Home Uncategorized ಬೆಂಗಳೂರು: ಎಸ್ ಎಂವಿಟಿ ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಡ್ರಮ್ ನೊಳಗೆ ಅಪರಿಚಿತ ಮಹಿಳೆ ಶವ ಪತ್ತೆ

ಬೆಂಗಳೂರು: ಎಸ್ ಎಂವಿಟಿ ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಡ್ರಮ್ ನೊಳಗೆ ಅಪರಿಚಿತ ಮಹಿಳೆ ಶವ ಪತ್ತೆ

4
0
bengaluru

ನಿನ್ನೆ ಸೋಮವಾರ ರಾತ್ರಿ ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.  ಬೆಂಗಳೂರು: ನಿನ್ನೆ ಸೋಮವಾರ ರಾತ್ರಿ ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. 

ಮೂವರು ವ್ಯಕ್ತಿಗಳು ಡ್ರಮ್ ನ್ನು ಹೊತ್ತೊಯ್ದು ರೈಲು ನಿಲ್ದಾಣದಲ್ಲಿ ಬಿಟ್ಟಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.ಹಂತಕರು ಮಹಿಳೆ ಕೊಂದು ಡ್ರಮ್ ನಲ್ಲಿ ತುಂಬಿ ರೈಲು ನಿಲ್ದಾಣದಲ್ಲಿ ಇರಿಸಿ ಎಸ್ಕೇಪ್ ಆಗಿದ್ದಾರೆ. 

ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್ ಬಳಿ ಮಹಿಳೆ ಶವ ಪತ್ತೆಯಾಗಿದೆ. ಹಂತಕರು ಬೆಳಗ್ಗೆ 10-11 ಗಂಟೆ ಸುಮಾರಿಗೆ ಡ್ರಮ್ ತಂದಿಟ್ಟಿದ್ದಾರೆ. ಮೂವರು ಡ್ರಮ್ ತಂದಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಗಾದರೆ ಬೆಂಗಳೂರಿನಲ್ಲಿ ಸರಣಿ ಹಂತಕರು ಮತ್ತೆ ಸಕ್ರಿಯರಾಗಿದ್ದಾರೆಯೇ ಎಂಬ ಅನುಮಾನಗಳು ಕಾಡುತ್ತಿವೆ.

ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. 

bengaluru
bengaluru

LEAVE A REPLY

Please enter your comment!
Please enter your name here