Home Uncategorized ಬಳ್ಳಾರಿ ಉತ್ಸವಕ್ಕೆ ಹಾಡಲು ಬಂದ ತೆಲುಗು ಮೂಲದ ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ-ಮೇಕಪ್...

ಬಳ್ಳಾರಿ ಉತ್ಸವಕ್ಕೆ ಹಾಡಲು ಬಂದ ತೆಲುಗು ಮೂಲದ ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ-ಮೇಕಪ್ ರೂಂಗೆ ನುಗ್ಗಿ ದಾಂಧಲೆ ಮಾಡಿದ ಪುಂಡರು

9
0
bengaluru

ತೆಲುಗು ಮೂಲದ ಇತ್ತೀಚೆಗೆ ಕನ್ನಡದಲ್ಲಿಯೂ ಖ್ಯಾತಿ ಗಳಿಸುತ್ತಿರುವ ಗಾಯಕಿ ಮಂಗ್ಲಿ ಕಾರಿನ ಮೇಲೆ ಬಳ್ಳಾರಿಯಲ್ಲಿ ಕಳೆದ ರಾತ್ರಿ ಕಲ್ಲು ತೂರಾಟ ನಡೆದ ಘಟನೆ ನಡೆದಿದೆ. ಬಳ್ಳಾರಿ: ತೆಲುಗು ಮೂಲದ ಇತ್ತೀಚೆಗೆ ಕನ್ನಡದಲ್ಲಿಯೂ ಖ್ಯಾತಿ ಗಳಿಸುತ್ತಿರುವ ಗಾಯಕಿ ಮಂಗ್ಲಿ ಕಾರಿನ ಮೇಲೆ ಬಳ್ಳಾರಿಯಲ್ಲಿ ಕಳೆದ ರಾತ್ರಿ ಕಲ್ಲು ತೂರಾಟ ನಡೆದ ಘಟನೆ ನಡೆದಿದೆ.

ನಿನ್ನೆ ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಳ್ಳಾರಿ ಉತ್ಸವ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಬಳ್ಳಾರಿ ಉತ್ಸವದಲ್ಲಿ ಹಾಡಲೆಂದು ಸಿಂಗರ್ ಮಂಗ್ಲಿ ಬಂದಿದ್ದರು. ಉತ್ಸವದಲ್ಲಿ ಹಾಡು ಮುಗಿಸಿ ವೇದಿಕೆಯ ಹಿಂಭಾಗಕ್ಕೆ ಹೋಗುವಾಗ ಕಾರ್ಯಕ್ರಮಕ್ಕೆ ಬಂದಿದ್ದ ಜನರು ಅವರನ್ನು ನೋಡಲು ಮುಗಿಬಿದ್ದಿದ್ದರು.

ವಿಶೇಷವಾಗಿ ಯುವಕರ ದಂಡು ಮಂಗ್ಲಿ ಅವರನ್ನು ಕಾಣಲು ಮುಗಿಬಿದ್ದಿದ್ದರು. ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ ಟೆಂಟ್ ಗೂ ಯುವಕರು ನುಗ್ಗಿ ಬಂದಿದ್ದರು. ಈ ರೀತಿ ಯುವಕರು ನುಗ್ಗಿ ಬಂದ ಕೂಡಲೇ ಅಲ್ಲಿ ಗದ್ದಲವುಂಟಾಯಿತು. ಆಗ ಪೊಲೀಸರು ಧಾವಿಸಿ ಯುವಕರಿಗೆ ಲಘು ಲಾಟಿ ಪ್ರಹಾರ ಮಾಡಿದ್ದಾರೆ. 

ಕೊನೆಗೆ ಮಂಗ್ಲಿಯವರು ತಮ್ಮ ಕಾರಿಗೆ ಹತ್ತಿ ಅಲ್ಲಿಂದ ಹೊರಟು ಹೋಗುವಾಗ ಪುಂಡರು ಅವರ ಕಾರಿಗೆ ಕಲ್ಲೆಸೆದಿದ್ದಾರೆ. ಕಲ್ಲು ಎಸೆದ ರಭಸಕ್ಕೆ ಕಾರಿನ ಗ್ಲಾಸುಗಳು ಪುಡಿಯಾಗಿವೆ. 

bengaluru

ಇತ್ತೀಚೆಗೆ ಮಂಗ್ಲಿ ಚಿಕ್ಕಬಳ್ಳಾಪುರ ಉತ್ಸವಕ್ಕೆ ಹಾಡಲು ಬಂದಿದ್ದರು. ಆಗ ಮಂಗ್ಲಿಯವರನ್ನು ನಿರೂಪಕಿ ಅನುಶ್ರೀ ಕನ್ನಡದಲ್ಲಿ ನಾಲ್ಕು ಸಾಲು ಮಾತನಾಡಿ ಎಂದು ಕೇಳಿದ್ದಕ್ಕೆ ಕನ್ನಡದಲ್ಲಿ ಯಾಕೆ ಮಾತನಾಡಬೇಕು, ಚಿಕ್ಕಬಳ್ಳಾಪುರ ಜನತೆಗೆ ತೆಲುಗು ಅರ್ಥವಾಗುತ್ತದೆ, ನಾನು ತೆಲುಗಿನಲ್ಲಿಯೇ ಹಾಡುತ್ತೇನೆ, ಮಾತನಾಡುತ್ತೇನೆ ಎಂದಿದ್ದರು. ಅದು ಹಲವು ಕನ್ನಡಿಗರಿಗೆ ಇಷ್ಟವಾಗಿರಲಿಲ್ಲ. 

ಗಾಯಕಿ ಮಂಗ್ಲಿ ಇದೀಗ ಬಹುಭಾಷೆಯ ಸಿನಿಮಾಗಳಿಗೆ ಹಾಡುತ್ತಾರೆ. ಮಂಗ್ಲಿಗೆ ಅವರದ್ದೇ ಆದ ಅಪಾರ ಅಭಿಮಾನಿಗಳ ಬಳಗವೇ ಇದೆ. ಅದರಂತೆ ಕರ್ನಾಟಕದಲ್ಲೂ ಮಂಗ್ಲಿ ಗಾಯನಕ್ಕೆ ಫಿದಾ ಆಗಿದ್ದಾರೆ. 

bengaluru

LEAVE A REPLY

Please enter your comment!
Please enter your name here