Home Uncategorized ಬಿಹಾರ: ವಿಶ್ವಾಸಮತ ಪರೀಕ್ಷೆಗೂ ಮುನ್ನ ಸ್ಪೀಕರ್‌ ಹುದ್ದೆ ಕಳೆದುಕೊಂಡ ಆರ್‌ಜೆಡಿಯ ಅವಧ್‌ ಬಿಹಾರಿ ಚೌಧರಿ

ಬಿಹಾರ: ವಿಶ್ವಾಸಮತ ಪರೀಕ್ಷೆಗೂ ಮುನ್ನ ಸ್ಪೀಕರ್‌ ಹುದ್ದೆ ಕಳೆದುಕೊಂಡ ಆರ್‌ಜೆಡಿಯ ಅವಧ್‌ ಬಿಹಾರಿ ಚೌಧರಿ

1
0
Advertisement
bengaluru

ಪಾಟ್ನಾ: ಬಿಹಾರದಲ್ಲಿ ಇಂದು ನಿತೀಶ್‌ ಕುಮಾರ್‌ ನೇತೃತ್ವದ ಜೆಡಿ(ಯು)-ಬಿಜೆಪಿ ಮೈತ್ರಿ ಸರ್ಕಾರದ ವಿಶ್ವಾಸಮತ ಪರೀಕ್ಷೆಗೂ ಮುನ್ನ ರಾಷ್ಟ್ರೀಯ ಜನತಾ ದಳದ ಸ್ಪೀಕರ್‌ ಅವಧ್‌ ಬಿಹಾರಿ ಚೌಧುರಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅವರನ್ನು ಹುದ್ದೆಯಿಂದ ಕೈಬಿಡಲಾಯಿತು.

ಇಂದು ಆರ್‌ಜೆಡಿ ಪಕ್ಷದ ಮೂವರು ಶಾಸಕರು ಪಕ್ಷದಿಂದ ದೂರ ಸರಿದು ನಿತೀಶ್‌ ಕುಮಾರ್‌ ಸರ್ಕಾರದ ಬೆಂಬಲಕ್ಕೆ ನಿಂತಿದ್ದಾರೆ.

ಆರ್‌ಜೆಡಿ ಪಕ್ಷದಿಂದ ಆಯ್ಕೆಯಾಗಿದ್ದ ನೀಲಂ ದೇವಿ, ಚೇತನ್‌ ಆನಂದ್‌ ಮತ್ತು ಪ್ರಹ್ಲಾದ್‌ ಯಾದವ್‌ ಇಂದು ಸದನದಲ್ಲಿ ಆಡಳಿತ ಪಕ್ಷದವರೊಂದಿಗೆ ಕುಳಿತಿರುವುದು ಕಾಣಿಸಿದೆ.


bengaluru

LEAVE A REPLY

Please enter your comment!
Please enter your name here