Home Uncategorized ಬೆಂಗಳೂರಿನಲ್ಲಿ 'ನಮ್ಮ ಕ್ಲಿನಿಕ್'ಗೆ ಉತ್ತಮ ಸ್ಪಂದನೆ, ನಾಗರಿಕರಿಗೆ ಖುಷಿ ತಂದ ಉಚಿತ ವೈದ್ಯಕೀಯ ಸೌಲಭ್ಯ

ಬೆಂಗಳೂರಿನಲ್ಲಿ 'ನಮ್ಮ ಕ್ಲಿನಿಕ್'ಗೆ ಉತ್ತಮ ಸ್ಪಂದನೆ, ನಾಗರಿಕರಿಗೆ ಖುಷಿ ತಂದ ಉಚಿತ ವೈದ್ಯಕೀಯ ಸೌಲಭ್ಯ

20
0

ನಗರದಲ್ಲಿ ಸರ್ಕಾರ ವತಿಯಿಂದ ತೆರೆಯಲಾಗಿರುವ ‘ನಮ್ಮ ಕ್ಲಿನಿಕ್’ ಗೆ ನಾಗರಿಕರ ಸ್ಪಂದನೆ ಉತ್ತಮವಾಗಿದೆ, ರೋಗಿಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಚಿತವಾಗಿ ಸಮಾಲೋಚನೆಗಳು ಮತ್ತು ಔಷಧಿಗಳನ್ನು ಪಡೆಯುತ್ತಿದ್ದು, ಸರ್ಕಾರದ ಸೌಲಭ್ಯ ನಾಗರಿಕರಿಗೆ ಖುಷಿ ತಂದಿದೆ.  ಬೆಂಗಳೂರು: ನಗರದಲ್ಲಿ ಸರ್ಕಾರ ವತಿಯಿಂದ ತೆರೆಯಲಾಗಿರುವ ‘ನಮ್ಮ ಕ್ಲಿನಿಕ್’ ಗೆ ನಾಗರಿಕರ ಸ್ಪಂದನೆ ಉತ್ತಮವಾಗಿದೆ, ರೋಗಿಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಚಿತವಾಗಿ ಸಮಾಲೋಚನೆಗಳು ಮತ್ತು ಔಷಧಿಗಳನ್ನು ಪಡೆಯುತ್ತಿದ್ದು, ಸರ್ಕಾರದ ಸೌಲಭ್ಯ ನಾಗರಿಕರಿಗೆ ಖುಷಿ ತಂದಿದೆ. 

ಶಾಂತಲಾ ನಗರದಲ್ಲಿ 25 ವರ್ಷಗಳಿಂದ ಕೆಲಸ ಮಾಡುತ್ತಿರುವ ಪೌರಕಾರ್ಮಿಕರೊಬ್ಬರು, ನಿನ್ನೆ ವಿಕ್ಟೋರಿಯಾ ಲೇಔಟ್‌ನಲ್ಲಿರುವ ಕ್ಲಿನಿಕ್‌ಗೆ ಭೇಟಿ ನೀಡಿದರು. ಮಂಗಳವಾರ ಉದ್ಘಾಟನೆ ದಿನ  ಕ್ಲಿನಿಕ್ ಬಗ್ಗೆ ನನಗೆ ತಿಳಿಯಿತು. ಸಮಾಲೋಚನೆ ಮತ್ತು ಔಷಧಿ ಎರಡನ್ನೂ ಉಚಿತವಾಗಿ ನೀಡಲಾಗುತ್ತಿರುವುದರಿಂದ, ನಾನು ತಪಾಸಣೆಗಾಗಿ ಕ್ಲಿನಿಕ್‌ಗೆ ಭೇಟಿ ನೀಡಿದ್ದೇನೆ, ಉತ್ತಮ ಸಮಾಲೋಚನೆ ಸಿಕ್ಕಿದೆ ಎಂದು ಸಮಾಧಾನ ವ್ಯಕ್ತಪಡಿಸುತ್ತಾರೆ. 

ಕೆಲವು ಕ್ಲಿನಿಕ್‌ಗಳಲ್ಲಿ ವೈದ್ಯಕೀಯ ಅಧಿಕಾರಿಗಳು (MO) ಕ್ಲಿನಿಕ್‌ನಲ್ಲಿ ಒದಗಿಸಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ರಾಮಸ್ವಾಮಿ ಪಾಳ್ಯದ ಕ್ಲಿನಿಕ್‌ನ ಡಾ ರಾಚೆಲ್ ಡೇನಿಯಲ್, ಈ ಪ್ರದೇಶದಲ್ಲಿನ ಕೊಳೆಗೇರಿ ಜನಸಂಖ್ಯೆಗೆ ಕ್ಲಿನಿಕ್ ಉತ್ತಮವಾಗಿದೆ. ಪ್ರತಿದಿನ ಸುಮಾರು 10 ರೋಗಿಗಳು ಆಗಮಿಸುತ್ತಾರೆ ಎಂದರು. 

ಆಶಾ ಕಾರ್ಯಕರ್ತರು ಮತ್ತು ಇತರ ಕ್ಷೇತ್ರ ಕಾರ್ಯಕರ್ತರು ಮೂಲಭೂತ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಲು ಮುಂದೆ ಬರಲು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಅವರು ಹೇಳಿದರು. ನಮ್ಮ ಚಿಕಿತ್ಸಾಲಯಗಳು ಬಡ ಜನರಿಗೆ ಉಪಚರಿಸಲು ಮತ್ತು ರೋಗಗಳ ಆರಂಭಿಕ ರೋಗಗಳನ್ನು ಪತ್ತೆಹಚ್ಚಲು ಸಹಾಯಕವಾಗುತ್ತವೆ ಎಂದು ಡಾ ರಾಚೆಲ್ ಹೇಳಿದರು.

ಎರಡು ದಿನಗಳಲ್ಲಿ ಸರಾಸರಿ 15 ರೋಗಿಗಳನ್ನು ಬಂದಿದ್ದರು ಎಂದು ವಿಕ್ಟೋರಿಯಾ ಲೇಔಟ್ ಕ್ಲಿನಿಕ್‌ನ ಎಂಒ ಡಾ.ಶಹಜೈಬ್ ಅಹಮದ್ ಸಾದಿಕ್ ಹೇಳುತ್ತಾರೆ. ಅವರಿಗೆ ಎಲ್ಲಾ ವೈದ್ಯಕೀಯ ಉಪಕರಣಗಳು, ಔಷಧಗಳು ಮತ್ತು ಟೆಲಿಕನ್ಸಲ್ಟೇಶನ್‌ನ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

ಆದಾಗ್ಯೂ, ಹಲವಾರು ಚಿಕಿತ್ಸಾಲಯಗಳಿಗೆ ಒದಗಿಸಲಾದ ಔಷಧಿ ದಾಸ್ತಾನು ಮತ್ತು ಉಪಕರಣಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ವಿಕ್ಟೋರಿಯಾ ಲೇಔಟ್‌ನಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ಐದು ತಿಂಗಳಿಗೆ ಸಾಕಾಗುವಷ್ಟು ಔಷಧ ದಾಸ್ತಾನು ಇದ್ದರೆ, ಜೀವನ್ ಭೀಮಾ ನಗರದ ಕ್ಲಿನಿಕ್‌ನಲ್ಲಿ ಕೇವಲ ಒಂದು ತಿಂಗಳಿಗೆ ಸಾಕಾಗುವಷ್ಟು ಔಷಧಗಳಿದ್ದವು.

ಚಿಕಿತ್ಸಾಲಯಗಳು ಮಂಗಳವಾರವಷ್ಟೇ ಪ್ರಾರಂಭವಾಗಿರುವುದರಿಂದ ಬೇಡಿಕೆಯ ಆಧಾರದ ಮೇಲೆ ಔಷಧಗಳು ಮತ್ತು ಇತರ ಉಪಕರಣಗಳನ್ನು ಕೇಳುವುದಾಗಿ ವೈದ್ಯಾಧಿಕಾರಿ ತಿಳಿಸಿದ್ದಾರೆ. ಕೆಲವೇ ವಾರಗಳಲ್ಲಿ ಅಗತ್ಯತೆಗಳನ್ನು ಉತ್ತಮವಾಗಿ ಗುರುತಿಸಿ ಅದಕ್ಕೆ ತಕ್ಕಂತೆ ಬೇಡಿಕೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here