Home Uncategorized ಬೆಂಗಳೂರು: ಕೆರೆ ಉಳಿಸಲು ಆಸಕ್ತಿ ತೋರದ ಅಧಿಕಾರಿಗಳು: ಕೆಎಸ್‌ಪಿಸಿಬಿ, ಮೀನುಗಾರಿಕೆ ಇಲಾಖೆ ವಿರುದ್ಧ ಹೋರಾಟಗಾರರ ಕಿಡಿ

ಬೆಂಗಳೂರು: ಕೆರೆ ಉಳಿಸಲು ಆಸಕ್ತಿ ತೋರದ ಅಧಿಕಾರಿಗಳು: ಕೆಎಸ್‌ಪಿಸಿಬಿ, ಮೀನುಗಾರಿಕೆ ಇಲಾಖೆ ವಿರುದ್ಧ ಹೋರಾಟಗಾರರ ಕಿಡಿ

3
0
bengaluru

ಬೆಂಗಳೂರು ಮತ್ತು ವಿವಿಧ ಪಂಚಾಯತ್ ವ್ಯಾಪ್ತಿಯಲ್ಲಿನ ಕೆರೆಗಳ ಉಳಿಸಿದಲು ಆಸಕ್ತಿ ತೋರದ ಕೆಎಸ್‌ಪಿಸಿಬಿ, ಮೀನುಗಾರಿಕೆ ಇಲಾಖೆ ವಿರುದ್ಧ ಹೋರಾಟಗಾರರು ತೀವ್ರವಾಗಿ ಕಿಡಿಕಾರಿದ್ದಾರೆ. ಬೆಂಗಳೂರು: ಬೆಂಗಳೂರು ಮತ್ತು ವಿವಿಧ ಪಂಚಾಯತ್ ವ್ಯಾಪ್ತಿಯಲ್ಲಿನ ಕೆರೆಗಳ ಉಳಿಸಿದಲು ಆಸಕ್ತಿ ತೋರದ ಕೆಎಸ್‌ಪಿಸಿಬಿ, ಮೀನುಗಾರಿಕೆ ಇಲಾಖೆ ವಿರುದ್ಧ ಹೋರಾಟಗಾರರು ತೀವ್ರವಾಗಿ ಕಿಡಿಕಾರಿದ್ದಾರೆ.
 
ಕೆರೆಗಳಲ್ಲಿನ ಮಾಲಿನ್ಯ ಗುರುತಿಸುವಲ್ಲಿ ಕೆಎಸ್‌ಪಿಸಿಬಿ ನಿರತವಾಗಿದ್ದಾರೆ. ಕೇವಲ ವಾಣಿಜ್ಯ ಚಟುವಟಿಕೆಗಳ ಬಗ್ಗೆ ಕಾಳಜಿ ವಹಿಸುವುದರಲ್ಲಿ ಮೀನುಗಾರಿಕಾ ಇಲಾಖೆ ನಿರತವಾಗಿದೆ ಎಂದು ಹೋರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಫ್ರೆಂಡ್ಸ್ ಆಫ್ ಲೇಕ್ಸ್‌ನ ಸಂಚಾಲಕ ರಾಮ್ ಪ್ರಸಾದ್ ಅವರು ಮಾತನಾಡಿ, ಮಾಲಿನ್ಯ ಮತ್ತು ನಿಯಂತ್ರಣ ಕಾರ್ಯವಿಧಾನದಲ್ಲಿ ಕೆಎಸ್‌ಪಿಸಿಬಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು. ಆದರೆ, ಕೇವಲ ಕಲುಷಿತ ಕೆರೆಗಳನ್ನು ಮಾತ್ರ ಗುರುತಿಸುವಲ್ಲಿ ನಿರತವಾಗಿದೆ. ಅದೇ ರೀತಿ ನೀರಿನ ಮಾದರಿ ಪಡೆದು ರೈತರಿಗೆ ನೆರವಾಗಬೇಕಾದ ಮೀನುಗಾರಿಕೆ ಇಲಾಖೆ ಕೇವಲ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೋಣ: ಇನ್ನೂ ಮುಗಿಯದ ಜಿಗಳೂರು ಕೆರೆ ಕಾಮಗಾರಿ; ಉದ್ಘಾಟನೆಗೆ ಸಿಎಂ ಬೊಮ್ಮಾಯಿ ತರಾತುರಿ!

ಕೆರೆಗಳ ಉಳಿವು ಕೆಎಸ್‌ಪಿಸಿಬಿ ಮತ್ತು ಮೀನುಗಾರಿಕೆ ಇಲಾಖೆಯ ಪಾತ್ರವನ್ನು ಅವಲಂಬಿಸಿರುತ್ತದೆ. ಕೆಎಸ್‌ಪಿಸಿಬಿ ಕೇವಲ ಸ್ಥಳಕ್ಕೆ ಭೇಟಿ ನೀಡುವುದಷ್ಟೇ ಅಲ್ಲದೆ, ಕೆರೆಗಳನ್ನು ಕಲುಷಿತಗೊಳಿಸುವ ಸಂಸ್ಥೆಗಳಿಗೆ ದಂಡ ವಿಧಿಸುವ ಕೆಲಸ ಮಾಡಬೇಕು. ಬಹುತೇಕ ಪ್ರಕರಣಗಳಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಾತ್ರ ಕ್ರಮ ಕೈಗೊಳ್ಳುತ್ತಿದೆ. ಮೀನುಗಾರಿಕೆ ಇಲಾಖೆ ಕೇವಲ ವಾಣಿಜ್ಯ ಮೀನುಗಾರಿಕೆಗೆ ಉತ್ತೇಜನ ನೀಡುತ್ತಿದ್ದು, ಇದು ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

bengaluru

ಆಕ್ಷನ್ ಏಯ್ಡ್‌ನ ಪ್ರಾಜೆಕ್ಟ್ ಲೀಡ್ ಆಗಿರುವ ರಾಘವೇಂದ್ರ ಪಚ್ಚಾಪುರ ಅವರು ಮಾತನಾಡಿ, 21 ಕೆರೆಗಳು ಈಗಾಗಲೇ ವರ್ಗ-ಇನಲ್ಲಿವೆ. ಅದರೆ, ಈ ಕೆರೆಗಳು ವನ್ಯಜೀವಿ ಮತ್ತು ಮೀನುಗಾರಿಕೆಗೆ ಯೋಗ್ಯವಾಗಿಲ್ಲ ಎಂಬುದು ವರದಿಗಳಿಂದ ತಿಳಿದುಬಂದಿದೆ. “2022ರ ಜನವರಿಯಿಂದ ಡಿಸೆಂಬರ್‌ವರೆಗೆ 16 ಮೀನುಗಳು ಸಾವನ್ನಪ್ಪಿವೆ. ಕೆಎಸ್‌ಪಿಸಿಬಿ ಕೇವಲ ನೀರಿನ ಮಾದರಿಗಳನ್ನು ಮಾತ್ರ ಪರೀಕ್ಷಿಸುತ್ತಿದೆ, ಅದು ಕೂಡ ಬೆಂಗಳೂರಿನ ಶೇ.50 ಕೆರೆಗಳಲ್ಲಿ ಮಾತ್ರ ಪರೀಕ್ಷೆ ನಡೆಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here