Home Uncategorized ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ಅಪಘಾತ: ಕಾರಿನ ಮೇಲೆ ಬಿದ್ದ ಮೆಟ್ರೋ ಬ್ಯಾರಿಕೇಡ್, ಪ್ರಯಾಣಿಕರು ಪಾರು

ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ಅಪಘಾತ: ಕಾರಿನ ಮೇಲೆ ಬಿದ್ದ ಮೆಟ್ರೋ ಬ್ಯಾರಿಕೇಡ್, ಪ್ರಯಾಣಿಕರು ಪಾರು

21
0
Advertisement
bengaluru

ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿರುವ ಘಟನೆ ಹಸಿರಾಗಿರುವಂತೆಯೇ ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ಅಪಘಾತ ಸಂಭವಿಸಿದ್ದು, ಕಾರಿನ ಮೇಲೆ ಬಿದ್ದ ಮೆಟ್ರೋ ಬ್ಯಾರಿಕೇಡ್ ಬಿದ್ದಿದೆ. ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿರುವ ಘಟನೆ ಹಸಿರಾಗಿರುವಂತೆಯೇ ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ಅಪಘಾತ ಸಂಭವಿಸಿದ್ದು, ಕಾರಿನ ಮೇಲೆ ಬಿದ್ದ ಮೆಟ್ರೋ ಬ್ಯಾರಿಕೇಡ್ ಬಿದ್ದಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ಅಪಘಾತ ಸಂಭವಿಸಿದ್ದು, ಕಾರಿನ ಮೇಲೆ ಬಿದ್ದ ಮೆಟ್ರೋ ಬ್ಯಾರಿಕೇಡ್ ಬಿದ್ದಿದೆ.#Bengaluru #NammaMetro #MetroAccident #barricadefallsoncar #ಬೆಂಗಳೂರು #ನಮ್ಮಮೆಟ್ರೋ #ಮೆಟ್ರೋಅಪಘಾತ #ಕಾರಿನಮೇಲೆಬಿದ್ಜಮೆಟ್ರೋಬ್ಯಾರಿಕೇಡ್
Read more here: https://t.co/NAFUkRphh9 pic.twitter.com/5hFfirA036
— kannadaprabha (@KannadaPrabha) January 22, 2023

ಬೆಂಗಳೂರಿನ ದೊಡ್ಡನೆಕ್ಕುಂದಿ ಜಂಕ್ಷನ್‌ನಲ್ಲಿ ಮೆಟ್ರೊ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ನಿಲ್ಲಿಸಿದ್ದ ಬ್ಯಾರಿಕೇಡ್‌ ಕಾರಿನ ಮೇಲೆ ಬಿದ್ದಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪಿಲ್ಲರ್ ಕುಸಿತಕ್ಕೆ ಕಾರಣ ಕೊಟ್ಟ ತಜ್ಞರು: ಐಐಎಸ್‌ಸಿ ನೀಡಿದ ವರದಿಯಲ್ಲೇನಿದೆ?

bengaluru bengaluru

ದೊಡ್ಡನೆಕ್ಕುಂದಿಯಿಂದ ಮಹದೇವಪುರ ಕಡೆಗೆ ಹೋಗುವ ಮುಖ್ಯರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಇಬ್ಬರು ಸ್ಥಳೀಯ ನಿವಾಸಿಗಳು ತಮ್ಮ ಹುಂಡೈ ಐ–10 ಕಾರಿನಲ್ಲಿ ಹೊರಟಿದ್ದರು. ಕಾರು ಚಲಿಸುತ್ತಿದ್ದ ಸಂದರ್ಭದಲ್ಲೇ ಬ್ಯಾರಿಕೇಡ್‌ ಬಿದ್ದಿತ್ತು. ಸ್ವಲ್ಪದರಲ್ಲೇ ಕಾರು ಮುಂದಕ್ಕೆ ಚಲಿಸಿದ್ದರಿಂದ, ಕಾರು ಭಾಗಶಃ ಜಖಂಗೊಂಡಿದೆ. ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದವರಿಗೆ ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ.

ಇದನ್ನೂ ಓದಿ: ಬೆಂಗಳೂರು ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ; ಘಟನೆಗೆ ಸ್ಪಷ್ಟ ಕಾರಣ ತಿಳಿಸದೆ ಮೌನ ವಹಿಸಿದ ಬಿಎಂಆರ್‌ಸಿಎಲ್

ಈ ಬಗ್ಗೆ ಮಾಹಿತಿ ನೀಡಿರುವ ಸಂಚಾರ ಪೊಲೀಸರು, ‘ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಯಿತು. ಕಾರಿನ ಮಾಲೀಕರು ನೀಡುವ ದೂರು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
 


bengaluru

LEAVE A REPLY

Please enter your comment!
Please enter your name here