Home Uncategorized ಬೆಂಗಳೂರು: ಅಮ್ಮ ಮಲಗಿದ್ದಾರೆಂದು ಭಾವಿಸಿ, ಶವದ ಜೊತೆ ಎರಡು ದಿನ ಕಳೆದ ಬಾಲಕ!

ಬೆಂಗಳೂರು: ಅಮ್ಮ ಮಲಗಿದ್ದಾರೆಂದು ಭಾವಿಸಿ, ಶವದ ಜೊತೆ ಎರಡು ದಿನ ಕಳೆದ ಬಾಲಕ!

9
0
Advertisement
bengaluru

14 ವರ್ಷದ ಬಾಲಕ ತನ್ನ ಮೃತ ತಾಯಿಯ ಶವದೊಂದಿಗೆ ಎರಡು ದಿನ ಕಳೆದಿರುವ ಆಘಾತಕಾರಿ ಘಟನೆ ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು: 14 ವರ್ಷದ ಬಾಲಕ ತನ್ನ ಮೃತ ತಾಯಿಯ ಶವದೊಂದಿಗೆ ಎರಡು ದಿನ ಕಳೆದಿರುವ ಆಘಾತಕಾರಿ ಘಟನೆ ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸರ ಪ್ರಕಾರ ಬಾಲಕನಿಗೆ ತನ್ನ ತಾಯಿ ಸತ್ತಿರುವುದು ಗೊತ್ತಿರಲಿಲ್ಲ, ಆಕೆ ಕೋಪಗೊಂಡಿದ್ದರಿಂದ ಮಲಗಿದ್ದಾಳೆ ಹೀಗಾಗಿ ತನ್ನ ಜೊತೆ ಮಾತನಾಡುವುದಿಲ್ಲ ಎಂದು ಅ ಬಾಲಕ ಭಾವಿಸಿದ್ದ.

ಆರ್.ಟಿ.ನಗರ ಠಾಣೆ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಗಂಗಮ್ಮ ದೇವಸ್ಥಾನ ಬಳಿ ಇರುವ ಮನೆಯಲ್ಲಿ ಫೆಬ್ರವರಿ 26 ರಂದು ಲೋ ಬಿಪಿ ಮತ್ತು ಶುಗರ್​ನಿಂದಾಗಿ  44 ವರ್ಷದ ಅಣ್ಣಮ್ಮ ಮಲಗಿದ್ದಲ್ಲೇ ಮೃತಪಟ್ಟಿದ್ದರು. ಫೆಬ್ರವರಿ‌ 28ರ ವರೆಗೂ ಬಾಲಕ ತನ್ನ ತಾಯಿಯ ಶವದ ಜೊತೆಗೆ ಕಾಲ ಕಳೆದಿದ್ದಾನೆ.

ಹೊರಗೆ ಬಂದು ಊಟ, ತಿಂಡಿ‌ ತೆಗೆದುಕೊಂಡು‌ ಮತ್ತೆ ಮನೆ ಸೇರಿಕೊಳ್ಳುತ್ತಿದ್ದನಂತೆ. ರಾತ್ರಿ ಪೂರ್ತಿ ತಾಯಿಯ ಜೊತೆಯಲ್ಲೇ ಮಲಗಿ ಕಾಲ‌ ಕಳೆಯುತ್ತಿದ್ದನಂತೆ. ಆದರೆ ಏರಿಯಾದ ಜನರಿಗೆ ತಾಯಿ ಸಾವಿನ ಬಗ್ಗೆ ಕೊಂಚವೂ ಮಾಹಿತಿ ನೀಡಿಲ್ಲ.

bengaluru bengaluru

ನಂತರ ತಂದೆ ಸ್ನೇಹಿತರಿಗೆ ತನ್ನ ತಾಯಿ ಮಾತನಾಡುತ್ತಿಲ್ಲ ಎಂದು ಹೇಳಿದ್ದನಂತೆ. ಆಗ ಸ್ನೇಹಿತರು ಮನೆಗೆ ಬಂದು ನೋಡಿದಾಗ ಅಣ್ಣಮ್ಮ ಮೃತಪಟ್ಟಿರುವುದು ಗೊತ್ತಾಗಿದೆ. ಒಂದು ವರ್ಷದ ಹಿಂದೆಯಷ್ಟೇ ಕಿಡ್ನಿ ವೈಫಲ್ಯದಿಂದ ಅಣ್ಣಮ್ಮ ಪತಿ ಸಾವನ್ನಪ್ಪಿದ್ದರು. ತಾಯಿ ಮತ್ತು ಮಗ ಇಬ್ಬರೇ ಮನೆಯಲ್ಲಿ ವಾಸವಿದ್ರು. ಆದ್ರೆ ಈಗ ತಾಯಿ ಕೂಡ ಮೃತಪಟ್ಟಿದ್ದಾರೆ.

 


bengaluru

LEAVE A REPLY

Please enter your comment!
Please enter your name here