Home Uncategorized ಬೆಂಗಳೂರು: ಗರ್ಭಿಣಿ ಪತ್ನಿಯನ್ನು ಕೊಂದು, ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ಮೆಕ್ಯಾನಿಕ್ ಬಂಧನ

ಬೆಂಗಳೂರು: ಗರ್ಭಿಣಿ ಪತ್ನಿಯನ್ನು ಕೊಂದು, ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ಮೆಕ್ಯಾನಿಕ್ ಬಂಧನ

25
0

ಪತ್ನಿಯ ನಡತೆಯನ್ನು ಶಂಕಿಯ ಗರ್ಭಿಣಿಯಾಗಿದ್ದ ಆಕೆಯನ್ನು ಕೊಲೆ ಮಾಡಿ ದೆಹಲಿಗೆ ಪರಾರಿಯಾಗಿದ್ದ 30 ವರ್ಷದ ವ್ಯಕ್ತಿಯನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು: ಪತ್ನಿಯ ನಡತೆಯನ್ನು ಶಂಕಿಯ ಗರ್ಭಿಣಿಯಾಗಿದ್ದ ಆಕೆಯನ್ನು ಕೊಲೆ ಮಾಡಿ ದೆಹಲಿಗೆ ಪರಾರಿಯಾಗಿದ್ದ 30 ವರ್ಷದ ವ್ಯಕ್ತಿಯನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ನಾಸೀರ್ ಹುಸೇನ್ ಎಂದು ಗುರುತಿಸಲಾಗಿದ್ದು, ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ. ಕಳೆದ ಸೋಮವಾರ

ತಮ್ಮ ನಿವಾಸದಲ್ಲಿ ಪತ್ನಿ ನಾಜ್ ಖಾನುಮ್ (22) ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ.

ಖಾನುಮ್ ಅವರನ್ನು ಕತ್ತು ಹಿಸುಕಿ ಕೊಂದ ನಂತರ, ಹುಸೇನ್ ತನ್ನ ಸಹೋದರ ಅಯೂಬ್ ಖಾನ್‌ಗೆ ಸಂದೇಶ ಕಳುಹಿಸಿದ್ದು, ತಾನು ಖಾನುಮ್‌ನನ್ನು ಕೊಲೆ ಮಾಡಿರುವುದಾಗಿ ಮತ್ತು ಶವವನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ದಾನೆ.

‘ಹತ್ಯೆಗೆ ಕೆಲವು ದಿನಗಳ ಮೊದಲು ಹುಸೇನ್ ದೆಹಲಿಗೆ ವಿಮಾನದ ಟಿಕೆಟ್ ಕಾಯ್ದಿರಿಸಿದ್ದ ಮತ್ತು ಕೊಲೆಯ ನಂತರ ವಿಮಾನದಲ್ಲಿ ಪ್ರಯಾಣಿಸಿದ್ದರಿಂದ ಇದು ಯೋಜಿತ ಕೊಲೆ ಎಂದು ಕಂಡುಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here