Home Uncategorized ಬಾಗಲಕೋಟೆ: ಮೂವರು ಹೆಣ್ಣು ಮಕ್ಕಳನ್ನು ಬೆಳೆಸುವುದು ಕಷ್ಟ; ಪುತ್ರಿಯರಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ ತಾಯಿ

ಬಾಗಲಕೋಟೆ: ಮೂವರು ಹೆಣ್ಣು ಮಕ್ಕಳನ್ನು ಬೆಳೆಸುವುದು ಕಷ್ಟ; ಪುತ್ರಿಯರಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ ತಾಯಿ

17
0

ಮಾವಿನಹಣ್ಣಿನ ರಸದಲ್ಲಿ ರಾಸಾಯನಿಕ ಬೆರೆಸಿ ತನ್ನ ಮೂರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ನಂತರ ತಾಯಿಯೂ ಅದೇ ವಿಷದ ಪಾನಿಯವನ್ನು ಕುಡಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ಬಾಗಲಕೋಟೆ: ಮಾವಿನಹಣ್ಣಿನ ರಸದಲ್ಲಿ ರಾಸಾಯನಿಕ ಬೆರೆಸಿ ತನ್ನ ಮೂರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ನಂತರ ತಾಯಿಯೂ ಅದೇ ವಿಷದ ಪಾನಿಯವನ್ನು ಕುಡಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೃತರನ್ನು 28 ವರ್ಷದ ತಾಯಿ ರೇಖಾ ಬಗಲಿ, ಮಕ್ಕಳಾದ 7 ವರ್ಷದ ಸನ್ನಿಧಿ, 4 ವರ್ಷದ ಸಮೃದ್ಧಿ ಹಾಗೂ 2 ವರ್ಷದ ಶ್ರೀನಿಧಿ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ವಿಜಯನಗರ: ಕಲುಷಿತ ನೀರು ಸೇವಿಸಿ ಮಹಿಳೆ ಸಾವು, ಹಲವರು ಅಸ್ವಸ್ಥ

ಮಾನಸಿಕವಾಗಿ ಬಳಲಿದ್ದ ರೇಖಾ ಈ ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಮೂರು ಜನ ಹೆಣ್ಣು ಮಕ್ಕಳಿದ್ದ ಕಾರಣ ಮಕ್ಕಳ‌ ಬೆಳೆಸೋದು, ಓದಿಸೋದು ಮತ್ತು ಮುಂದೆ ಅವರ ಮದುವೆ ಹೇಗೆ ಎಂಬ ಚಿಂತೆ ಆಕೆಯನ್ನು ಕಾಡುತ್ತಿತ್ತು. ಕೊನೆಗೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಬಾಗಲಕೋಟೆ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here