Home Uncategorized ಬಿಎಂಟಿಸಿ ಬಸ್ ನಲ್ಲಿ 21.97 ಲಕ್ಷ ಮಹಿಳೆಯರು ಉಚಿತ ಪ್ರಯಾಣ!

ಬಿಎಂಟಿಸಿ ಬಸ್ ನಲ್ಲಿ 21.97 ಲಕ್ಷ ಮಹಿಳೆಯರು ಉಚಿತ ಪ್ರಯಾಣ!

34
0

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಿಎಂಟಿಸಿ ನೀಡಿದ್ದ ಉಚಿತ ಪ್ರಯಾಣ ಅವಕಾಶವನ್ನು ಸುಮಾರು 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಳಸಿಕೊಂಡಿದ್ದಾರೆ. ಬುಧವಾರ 21.97 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ಬಿಎಂಟಿಸಿ ತಿಳಿಸಿದೆ. ಇದು ಬಸ್ ನಿಗಮದ ನಿರೀಕ್ಷೆಗಿಂತ ಸುಮಾರು 2 ಲಕ್ಷ ಹೆಚ್ಚಾಗಿದೆ.  ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಿಎಂಟಿಸಿ ನೀಡಿದ್ದ ಉಚಿತ ಪ್ರಯಾಣ ಅವಕಾಶವನ್ನು ಸುಮಾರು 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಳಸಿಕೊಂಡಿದ್ದಾರೆ. ಬುಧವಾರ 21.97 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ಬಿಎಂಟಿಸಿ ತಿಳಿಸಿದೆ. ಇದು ಬಸ್ ನಿಗಮದ ನಿರೀಕ್ಷೆಗಿಂತ ಸುಮಾರು 2 ಲಕ್ಷ ಹೆಚ್ಚಾಗಿದೆ. 

20 ಲಕ್ಷ ಮಹಿಳೆಯರು ಈ ಸೇವೆಯನ್ನು ಬಳಸಿಕೊಂಡರೆ ಒಟ್ಟಾರೇ ಸರ್ಕಾರಕ್ಕೆ 8.17 ಕೋಟಿ ರೂ. ವೆಚ್ಚ ತಗುಲಿದೆ ಎಂದು ಬಿಎಂಟಿಸಿ ಅಂದಾಜಿಸಿತ್ತು. ಆದರೆ, ಬುಧವಾರ ಉಚಿತ ಪ್ರಯಾಣದ ಕೊಡುಗೆಯಿಂದ ಆಗಿರುವ ನಷ್ಟದ ಬಗ್ಗೆ ಬಿಎಂಟಿಸಿ ಮಾಹಿತಿ ನೀಡಿಲ್ಲ.   ಬುಧವಾರ ಪುರುಷರು ಸೇರಿದಂತೆ ಒಟ್ಟಾರೇ 33.37 ಲಕ್ಷ ಪ್ರಯಾಣಿಕರು ಬಿಎಂಟಿಸಿ ಬಸ್ ನಲ್ಲಿ ಸಂಚರಿಸಿದ್ದಾರೆ. ಈ ಪೈಕಿ ಪಶ್ಚಿಮ ವಿಭಾಗದಲ್ಲಿ ಅತಿ 5, 15,988 ಮಂದಿ ಪ್ರಯಾಣಿಸಿದರೆ, ಉತ್ತರ ವಿಭಾಗದಲ್ಲಿ 4,73,596 ಮಂದಿ ಪ್ರಯಾಣಿಸಿದ್ದಾರೆ. 

ಇಂದು ಬಸ್ ಟರ್ಮಿನಲ್ ಕಾರ್ಯಾರಂಭ: ಫೆ.24ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದ ಕಲಾಸಿಪಾಳ್ಯ ಬಸ್ ನಿಲ್ದಾಣ ಇಂದಿನಿಂದ ಕಾರ್ಯಾರಂಭ ಮಾಡಲಿದೆ. 64 ಕೋಟಿ ವೆಚ್ಚದಲ್ಲಿ 4.3 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ನಿಲ್ದಾಣದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಬಸ್‌ಗಳು ಸೇರಿದಂತೆ ಪ್ರತಿದಿನ 3,500 ಟ್ರಿಪ್‌ಗಳನ್ನು ನಿರ್ವಹಿಸುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here