Home Uncategorized ಬಿರಿಯಾನಿ ಮಾಡೋಕೆ ಕುಕ್ಕರ್ ಕೊಂಡೊಯ್ಯುತ್ತಿದ್ದನೆಂದು ಭಾವಿಸಿದ್ರಾ ನೀವು: ಡಿಕೆಶಿಗೆ ಸಿ.ಟಿ.ರವಿ ಪ್ರಶ್ನೆ

ಬಿರಿಯಾನಿ ಮಾಡೋಕೆ ಕುಕ್ಕರ್ ಕೊಂಡೊಯ್ಯುತ್ತಿದ್ದನೆಂದು ಭಾವಿಸಿದ್ರಾ ನೀವು: ಡಿಕೆಶಿಗೆ ಸಿ.ಟಿ.ರವಿ ಪ್ರಶ್ನೆ

0
0
bengaluru

ಬೆಂಗಳೂರು: ಮಂಗಳೂರಿನಲ್ಲಿ ನಡೆದ ಕುಕ್ಕರ್​ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿಕೆಯನ್ನು ವ್ಯಂಗ್ಯದ ಮೂಲಕ ಟೀಕಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi), ಪಾದರಾಯನಪುರ ಗಲಭೆಕೋರರನ್ನು ಡಿಕೆಶಿ ಮೈ ಬ್ರದರ್ಸ್ (ನನ್ನ ಸಹೋದರರು) ಎಂದಿದ್ದರು. ಇದೀಗ ಈಗ ಕುಕ್ಕರ್​ ಬಾಂಬ್ (Cooker Bomb Blast)​​ ಆರೋಪಿ ಮೇಲೆ ಡಿಕೆಶಿಗೆ ಅನುಕಂಪ ಹುಟ್ಟಿದೆ. ಆತ ಬಿರಿಯಾನಿ ಮಾಡಲು ಕುಕ್ಕರ್ ಕೊಂಡೊಯ್ಯುತ್ತಿದ್ದನೆಂದು ಭಾವಿಸಿದ್ದೀರಾ ನೀವು ಎಂದು ಪ್ರಶ್ನಿಸಿದರು. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪ್ರಕೋಷ್ಠಗಳ ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮಂತಹವರ ಕೈಗೆ ಅಧಿಕಾರ ಕೊಟ್ಟರೆ ಕರ್ನಾಟಕ ಉಳಿಯುತ್ತಾ ಎಂದು ಪ್ರಶ್ನಿಸಿದರು. ಬೆರಕೆ ರಾಜಕಾರಣ ಮಾಡುವವರು ಶುದ್ಧ ಹಿಂದೂ ಆಗಲು ಸಾಧ್ಯವಿಲ್ಲ. ಕುಂಕುಮ, ಕೇಸರಿ ಕಂಡರೆ ಭಯ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದರು. ಮೊನ್ನೆ ಇವರ ನಾಯಕ (ರಾಹುಲ್ ಗಾಂಧಿ) ಕುಂಕುಮ ಹಾಕಿದ್ದರಲ್ಲಿ ಹಣೆಯೇ ಕಾಣ್ತಿರಲಿಲ್ಲ. ರಾಜ್ಯದಲ್ಲಿ ಕೇಸರಿ ಗಾಳಿ ಬೀಸುತ್ತಿದೆ. ಕೇಸರಿ ವಿರುದ್ಧ ರಾಜಕಾರಣ ಮಾಡುವವರಿಗೆ ಸೋಲು ನಿಶ್ಚಿತ ಎಂದರು.

ಬಿಜೆಪಿ ಕಾರ್ಯಕರ್ತರ ಜೋಷ್ ನೋಡಿದ ಮೇಲೆ ಕೂಡಾ ಯಾರಗಾದರೂ ನಾನೇ ಸಿಎಂ ಅಂತಾ ಅನ್ನಿಸಿದರೆ ಅದು ತಿರುಕನ ಕನಸು. ಮೋದಿ ಜನರ ಹೃದಯದಲ್ಲಿದ್ದಾರೆ. ಗುಜರಾತ್​ನಲ್ಲಿ ಐರನ್ ಲೆಗ್ ಹೋಗುವ ಮೊದಲು ಕಾಂಗ್ರೆಸ್ 77 ಸೀಟ್ ಇತ್ತು, ಐರನ್ ಲೆಗ್ ಹೋದ ಮೇಲೆ 17 ‌ಸೀಟ್​ಗೆ ಇಳಿದಿದೆ. ಗುಜರಾತ್​​ನಲ್ಲಿ ಒಂದು ಸಲ ಚಿಟಿಕೆ ಹೊಡೆದರೆ ಕಾಂಗ್ರೆಸ್ 17 ಸೀಟ್​​ನಲ್ಲಿ ಎಷ್ಟು ಖಾಲಿಯಾಗುತ್ತದೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಕಾರ್ಯಕರ್ತರ ಜೋಷ್ ಮತ್ತೆ ಡಬಲ್ ಇಂಜಿನ್ ಸರ್ಕಾರಗಳನ್ನು ಅಧಿಕಾರಕ್ಕೆ ತರುತ್ತದೆ: ಕೇಂದ್ರ ಸಚಿವ ಅಶ್ವಿನ್ ವೈಷ್ಣವ್

ಬಿಜೆಪಿ ಮಾಡಿದ್ದು ರಾಷ್ಟ್ರವಾದ, ಹಿಂದುತ್ವದ, ವಿಕಾಸವಾದದ ರಾಜಕಾರಣ. ಸಿದ್ದರಾಮಯ್ಯನವರೇ ಮನೆ ಹಾಳು ಮಾಡುವ, ಜಾತಿ ರಾಜಕಾರಣ ಬಿಜೆಪಿಯದ್ದಲ್ಲ. ಸಿದ್ದರಾಮಯ್ಯನವರೇ ನೀವು ಶುದ್ಧ ಹಿಂದೂ ಆಗಲಿ ಅಂತಾ ನಿಮ್ಮ ತಂದೆ ಸಿದ್ದರಾಮಯ್ಯ ಅಂತಾ ಹೆಸರಿಟ್ಟರು. ಆದರೆ ಸಿದ್ದರಾಮಯ್ಯನವರೇ ನೀವ್ಯಾಕೆ ಹಿಂಗದ್ರೀ? ರಾಜ್ಯದ ಜನ ನಿಮ್ಮನ್ನು ಸಿದ್ದಾಮುಲ್ಲಾ ಖಾನ್ ಅಂತಾ ಕರೆಯುತ್ತಿದ್ದಾರೆ, ನಿಮ್ಮ ತಂದೆಯ ಆತ್ಮ ವಿಲ ವಿಲ ಅಂತಾ ಒದ್ದಾಡುತ್ತಿರಬಹುದು ಎಂದು ವ್ಯಂಗ್ಯವಾಡಿದರು.

bengaluru

ಟಿಪ್ಪು ಜಯಂತಿ ಆಚರಿಸಿದ ಮತಾಂಧ ರಾಜಕಾರಣಿ ಸಿದ್ದರಾಮಯ್ಯ. ಸಿದ್ದರಾಮಯ್ಯನವರೇ ಶುದ್ದ ಅಂತಾ ಹೇಳಿಕೊಳ್ಳಲು ಕೂಡಾ ಶುದ್ಧತೆಯಿಂದ ಇರಬೇಕು. ಯಾರು ಮತಾಂಧ ಅಂತಾ ಬಿಡಿಸಿ ಹೇಳಬೇಕಾ ಸಿದ್ದರಾಮಯ್ಯನವರೇ? ಪ್ರವಾಸದ ಮೂಲಕ ಮಕ್ಕಳ ಮನಸ್ಸಿನಲ್ಲೂ ಜಾತಿ ವಿಷಬೀಜ ಬಿತ್ತಿದ ಕುಖ್ಯಾತಿ ಸಿದ್ದರಾಮಯ್ಯದ್ದು, ಒಂದು ಜಾತಿಯವರಿಗೆ ಮಾತ್ರ ವಿವಾಹ ಯೋಜನೆ ಮಾಡಿದವರನ್ನು ಮತಾಂಧ ಅನ್ನದೇ ಇನ್ನೇನು ಹೇಳಬೇಕು? ಮತಾಂಧತೆಯ ರಾಜಕಾರಣ ಮಾಡಿದ್ದು ಕಾಂಗ್ರೆಸ್, ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಮಂಡ್ಯ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆಯಲ್ಲಿ ಪಾಕ್​ ಪರ ಘೋಷಣೆ..!

ಬಿಎಸ್​ವೈಗೆ ಜೈ ಎಂದ ಕಾರ್ಯಕರ್ತರು

ಬಿಜೆಪಿ ಪ್ರಕೋಷ್ಠಗಳ ಸಮಾವೇಶದಲ್ಲಿ ಸಿ.ಟಿ. ರವಿ ಅವರು ಭಾಷಣದ ಆರಂಭದಲ್ಲಿ ಭಾರತ್ ಮಾತಾಕೀ ಜೈ, ಜೈ ಶ್ರೀರಾಮ್, ನರೇಂದ್ರ ಮೋದಿಯವರಿಗೆ ಜೈ ಎಂದು ಘೋಷಣೆ ಕೂಗಿದರು. ಇದೇ ವೇಳೆ ಸಮಾವೇಶದಲ್ಲಿ ಭಾಗಿಯಾಗಿದ್ದ ಯಡಿಯೂರಪ್ಪ ಅವರ ಅಭಿಮಾನಿಗಳು, ಬೆಂಬಲಿಗರು ಯಡಿಯೂರಪ್ಪ ಅವರಿಗೆ ಜಯ ಘೋಷಗಳನ್ನು ಕೂಗಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here