ಕೊಡಿಗೇಹಳ್ಳಿ ಪೊಲೀಸ್ ಠಾಣೆ ಬಳಿ ನಿಲ್ಲಿಸಲಾಗಿದ್ದ 51ಕ್ಕೂ ಹೆಚ್ಚು ಜಪ್ತಿ ಮಾಡಲಾದ ಬೈಕ್ ಗಳಿಗೆ ಭಾನುವಾರ ಆಕಸ್ಮಿಕ ಬೆಂಕಿ ಬಿದ್ದಿದ್ದು, ಸುಟ್ಟು ಕರಕಲಾಗಿವೆ. ಬೆಂಗಳೂರು: ಕೊಡಿಗೇಹಳ್ಳಿ ಪೊಲೀಸ್ ಠಾಣೆ ಬಳಿ ನಿಲ್ಲಿಸಲಾಗಿದ್ದ 51ಕ್ಕೂ ಹೆಚ್ಚು ಜಪ್ತಿ ಮಾಡಲಾದ ಬೈಕ್ ಗಳಿಗೆ ಭಾನುವಾರ ಆಕಸ್ಮಿಕ ಬೆಂಕಿ ಬಿದ್ದಿದ್ದು, ಸುಟ್ಟು ಕರಕಲಾಗಿವೆ.
ವಿವಿಧ ಕೇಸ್ ಗಳಲ್ಲಿ ವಶಕ್ಕೆ ಪಡೆಯಲಾದ ಸುಮಾರು 100 ವಾಹನಗಳನ್ನು ಪೊಲೀಸ್ ಠಾಣೆ ಬಳಿ ಪಾರ್ಕಿಂಗ್ ಮಾಡಲಾಗಿದ್ದ ಬೈಕ್ ಗಳಿಗೆ ಬೆಂಕಿ ಬಿದ್ದಿದ್ದು, ತದನಂತರ ಇತರ ವಾಹನಗಳನ್ನು ಹಬ್ಬಿದೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಹೊತ್ತಿಗೆ ಸುಮಾರು 51 ಬೈಕ್ ಗಳು ಸುಟ್ಟು ಕರಕಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕಿದ್ದಂತೆ ಬೆಂಕಿ ಕಾಣಿಸಿಕೊಳ್ಳಲು ಕಾರಣ ಇನ್ನೂ ತಿಳಿದುಬಂದಿಲ್ಲ, ಪೂರ್ವ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಎಂ. ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಲನೆ ನಡೆಸಿದ್ದು, ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಆದಾಗ್ಯೂ, ಕೆಲವೊಂದು ಬೈಕ್ ಗಳನ್ನು 20ಕ್ಕಿಂತಲೂ ಹೆಚ್ಚು ವರ್ಷಗಳಿಂದ ಪಾರ್ಕಿಂಗ್ ಮಾಡಲಾಗಿತ್ತು. ಅವುಗಳ ವಿಲೇವಾರಿ ಮಾಡದ ಪೊಲೀಸರ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಆರೋಪಿಸಲಾಗಿದೆ.