Home Uncategorized ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗಾಗಿ 8 ಸಾವಿರ ಕೋಟಿ ರೂ. ಬಿಡುಗಡೆ: ಸಿಎಂ ಬೊಮ್ಮಾಯಿ

ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗಾಗಿ 8 ಸಾವಿರ ಕೋಟಿ ರೂ. ಬಿಡುಗಡೆ: ಸಿಎಂ ಬೊಮ್ಮಾಯಿ

26
0

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ರೂ. 8,000 ಕೋಟಿ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರು: ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ರೂ. 8,000 ಕೋಟಿ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬೂತ್ ವಿಜಯ್ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ಬೆಂಗಳೂರಿನ ಇತಿಹಾಸದಲ್ಲಿಯೇ ಕಂಡು ಕೇಳರಿಯದಂತಹ ಮಳೆ ಸುರಿಯಿತು.ಇದರಿಂದ ಸಹಜವಾಗಿಯೇ ಮೂಲಸೌಕರ್ಯಕ್ಕೆ ಹಾನಿಯಾಯಿತು. ಈ ಕಾರಣಕ್ಕಾಗಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ದಿಗಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. 

ಬೆಂಗಳೂರಿನ ಇತಿಹಾಸದಲ್ಲಿಯೇ ಕಂಡು ಕೇಳರಿಯದಂತಹ ಮಳೆ ಈ ಬಾರಿ ಸುರಿಯಿತು.ಇದರಿಂದ ಸಹಜವಾಗಿಯೇ ಮೂಲಸೌಕರ್ಯಕ್ಕೆ ಹಾನಿಯಾಯಿತು. ಈ ಕಾರಣಕ್ಕಾಗಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ದಿಗೆಂದು ₹8000 ಕೋಟಿಯನ್ನು ನಮ್ಮ ಸರ್ಕಾರ ಬಿಡುಗಡೆಗೊಳಿಸಿದೆ. ‌
1/2 pic.twitter.com/1rlKqDDUkF
— Basavaraj S Bommai (@BSBommai) January 2, 2023

ಬೂತ್ ಮಟ್ಟದ ಸಂಘಟನೆ, ಇದೊಂದು ದ್ವಿಮುಖ ಪ್ರಕ್ರಿಯೆ. ಸರ್ಕಾರಗಳ ಸಾಧನೆಯನ್ನು ತಳಮಟ್ಟದಲ್ಲಿರುವ ಬೂತ್ ಗೆ ತಿಳಿಸುವ ಜೊತೆಗೆ  ಮೂಲಭೂತ ಸಮಸ್ಯೆಗಳು ಸಹ ತಿಳಿಯುತ್ತವೆ. ಹೀಗಾಗಿ ನಮ್ಮ ವರಿಷ್ಠರು “ಬೂತ್ ಗೆದ್ದರೇ, ದೇಶ ಗೆದ್ದ ಹಾಗೆ”ಎಂದು ಹೇಳುತ್ತಾರೆ. ಬೇರೆ ಯಾವ ಪಕ್ಷಗಳು ಮಾಡದಂತಹ ಬೂತ್ ಮಟ್ಟದ ಸಂಘಟನೆಯ ಕೆಲಸವನ್ನು ಪಕ್ಷ ಮಾಡುತ್ತಿರುವುದು  ಹೆಮ್ಮೆಯ ವಿಷಯವಾಗಿದೆ ಎಂದರು. 

ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ರಾಜಕೀಯ ಪಕ್ಷವೆಂದರೇ ಅದು ಬಿಜೆಪಿ. ಇದಕ್ಕೆ ನರೇಂದ್ರ ಮೋದಿ ಯವರಂತಹ ಸಮರ್ಥ ವಿಶ್ವಮಾನ್ಯ ನಾಯಕನ ನಾಯಕತ್ವವಿದೆ. ಹೀಗಾಗಿ ಭಾರತ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ಸದೃಢವಾಗಿ ಮುಂದೆ ಸಾಗುತ್ತಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು. 

LEAVE A REPLY

Please enter your comment!
Please enter your name here