Home Uncategorized ಬಿಡಬ್ಲ್ಯುಎಸ್ಎಸ್ ಬಿ ಪೈಪ್ ಸೋರಿಕೆ: ನಗರದಲ್ಲಿ ಮತ್ತೊಂದು ಸಿಂಕ್ ಹೋಲ್!

ಬಿಡಬ್ಲ್ಯುಎಸ್ಎಸ್ ಬಿ ಪೈಪ್ ಸೋರಿಕೆ: ನಗರದಲ್ಲಿ ಮತ್ತೊಂದು ಸಿಂಕ್ ಹೋಲ್!

24
0

ನಗರದಲ್ಲಿ ಮತ್ತೊಂದು ಸಿಂಕ್ ಹೋಲ್ ಸಮಸ್ಯೆ ಕಾಣಿಸಿಕೊಂಡಿದ್ದು, ಬಿಡಬ್ಲ್ಯುಎಸ್ ಎಸ್ ಬಿ ಪೈಪ್ ಸೋರಿಕೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.  ಬೆಂಗಳೂರು: ನಗರದಲ್ಲಿ ಮತ್ತೊಂದು ಸಿಂಕ್ ಹೋಲ್ ಸಮಸ್ಯೆ ಕಾಣಿಸಿಕೊಂಡಿದ್ದು, ಬಿಡಬ್ಲ್ಯುಎಸ್ ಎಸ್ ಬಿ ಪೈಪ್ ಸೋರಿಕೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. 

ವೆಲ್ಲಾರ ಜಂಕ್ಷನ್ ನ ಬಳಿ ಇರುವ ಬ್ರಿಗೇಡ್ ರಸ್ತೆಯಲ್ಲಿ ಬೃಹತ್ ಸಿಂಕ್ ಹೋಲ್ ಜ.12 ರಂದು ಉಂಟಾಗಿ ಬೈಕ್ ಸವಾರನೊಬ್ಬ ತೀವ್ರವಾಗಿ ಗಾಯಗೊಂಡಿದ್ದರು. ಈ ಪ್ರಕರಣದ ಬೆನ್ನಲ್ಲೇ ಹೊಸ ಸಿಂಕ್ ಹೋಲ್ ಪತ್ತೆಯಾಗಿದೆ.
 
ಮಹಾಲಕ್ಷ್ಮಿ ಲೇಔಟ್ ನ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ಮಂಗಳವಾರ ಬೆಳಿಗ್ಗೆ 11 ಗಂಟೆ ವೇಳೆಗೆ 3.5 ಅಡಿ ಆಳದ ಸಿಂಕ್ ಹೋಲ್ ಪತ್ತೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸಿಂಕ್ ಹೋಲ್ ದೃಶ್ಯಗಳು ವೈರಲ್ ಆಗತೊಡಗಿದ್ದು, ಬಿಡಬ್ಲ್ಯುಎಸ್ಎಸ್ ಬಿ ಸಿಂಕ್ ಹೋಲ್ ಗೆ ಕಾರಣವಾದ ಪೈಪ್ ಸೋರಿಕೆಯ ದುರಸ್ತಿಗಾಗಿ ತನ್ನ ಸಿಬ್ಬಂದಿಗಳನ್ನು ನಿಯೋಜಿಸಿದೆ. 

#Sinkhole, #BBMP, #BWSSB
Water board officials at the spot trying to fix pipe leakage that resulted in sinkhole.@KannadaPrabha,@NewIndianXpress,@XpressBengaluru,@BoskyKhanna,@BBMPCOMM,@INCKarnataka,@CMofKarnataka,@chairmanbwssb pic.twitter.com/htk8sDipKV
— Mohammed Yacoob (@yacoobExpress) January 17, 2023

ಸಿಂಕ್ ಹೋಲ್ ಸುತ್ತ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಸಂಚಾರಿ ಪೊಲೀಸರು ವಾಹನ ಸಂಚಾರ ಸರಾಗವಾಗಿರುವುದರತ್ತ ಗಮನ ಹರಿಸಿದ್ದಾರೆ. ಬಿಡಬ್ಲ್ಯುಎಸ್ಎಸ್ ಬಿ ಪೈಪ್ ಸೋರಿಕೆಯ ಹಿನ್ನೆಲೆಯಲ್ಲಿ ಮಣ್ಣು ಸಡಿಲಗೊಂಡಿದ್ದು,  ಸಿಂಕ್ ಹೋಲ್ ಉಂಟಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಿಲ್ಲರ್ ದುರಂತದ ಬಳಿಕ ಈಗ ಬ್ರಿಗೇಡ್ ರಸ್ತೆಯಲ್ಲಿ ಸಿಂಕ್ ಹೋಲ್ ಸಮಸ್ಯೆ; ಬೈಕ್ ಸವಾರನಿಗೆ ಗಾಯ

ಬಿಡಬ್ಲ್ಲ್ಯುಎಸ್ಎಸ್ ಬಿ, ಬೆಸ್ಕಾಮ್, ಬಿಬಿಎಂಪಿ ನಡುವೆ ಸಮನ್ವಯದ ಕೊರತೆಯಿಂದಾಗಿ ಪದೇ ಪದೇ ಸಿಂಕ್ ಹೋಲ್ ಸಮಸ್ಯೆ ಎದುರಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಪೈಪ್ ಅಥವಾ ಕೇಬಲ್ ಕಾಮಗಾರಿಗಳ ಬಳಿಕ ಬಿಡಬ್ಲ್ಯುಎಸ್ಎಸ್ ಬಿ ಅಥವಾ ಬೆಸ್ಕಾಮ್ ಯಾರೂ ಸಹ ರಸ್ತೆಗಳನ್ನು ಹಿಂದಿದ್ದ ಸ್ಥಿತಿಗೆ ದುರಸ್ತಿ ಮಾಡುವುದಿಲ್ಲ ಬಿಬಿಎಂಪಿ ಸಹ ಗುಣಮಟ್ಟದ ಪರಿಶೀಲನೆ ಮಾಡುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

LEAVE A REPLY

Please enter your comment!
Please enter your name here