Home Uncategorized ಬೆಂಗಳೂರು: ಪರಿಚಿತ ಮಹಿಳೆಯ ಖಾಸಗಿ ವಿಡಿಯೋ ವೈರಲ್ ಮಾಡಿ ಸೆಕ್ಸ್ ಗೆ ಒತ್ತಾಯ, ಆರೋಪಿ ಬಂಧನ

ಬೆಂಗಳೂರು: ಪರಿಚಿತ ಮಹಿಳೆಯ ಖಾಸಗಿ ವಿಡಿಯೋ ವೈರಲ್ ಮಾಡಿ ಸೆಕ್ಸ್ ಗೆ ಒತ್ತಾಯ, ಆರೋಪಿ ಬಂಧನ

38
0
Advertisement
bengaluru

ಪರಿಚಿತ ಮಹಿಳೆಯ ಖಾಸಗಿ ಫೋಟೋ, ವಿಡಿಯೋಗಳನ್ನು ವೈರಲ್ ಮಾಡಿ ದೈಹಿಕ ಸಂಪರ್ಕಕ್ಕೆ ಪೀಡಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸಮರ್ ಪರಿಮಣಿಕ ಬಂಧಿತ ಆರೋಪಿಯಾಗಿದ್ದು, ಹಲಸೂರಿನ ಬಾಡಿಗೆ ಮನೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ. ಬೆಂಗಳೂರು: ಪರಿಚಿತ ಮಹಿಳೆಯ ಖಾಸಗಿ ಫೋಟೋ, ವಿಡಿಯೋಗಳನ್ನು ವೈರಲ್ ಮಾಡಿ ದೈಹಿಕ ಸಂಪರ್ಕಕ್ಕೆ ಪೀಡಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸಮರ್ ಪರಿಮಣಿಕ ಬಂಧಿತ ಆರೋಪಿಯಾಗಿದ್ದು, ಹಲಸೂರಿನ ಬಾಡಿಗೆ ಮನೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.

ಬ್ಯೂಟಿ ಪಾರ್ಲರ್ ವೊಂದರಲ್ಲಿ ಕೋರ್ಸ್ ಕಲಿಯಲು ಬಂದಿದ್ದ ಮಹಿಳೆಗೆ ಆರೋಪಿ ಸಮರ್ ಬ್ಯೂಟಿ ಪಾರ್ಲರ್‌ಗೆ ಗ್ರಾಹಕನಾಗಿ ಬಂದು ಪರಿಚಯಮಾಡಿಕೊಂಡಿದ್ದ. ಒಂದೂವರೆ ವರ್ಷದ ಪರಿಚಯ ಸ್ನೇಹವಾಗಿತ್ತು. ಇದಾದ ಬಳಿಕ ಮಹಿಳೆಯ ಖಾಸಗಿ ಫೋಟೋ, ವಿಡಿಯೋವನ್ನು ಸಂಗ್ರಹಿಸಿದ್ದ ಎನ್ನಲಾಗಿದೆ.

ಆರೋಪಿಯು ಮಹಿಳೆಗೆ  ಹಣ ನೀಡುವಂತೆ ಪದೇಪದೆ ಪೀಡಿಸುತ್ತಿದ್ದ. ಒತ್ತಡಕ್ಕೆ ಮಹಿಳೆ ಮಣಿಯದಿದ್ದಾಗ ಆಕೆಯ ಖಾಸಗಿ ವಿಡಿಯೋ ವೈರಲ್ ಮಾಡಿದ್ದಾನೆ ಎನ್ನಲಾಗಿದೆ.  ಬೆಂಗಳೂರಿನ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ಮಹಿಳೆ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


bengaluru

LEAVE A REPLY

Please enter your comment!
Please enter your name here