ರಾಜ್ಯಾದ್ಯಂತ ಮಳೆ ಕೊರತೆ ಮುಂದುವರೆದಿರುವಂತೆಯೇ ಭಾನುವಾರ ಬೆಂಗಳೂರಿನಲ್ಲಿ ಸಂಜೆ ಬಿರುಸಿನ ಮಳೆಯಾಗಿದೆ. ಬೆಂಗಳೂರು: ರಾಜ್ಯಾದ್ಯಂತ ಮಳೆ ಕೊರತೆ ಮುಂದುವರೆದಿರುವಂತೆಯೇ ಭಾನುವಾರ ಬೆಂಗಳೂರಿನಲ್ಲಿ ಸಂಜೆ ಬಿರುಸಿನ ಮಳೆಯಾಗಿದೆ.
ಸಂಜೆ 5.30ರ ನಂತರ ಶುರುವಾದ ಮಳೆ ಧಾರಾಕಾರವಾಗಿ ಸುರಿಯಿತು. ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಮಳೆ ಆರ್ಭಟಿಸಿದ್ದು, ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಬಾಪೂಜಿನಗರ, ನಾಯಂಡಹಳ್ಳಿ, ಕೆಂಗೇರಿ, ಆರ್‌ಆರ್‌ನಗರ, ಚಂದ್ರಾಲೇಔಟ್, ಜ್ಞಾನಭಾರತಿ, ಹೆಬ್ಬಾಳ, ಚೌಡೇಶ್ವರಿ, ಜಕ್ಕೂರು, ಮಹಾದೇವಪುರ, ಕೋರಮಂಗಲ, ಚಾಮರಾಜಾಪೇಟೆ, ಜಯನಗರ, ಜಕ್ಕಸಂದ್ರ, ರಾಜ್‌ಮಹಲ್ ಗುಟ್ಟಹಳ್ಳಿ, ವಿದ್ಯಾರಣ್ಯಪು ಸೇರಿದಂತೆ ನಾನಾ ಕಡೆಗಳಲ್ಲಿ ವ್ಯಾಪಕ ಮಳೆ ಸುರಿದಿದೆ.
Nice evening showers across West-South West-Central and parts of South Bangalore
Hope those who stepped out for Sunday evening shopping had Umbrella 🙂
Rainfall stats from today’s evening rainfall shared:
Hampi Nagar topping with 25mm
Kottegapalya : 22mm
Vidyapeeta: 22mm… https://t.co/UODGVW8ZlW pic.twitter.com/ZlQ8oEfznX
— Namma Karnataka Weather (@namma_vjy) July 2, 2023
ಕಾವೇರಿ ಜಂಕ್ಷನ್ ಅಂಡರ್‌ಪಾಸ್, ಶಿವಾನಂದ ವೃತ್ತದ ರೈಲ್ವೆ ಬ್ರಿಡ್ಜ್, ಕೆ.ಆರ್.ವೃತ್ತ ಅಂಡರ್‌ಪಾಸ್ ಸೇರಿದಂತೆ ವಿವಿಧ ರಸ್ತೆ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಉಕ್ಕಿಹರಿಯಿತು. ಕೆಆರ್ ಮಾರುಕಟ್ಟೆ ರಸ್ತೆ ಮತ್ತು ಮೇಲ್ಸೇತುವೆ, ಹೊಸೂರು ರಸ್ತೆ, ಟೌನ್‌ಹಾಲ್ ಮುಂಭಾಗ, ಚಾಲುಕ್ಯ ವೃತ್ತ, ಮಲ್ಲೇಶ್ವರಂ, ರಾಜಾಜಿನಗರ ಶ್ರೀರಾಮ ದೇವಾಸ್ಥಾನ, 80 ಅಡಿ ರಸ್ತೆ, ಪಾದರಾಯನಪುರ, ಮೈಸೂರು ರಸ್ತೆ ಹಾಗೂ ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಮಳೆ ನೀರು ನಿಂತಿತ್ತು.