Home Uncategorized ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ: ಇಬ್ಬರ ಬಂಧನ

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ: ಇಬ್ಬರ ಬಂಧನ

27
0
Advertisement
bengaluru

ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ ನೀಡಿರುವ ಆರೋಪದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.  ಬೆಂಗಳೂರು: ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ ನೀಡಿರುವ ಆರೋಪದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಸತೀಶ್ ರೆಡ್ಡಿ ಹತ್ಯೆಗೆ ಕುಖ್ಯಾತ ರೌಡಿ ಗ್ಯಾಂಗ್ ಸ್ಕೆಚ್ ಹಾಕಿದ್ದ ಸ್ಫೋಟಕ ವಿಷಯ ಬಹಿರಂಗಗೊಂಡಿದೆ. ನಗರದ ವಿಲ್ಸನ್ ಗಾರ್ಡನ್ ನಾಗನ ತಂಡ ಶಾಸಕನ ಹತ್ಯೆಗೆ 2 ಕೋಟಿಗೆ ಸುಪಾರಿ ಪಡೆದಿದ್ದು ಶಾಸಕರ ಚಲನವಲನಗಳ ಬಗ್ಗೆ ನಿಗಾವಹಿಸಿದ್ದರು. ಆದರೆ ದಾಳಿಗೂ ಮುಂಚೆ ರೌಡಿಶೀಟರ್ ನಾಗನ ತಂಡದಿಂದಲೇ ವಿಷಯ ಬಹಿರಂಗಗೊಂಡಿದೆ. 

ನಾಗನ ತಂಡದಲ್ಲಿದ್ದ ಚಿತ್ರದುರ್ಗದ ಮೂಲದ ಆಕಾಶ್ ಕೊಲೆಯ ಸುಳಿವು ಬಿಟ್ಟು ಕೊಟ್ಟಿದ್ದಾನೆ. ಸತೀಶ್ ರೆಡ್ಡಿ ಬೆಂಬಲಿಗ ಚಂದ್ರು ಕರೆ ಮಾಡಿದ್ದಾಗ ಆಕಾಶ್ ಕೊಲೆಯ ಸಂಚು ಬಾಯ್ಬಿಟ್ಟಿದ್ದಾನೆ. ನಂತರ ಎಚ್ಚೆತ್ತ ಶಾಸಕರು ಪೊಲೀಸರಿಗೆ ದೂರು ನೀಡಿದ್ದಾರೆ. 

ಇದನ್ನೂ ಓದಿ: ಜೆಡಿಎಸ್ ನಾಯಕ ಪ್ರಭಾಕರ್ ರೆಡ್ಡಿ ನಿವಾಸದ ಮೇಲೆ ಐಟಿ ದಾಳಿ

bengaluru bengaluru

ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ರೌಡಿ ನಾಗನ ತಂಡ ತಲೆಮರೆಸಿಕೊಂಡಿದ್ದಾರೆ. ಇನ್ನು ನಾಗನ ತಂಡವನ್ನು ಪತ್ತೆ ಹಚ್ಚಲು ವಿಶೇಷಗಳನ್ನು ತಂಡಗಳನ್ನು ರಚಿಸಿದೆ. 


bengaluru

LEAVE A REPLY

Please enter your comment!
Please enter your name here