Home Uncategorized ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆ ಕಸರತ್ತು: ಹೆಚ್ಚಿನ ವಾರ್ಡ್‌ಗಳ ಸೃಷ್ಟಿ ಇಲ್ಲ- ಬಿಬಿಎಂಪಿ ಮುಖ್ಯಸ್ಥ

ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆ ಕಸರತ್ತು: ಹೆಚ್ಚಿನ ವಾರ್ಡ್‌ಗಳ ಸೃಷ್ಟಿ ಇಲ್ಲ- ಬಿಬಿಎಂಪಿ ಮುಖ್ಯಸ್ಥ

14
0
Advertisement
bengaluru

ಇನ್ನೂ ಚಾಲನೆ ಸಿಗದ ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆ ಕಸರತ್ತಿನಲ್ಲಿ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ಹೇಳಿದ್ದಾರೆ. ಅದು 243 ವಾರ್ಡ್ ಗಳಿಗೆ ಮಾತ್ರ ಸಿಮೀತವಾಗಲಿದೆ.  ಬೆಂಗಳೂರು: ಇನ್ನೂ ಚಾಲನೆ ಸಿಗದ ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆ ಕಸರತ್ತಿನಲ್ಲಿ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ಹೇಳಿದ್ದಾರೆ. ಅದು 243 ವಾರ್ಡ್ ಗಳಿಗೆ ಮಾತ್ರ ಸಿಮೀತವಾಗಲಿದೆ. 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರ್ಡ್‌ಗಳ ವಿಂಗಡಣೆಯಲ್ಲಿ ವಾರ್ಡ್‌ಗಳ ಗಡಿ ಮಾತ್ರ ಪರಿಷ್ಕರಿಸಲಾಗುವುದು. ಇದು ಚುನಾವಣಾ ಆಯೋಗದ ಪ್ರಕಾರ ಮತದಾರರ ಮಾಹಿತಿಯನ್ನೂ ಒಳಗೊಂಡಿರುತ್ತದೆ. ಸರ್ಕಾರ ಮತ್ತು ಚುನಾವಣಾ ಆಯೋಗದ ನಿರ್ದೇಶನದಂತೆ ಬಿಬಿಎಂಪಿ ಕೆಲಸ ಮಾಡಲಿದೆ ಎಂದರು. ವಾರ್ಡ್‌ಗಳ ಹೆಸರು ಬದಲಾವಣೆ  ಸರ್ಕಾರದ ನಿರ್ಧಾರವಾಗಿದ್ದು, ಬಿಬಿಎಂಪಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದರು. ಅದು ಬಂದಾಗ ನಿರ್ಧರಿಸಲಾಗುವುದು ಎಂದರು.

ಡಿಲಿಮಿಟೇಶನ್ ಪ್ರಕ್ರಿಯೆಯಲ್ಲಿ ಅಕ್ರಮಗಳ ಕುರಿತು ಪ್ರತಿಕ್ರಿಯಿಸಿದ ತುಷಾರ್ ಗಿರಿನಾಥ್, ಇದು ಕೇವಲ ವದಂತಿಗಳು, ಅವುಗಳಲ್ಲಿ ಯಾವುದೇ ಸತ್ಯವಿಲ್ಲ, ವಾರ್ಡ್ ಗಳ ಪುನರ್ ವಿಂಗಡಣೆ ಕಾರ್ಯದಲ್ಲಿ ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸಲಾಗುವುದು. 2021 ರಲ್ಲಿ ಅಥವಾ ಅದರ ನಂತರ ಯಾವುದೇ ಜನಗಣತಿ ನಡೆಯದ ಕಾರಣ 2011 ರ ಜನಗಣತಿಯ ಪ್ರಕಾರ ಮೀಸಲಾತಿ ಹಂಚಿಕೆ ಮಾಡಲಾಗುತ್ತದೆ ಎಂದರು. 

ಮಳೆಗಾಲದ ಮುನ್ನ ಅತಿಕ್ರಮಣ ತೆರವು ಕಾರ್ಯಾಚರಣೆ ಕುರಿತು ಮಾತನಾಡಿದ ಗಿರಿನಾಥ್, ಬಿಬಿಎಂಪಿಯು ಕಂದಾಯ ಇಲಾಖೆಯೊಂದಿಗೆ ಕೆಲಸ ಮಾಡುತ್ತಿದ್ದು, ನೀರು ಸರಾಗವಾಗಿ ಹರಿಯಲು ಕಾಲುವೆಗಳನ್ನು ಮಾಡುತ್ತಿದೆ. ಆದರೆ ಇನ್ನೂ ಚರಂಡಿ ಮತ್ತು ಕೆರೆಗಳಿಗೆ ನೀರು ಹರಿದು ಹೋಗಲು ಅಡ್ಡಿಯಾದರೆ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೊಳಿಸಿ ನಿಗದಿತ ನಿಯಮಗಳನ್ನು ಅನುಸರಿಸಲಾಗುವುದು ಎಂದು ತಿಳಿಸಿದರು. 

bengaluru bengaluru

118 ಕಡೆಗಳಲ್ಲಿ ಒತ್ತುವರಿ ಪರಿಶೀಲನೆ ಹಾಗೂ ತಾತ್ಕಾಲಿಕ ಬೈಪಾಸ್‌ ನಿರ್ಮಾಣ ಕಾಮಗಾರಿ ನಡೆಯಬೇಕಿದೆ. ಇದುವರೆಗೆ ಯಲಹಂಕ, ದಾಸರಹಳ್ಳಿ ಮತ್ತು ಪೂರ್ವ ಬೆಂಗಳೂರು ಪ್ರದೇಶಗಳಲ್ಲಿ ಸುಮಾರು 50 ಸ್ಥಳಗಳಲ್ಲಿ ಮಾಡಲಾಗಿದೆ. ಇನ್ನು 23 ಕಡೆ,  ದಾಸರಹಳ್ಳಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಬಿಬಿಎಂಪಿ ಯೋಜನೆ ಪ್ರಕಾರ ಕೆಲಸ ಮಾಡುತ್ತಿದೆ. ಯಾವುದೇ ಪ್ರವಾಹ ಮತ್ತು ಜನರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಕಾನೂನುಬದ್ಧ ಪ್ರಕರಣಗಳನ್ನು ಪರಿಹರಿಸಲಾಗುತ್ತಿದೆ ಎಂದು ಅವರು ಹೇಳಿದರು.


bengaluru

LEAVE A REPLY

Please enter your comment!
Please enter your name here