ಹೊಟೇಲ್ ನಲ್ಲಿ ಊಟ ಮಾಡಿ ಬೀಡಾ ಅಂಗಡಿಯಲ್ಲಿ ಬಿಲ್ ನೀಡುವ ಕ್ಷುಲ್ಲಕ ಕಾರಣಕ್ಕೆ ಮಾಜಿ ಶಾಸಕ ಸಾ ರಾ ಮಹೇಶ್ ಮತ್ತು ಪತ್ರಕರ್ತರೊಬ್ಬರ ಪುತ್ರನ ಮಧ್ಯೆ ಗಲಾಟೆಯಾದ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ಕಳೆದ ರಾತ್ರಿ ನಡೆದಿದೆ. ಮೈಸೂರು: ಹೊಟೇಲ್ ನಲ್ಲಿ ಊಟ ಮಾಡಿ ಬೀಡಾ ಅಂಗಡಿಯಲ್ಲಿ ಬಿಲ್ ನೀಡುವ ಕ್ಷುಲ್ಲಕ ಕಾರಣಕ್ಕೆ ಮಾಜಿ ಶಾಸಕ ಸಾ ರಾ ಮಹೇಶ್ ಮತ್ತು ಪತ್ರಕರ್ತರೊಬ್ಬರ ಪುತ್ರನ ಮಧ್ಯೆ ಗಲಾಟೆಯಾದ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ಕಳೆದ ರಾತ್ರಿ ನಡೆದಿದೆ.
ಮೈಸೂರು ನಗರದ ಕುವೆಂಪು ನಗರದಲ್ಲಿ ಕಳೆದ ರಾತ್ರಿ ಹೊಟೇಲ್ ನಲ್ಲಿ ಊಟ ಮಾಡಿ ಬೀಡಾ ತಿಂದು ಹಣ ನೀಡಲು ಮಾಜಿ ಶಾಸಕ ಸಾ ರಾ ಮಹೇಶ್ ಮುಂದಾದಾಗ ಪತ್ರಕರ್ತರೊಬ್ಬರ ಪುತ್ರ ಸ್ಕ್ಯಾನರ್ ಗೆ ಅಡ್ಡ ನಿಂತಿದ್ದಕ್ಕೆ ಸಾರಾ ಮಹೇಶ್ ಪುತ್ರ ಪ್ರಶ್ನಿಸಿದ್ದಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ನಂತರ ಎರಡೂ ಗುಂಪುಗಳ ಯುವಕರು ಕೈ ಕೈ ಮಿಲಾಯಿಸಿಕೊಂಡರು.
ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ಕರೆದುಕೊಂಡು ವಿಚಾರಣೆ ನಡೆಸಿ ಕೇಸು ದಾಖಲಿಸಿಕೊಳ್ಳದೆ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು ಇಬ್ಬರ ಮಾರಾಮಾರಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
@XpressBengaluru @ShivascribeTNIE @Karthiknayaka ಹೊಟೇಲ್ ನಲ್ಲಿ ಊಟ ಮಾಡಿ ಬೀಡಾ ಅಂಗಡಿಯಲ್ಲಿ ಬಿಲ್ ನೀಡುವ ಕ್ಷುಲ್ಲಕ ಕಾರಣಕ್ಕೆ ಮಾಜಿ ಶಾಸಕ ಸಾ ರಾ ಮಹೇಶ್ ಮತ್ತು ಪತ್ರಕರ್ತರೊಬ್ಬರ ಪುತ್ರನ ಮಧ್ಯೆ ಗಲಾಟೆಯಾದ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ಕಳೆದ ರಾತ್ರಿ ನಡೆದಿದೆ. pic.twitter.com/gwa1JOjBx3
— kannadaprabha (@KannadaPrabha) June 26, 2023