು ಎಂದು ಪತ್ರದಲ್ಲಿ ಸಿಎಂ ತಿಳಿಸಿದ್ದಾರೆ. 

ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿದ್ದು, ಕರ್ನಾಟಕದಲ್ಲಿ 336 ಮಿ.ಮೀ ಸಾಮಾನ್ಯ ಮಳೆಯಾಗಬೇಕಿತ್ತು.ಆದರೆ 234 ಮಿ.ಮೀ ಮಳೆ ದಾಖಲಿಸಿದೆ. ಮಳೆ ಕೊರತೆಯಾಗಿದೆ. ದುರ್ಬಲ ಮಾನ್ಸೂನ್‌ನಿಂದ ಜೂನ್‌ನಲ್ಲಿ ಶೇ.56 ರಷ್ಟು ಮಳೆ ಕೊರತೆಯಾಗಿದ್ದು, ರಾಜ್ಯದ ಹಲವಾರು ತಾಲ್ಲೂಕುಗಳಲ್ಲಿ ಬರಗಾಲದ ಪರಿಸ್ಥಿತಿದೆ. ಆದರೆ ಈಗಿರುವ ನಿಯಮಾವಳಿಗಳ ಪ್ರಕಾರ ಬರ ಘೋಷಿಸಲು ಆಗುತ್ತಿಲ್ಲ. ಹಾಗಾಗಿ, ಬರ ಘೋಷಣೆಯ ಮಾನದಂಡಗಳನ್ನು ಬದಲಿಸಲು ಮಧ್ಯಪ್ರವೇಶಿಸಬೇಕು ಎಂದು ಅವರು ಕೇಂದ್ರದ ಕೃಷಿ ಸಚಿವರನ್ನು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರವು ಬರ ಘೋಷಣೆಯ ಮಾನದಂಡಗಳನ್ನು ಬದಲಿಸುವ ವಿಶ್ವಾಸವಿದೆ ರತರ ಸಂಕಷ್ಟ ನಿವಾರಣೆಯ ಜತೆಗೆ ರೈತರಿಗೆ ಸಕಾಲಿಕ ಸಹಾಯವನ್ನು ನೀಡಲು ಸಾಧ್ಯವಾಗುತ್ತದೆ. ಹಾಗೆಯೇ ಬರಪೀಡಿತ ಪರದೇಶಗಳಲ್ಲಿನ ಜನರ ಯೋಗಕ್ಷೇಮದ ಬದ್ಧತೆಯನ್ನು ಪ್ರದರ್ಶಿಸಿದಂತಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here