Home Uncategorized ಬೆಂಗಳೂರು: ಕರ್ತವ್ಯದ ವೇಳೆ ಹೃದಯಾಘಾತವಾಗಿ ಹೆಬ್ಬಾಳ ಠಾಣೆ ಹೆಡ್ ಕಾನ್ಸ್‌ಟೇಬಲ್ ಸಾವು!

ಬೆಂಗಳೂರು: ಕರ್ತವ್ಯದ ವೇಳೆ ಹೃದಯಾಘಾತವಾಗಿ ಹೆಬ್ಬಾಳ ಠಾಣೆ ಹೆಡ್ ಕಾನ್ಸ್‌ಟೇಬಲ್ ಸಾವು!

16
0
Advertisement
bengaluru

ಹೆಬ್ಬಾಳ ಠಾಣೆಯ ಕಾನ್ಸ್‌ಟೇಬಲ್ ವಿರೂಪಾಕ್ಷಪ್ಪ ಕರ್ತವ್ಯದ ವೇಳೆ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಪಾಳಿ ಕರ್ತವ್ಯಕ್ಕೆ ಹಾಜರಾಗಿದ್ದ ವಿರೂಪಾಕ್ಷಪ್ಪ, ಬೆಳಗ್ಗೆ 7 ಗಂಟೆ ಸಮಯದಲ್ಲಿ ಹೊಯ್ಸಳ ವಾಹನದಲ್ಲಿ ರೌಂಡ್ಸ್ ನಲ್ಲಿದ್ದಾಗ ತಲೆಸುತ್ತಿ ಬಿದ್ದಿದ್ದರು. ಬೆಂಗಳೂರು: ನಗರದಲ್ಲಿ ಹೃದಯಘಾತದಿಂದ ಹೆಡ್ ಕಾನ್ಸ್‌ಟೇಬಲ್ ಸಾವನ್ನಪ್ಪಿದ್ದಾರೆ. ಹೆಬ್ಬಾಳ ಠಾಣೆಯ ಕಾನ್ಸ್‌ಟೇಬಲ್ ವಿರೂಪಾಕ್ಷಪ್ಪ ಕರ್ತವ್ಯದ ವೇಳೆ ಸಾವನ್ನಪ್ಪಿದ್ದಾರೆ.

ನಿನ್ನೆ ರಾತ್ರಿ ಪಾಳಿ ಕರ್ತವ್ಯಕ್ಕೆ ಹಾಜರಾಗಿದ್ದ ವಿರೂಪಾಕ್ಷಪ್ಪ, ಬೆಳಗ್ಗೆ 7 ಗಂಟೆ ಸಮಯದಲ್ಲಿ ಹೊಯ್ಸಳ ವಾಹನದಲ್ಲಿ ರೌಂಡ್ಸ್ ನಲ್ಲಿದ್ದಾಗ ತಲೆಸುತ್ತಿ ಬಿದ್ದಿದ್ದರು, ಇದೇ ವೇಳೆ ಪೊಲೀಸರು ಹೊಯ್ಸಳ ವಾಹನದಲ್ಲೇ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಿಸಿದದ್ದರು.

ಹೆಡ್ ಕಾನ್ಸ್‌ಟೇಬಲ್ ವಿರೂಪಾಕ್ಷಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ವಿರೂಪಾಕ್ಷಪ್ಪ ಮೂಲತಃ ಬಿಜಾಪುರ ಜಿಲ್ಲೆಯಯವರಾಗಿದ್ದು, 2008 ರಲ್ಲಿ ಪೊಲೀಸ್ ಇಲಾಖೆ ಆಯ್ಕೆಯಾಗಿದ್ದರು.

ಮೃತ ವಿರೂಪಾಕ್ಷ ಕಳೆದ ಹಲವು ವರ್ಷಗಳಿಂದ ದೇವನಹಳ್ಳಿ ಠಾಣೆ, ಏರ್ಪೋಟ್ ಪೊಲೀಸ್ ಠಾಣೆ ಸೇರಿದಂತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಕರ್ತವ್ಯದ ಜೊತೆಗೆ ಹಲವು ಸಾಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು.

bengaluru bengaluru

ಜತೆಗೆ ಕೊರೋನಾ ಸಂದರ್ಭದಲ್ಲಿ ಬಡವರು ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ದೇವನಹಳ್ಳಿ ಸುತ್ತಾಮುತ್ತ ಜನಮನ್ನಣೆ ಗಳಿಸಿ ಇತ್ತೀಚೆಗಷ್ಟೆ ಇಲಾಖೆಯ ಬಡ್ತಿ ಮೇರೆಗೆ ದೇವನಹಳ್ಳಿ ಠಾಣೆಯಿಂದ ಹೆಬ್ಬಾಳ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.


bengaluru

LEAVE A REPLY

Please enter your comment!
Please enter your name here