Home Uncategorized ಬಿಜೆಪಿ ಯುವ ಮೋರ್ಚಾದ “ಭಾರತ ದರ್ಶನ ಸುಶಾಸನ ಯಾತ್ರೆ' ಗೆ ಕೇಂದ್ರ ಗೃಹ ಸಚಿವ ಅಮಿತ್...

ಬಿಜೆಪಿ ಯುವ ಮೋರ್ಚಾದ “ಭಾರತ ದರ್ಶನ ಸುಶಾಸನ ಯಾತ್ರೆ' ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ

15
0
Advertisement
bengaluru

ಭಾರತೀಯ ಜನತಾ ಯುವ ಮೋರ್ಚಾ ಆಯೋಜಿಸಿರುವ “ಭಾರತ ದರ್ಶನ ಸುಶಾಸನ ಯಾತ್ರೆ” ಗೆ ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವೀ ಸೂರ್ಯ ಇಂದು ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿದರು. ಬೆಂಗಳೂರು: ಭಾರತೀಯ ಜನತಾ ಯುವ ಮೋರ್ಚಾ ಆಯೋಜಿಸಿರುವ “ಭಾರತ ದರ್ಶನ ಸುಶಾಸನ ಯಾತ್ರೆ” ಗೆ ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವೀ ಸೂರ್ಯ, ಯುವಮೋರ್ಚಾ ಪದಾಧಿಕಾರಿಗಳ ಸಮ್ಮುಖದಲ್ಲಿ ಇಂದು ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಭಾರತ ದರ್ಶನ ಯಾತ್ರೆಯ ಅಂಗವಾಗಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರಿಗೆ ದೇಶದ ವೈವಿಧ್ಯಮಯ ಸಾಂಸ್ಕೃತಿಕ, ಐತಿಹಾಸಿಕ ಸಿರಿವಂತಿಕೆಯನ್ನು ಪರಿಚಯಿಸುವ ಉದ್ದೇಶವನ್ನು ಹೊಂದಲಾಗಿದೆ. ಇದೇ ಸಂದರ್ಭದಲ್ಲಿ ದೇಶದ ಬೇರೆ ಬೇರೆ ರಾಜ್ಯಗಳ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳು, ಸ್ಟಾರ್ಟ್ ಅಪ್ ಗಳ ಕುರಿತಾದ ಅಧ್ಯಯನ, ಉದ್ಯಮಿಗಳ ಜೊತೆಗಿನ ಸಂವಾದ, ರೈತ ಸಂಘಟನೆಗಳ ಪ್ರಮುಖರೊಂದಿಗೆ ಭೇಟಿಯನ್ನು ಕೂಡ ಆಯೋಜಿಲಾಗುತ್ತಿದೆ. ಇದರಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲಾ ಹಾಗೂ ಮಂಡಲ ಮಟ್ಟದ ಕಾರ್ಯಕರ್ತರಿಗೆ ದೇಶದ ವೈವಿಧ್ಯತೆ ಅರಿತುಕೊಳ್ಳಲು ಸಹಕಾರಿಯಾಗಲಿದೆ.

ಕಾರ್ಯಕ್ರಮ ಚಾಲನೆ ನಂತರ ಮಾತನಾಡಿದ ಸಂಸದ  ತೇಜಸ್ವೀ ಸೂರ್ಯ, “ರಾಷ್ಟ್ರದ ಸಾಂಸ್ಕೃತಿಕ ಐಕ್ಯತೆಗೆ, ಹಿತಾಸಕ್ತಿಗೆ ಪೂರಕವಾಗಿ ಹಲವು ಕಠಿಣ ನಿರ್ಧಾರಗಳ ಮೂಲಕ ಶ್ಲಾಘನೀಯ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಖುದ್ದು ಆಗಮಿಸಿ, ಭಾರತ ದರ್ಶನ ಯಾತ್ರೆಗೆ ಚಾಲನೆ ನೀಡಿ, ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಬಿಜೆಪಿ ಕಾರ್ಯಕರ್ತರಿಗೆ ಹಾರೈಸಿದ್ದು ಯಾತ್ರೆಯ ವಿಶೇಷಗಳಲ್ಲೊಂದು” ಎಂದು ತಿಳಿಸಿದರು.

Extremely grateful to Shri @AmitShah ji for inaugrating the first batch of #BJYMBharatDarshan with 40 young BJYM leaders.

bengaluru bengaluru

Join us over the next 3 days as we explore the industrial and entrepreneurial ecosystem of Bengaluru and cultural experiences of Karnataka. pic.twitter.com/eLO1cT3Sar
— Tejasvi Surya (@Tejasvi_Surya) April 1, 2022

ಭಾರತ ದರ್ಶನ ಯಾತ್ರೆಯು ಶುಕ್ರವಾರದಿಂದ ಬೆಂಗಳೂರಿನಿಂದ ಆರಂಭಗೊಂಡಿದ್ದು, 4 ದಿನಗಳ ವರೆಗೆ ಮೊದಲ ಹಂತದಲ್ಲಿ ನಡೆಯಲಿದೆ.ಇದರಲ್ಲಿ ಭಾಗವಹಿಸುತ್ತಿರುವ ಕಾರ್ಯಕರ್ತರು ಉತ್ತರ ಮತ್ತು ಈಶಾನ್ಯ ಭಾರತದ ಬಿಜೆಪಿ ಕಾರ್ಯಕರ್ತರಾಗಿದ್ದು, ಕರ್ನಾಟಕದ ಐತಿಹಾಸಿಕ,ಸಾಂಸ್ಕೃತಿಕ, ಔದ್ಯೋಗಿಕ ರಂಗದ ಪರಿಚಯ ಮಾಡಿಕೊಡಲಾಗುತ್ತಿದೆ. ವಿಜಯನಗರದ ಅರಸರ ಐತಿಹಾಸಿಕ ಹಂಪಿ, ಪ್ರಮುಖ ಕೈಗಾರಿಕಾ ಸ್ಥಳವಾಗಿರುವ ಹೆಚ್ ಎ ಎಲ್ ಗೆ ತೆರಳಿ ಅತ್ಯಾಧುನಿಕ ತೇಜಸ್ ಲಘು ಯುದ್ಧ ವಿಮಾನ ಉತ್ಪಾದನಾ ವಿಭಾಗಕ್ಕೂ ಭೇಟಿ ನೀಡಲಿದ್ದಾರೆ. ನ್ಯಾಸ್ಕಾಂ, ಓಲಾ ಕಚೇರಿಗಳಿಗೆ ಭೇಟಿ ನೀಡಿ ನಗರದ ನಾವೀನ್ಯಪೂರ್ಣ ಸ್ಟಾರ್ಟ್ ಅಪ್ ಲೋಕ ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿ ರವರ ಕನಸಿನ ಹಸಿರು ಔದ್ಯೋಗಿಕ ರಂಗ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶದ 2ನೇ ಅತಿ ದೊಡ್ಡ ಪಾವಗಡ ಸೋಲಾರ್ ಪಾರ್ಕ್ ಕೂಡ ಯಾತ್ರೆಯ ಭಾಗವಾಗಿರಲಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: 400 ಹಾಸಿಗೆಗಳ ಆಸ್ಪತ್ರೆ, ವೈದ್ಯಕೀಯ ಕಾಲೇಜು ನಿರ್ಮಾಣ, ಕಾಮಗಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶಂಕುಸ್ಥಾಪನೆ

“ಭಾರತ ಕೇವಲ ಭೂಭಾಗ ಮಾತ್ರ ಅಷ್ಟೇ ಅಲ್ಲ. ಇದೊಂದು ಹಲವು ವೈವಿಧ್ಯಮಯ ಸಾಂಸ್ಕೃತಿಕ ಹೆಗ್ಗುರುತುಗಳನ್ನು, ಭಾವನೆಗಳ ಮಿಶ್ರಣಗಳನ್ನು ಹೊಂದಿರುವ ಅಪರೂಪದ ದೇಶ. ದೇಶದ ಸಮಸ್ತ ಜನತೆಯ ಸಾಂಸ್ಕೃತಿಕ ಒಗ್ಗೂಡುವಿಕೆಯನ್ನು ಪರಿಚಯಿಸುವುದು ಈ ಯಾತ್ರೆಯ ಪ್ರಮುಖ ಉದ್ದೇಶ.

“ಸಾವಿರಾರು ವರ್ಷಗಳ ಐತಿಹಾಸಿಕ ಸಿರಿವಂತಿಕೆಯನ್ನು ಹೊಂದಿರುವ ರಾಜ್ಯ ಕರ್ನಾಟಕ. ನಾಗರಿಕತೆಯ ಉಗಮದ ಕಾಲದಿಂದಲೂ ಇಲ್ಲಿನ ಕಲೆ,ಇತಿಹಾಸ, ಸಂಸ್ಕೃತಿ ಎಲ್ಲೆಡೆ ಛಾಪು ಮೂಡಿಸಿದೆ. ಹಲವು ಹೆರಿಟೇಜ್ ಕೇಂದ್ರಗಳು, ಐತಿಹಾಸಿಕ ಸ್ಥಳಗಳು, ಔದ್ಯೋಗಿಕ ಪ್ರಾಮುಖ್ಯತೆಯ ಸ್ಥಳಗಳನ್ನು ಪ್ರವಾಸದ ಭಾಗವಾಗಿಸಿ, ಯಾತ್ರೆಯನ್ನು ಫಲಪ್ರದವಾಗಿಸಲು ತೀರ್ಮಾನಿಸಲಾಗಿದೆ” ಎಂದು ತೇಜಸ್ವೀ ಸೂರ್ಯ ವಿವರಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,  ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಡಾ.ಸಂದೀಪ್ ಕುಮಾರ್, ಅಜಿತ್ ಹೆಗಡೆ (ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಯುವ ಮೋರ್ಚಾ, ಬಿಜೆಪಿ ಕರ್ನಾಟಕ) ಹಾಗೂ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥತರಿದ್ದರು.


bengaluru

LEAVE A REPLY

Please enter your comment!
Please enter your name here