Home Uncategorized ಬೆಂಗಳೂರು: ಬೋರ್'ವೆಲ್ ಪೈಪ್ ಕದ್ದು ಪರಾರಿಯಾಗಿದ್ದ ಖದೀಮರನ್ನು ಹಿಡಿದ ಸ್ಥಳೀಯರು!

ಬೆಂಗಳೂರು: ಬೋರ್'ವೆಲ್ ಪೈಪ್ ಕದ್ದು ಪರಾರಿಯಾಗಿದ್ದ ಖದೀಮರನ್ನು ಹಿಡಿದ ಸ್ಥಳೀಯರು!

11
0

ಬೋರ್ ವೆಲ್ ಪೈಪ್ ಕದ್ದು ಪರಾರಿಯಾಗಿದ್ದ ಖದೀಮರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿರುವ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ. ಬೆಂಗಳೂರು: ಬೋರ್ ವೆಲ್ ಪೈಪ್ ಕದ್ದು ಪರಾರಿಯಾಗಿದ್ದ ಖದೀಮರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿರುವ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ.

ಕೆಟ್ಟು ನಿಂತಿದ್ದ ಬೋರ್’ವೆಲ್’ನ ಮೋಟಾರ್ ಮತ್ತು ಉದ್ದದ ಪೈಪ್’ನ್ನು ಬಿಬಿಎಂಪಿ ಗುತ್ತಿಗೆದಾರರೊಬ್ಬರು ತೆಗೆದಿದ್ದಾರೆ. ನಂತರ ಪೈಪ್ ನ್ನು ಹೊರಗೇ ಇಟ್ಟು, ರಿಪೇರಿ ಮಾಡಿಸಲು ಮೋಟಾರ್’ನ್ನು ತೆಗೆದುಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿದ್ದ ಖದೀಮರು ಬೈಕ್ ಲ್ಲಿ ಬಂದು, ಪೈಪ್ ತೆಗೆದುಕೊಂಡು ಹೋಗಿ ಸ್ಕ್ರ್ಯಾಪ್ ಡೀಲರ್’ಗೆ ಮಾರಾಟ ಮಾಡಿದ್ದಾರೆ.

ಪೈಪ್ ಕಳ್ಳತನವಾಗಿರುವುದನ್ನು ಟ್ರಿನಿಟಿ ಎನ್‌ಕ್ಲೇವ್ ನಿವಾಸಿಗಳ ಸಂಘದ ಸದಸ್ಯ ಕೊಚ್ಚು ಶಂಕರ್ ಅವರು ಗಮನಿಸಿ, ಇತರೆ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಈ ಪ್ರದೇಶದಲ್ಲಿ ಸುಮಾರು 100 ಕುಟುಂಬಗಳು ಬೋರ್ ವೆಲ್ ನಿಂದ ನೀರು ಬಳಕೆ ಮಾಡುತ್ತಿದೆ. ಇದು ನಮ್ಮ ನೀರಿನ ಮೂಲವಾಗಿತ್ತು. ಬಿಬಿಎಂಪಿ ಗುತ್ತಿಗೆದಾರರು 15 ಅಡಿ ಪೈಪ್ ತೆಗೆದು ಹೊರಗಿಟ್ಟು ಹೋಗಿದ್ದರು. ಪೈಪ್ ತೆಗೆದು ಹಲವು ದಿನಗಳಾದರೂ ವಾಪಸ್ ಬಂದಿರಲಿಲ್ಲ. ನೀರಿನ ಸಮಸ್ಯೆಯಿಂದ ಪರದಾಡುತ್ತಿದ್ದೇವೆ. ಸಂಜೆ ವೇಳೆ ಬಹುತೇಕ ಸ್ಥಳೀಯ ನಿವಾಸಿಗಳು ಆಟದ ಮೈದಾನದಲ್ಲಿ ಕಾಲ ಕಳೆಯುವುದುಂಟು ಈ ಸಂದರ್ಭದಲ್ಲಿ ಪೈಪ್ ಕದಿಯಲಾಗಿತ್ತು ಎಂದು ಶಂಕರ್ ಅವರು ಹೇಳಿದ್ದಾರೆ,

ಇದನ್ನೂ ಓದಿ: ಬೆಂಗಳೂರು: 2 ಸಾವಿರ ಕೆಜಿ ಡ್ರಗ್ಸ್ ನಾಶಪಡಿಸಿದ ಪೊಲೀಸರು!

ಪೈಪ್ ಕಳ್ಳತನವಾದ ಹಿನ್ನೆಲೆಯಲ್ಲಿ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೆವು. ನಂತರ ಪೊಲೀಸರಿಗೂ ದೂರು ನೀಡಿದ್ದೆವು. ನಂತರ ಸ್ಥಳೀಯ ಸ್ಕ್ರ್ಯಾಪ್ ಅಂಗಡಿಗಳಿಗೆ ಭೇಟಿ ನೀಡಿದ್ದೆವು. ಎನ್ಆರ್’ಐ ಲೇಔಟ್ ನಲ್ಲಿ ಅಂಗಡಿಯೊಂದರ ಬಳಿ ಪೈಪ್’ನ ಕೆಲವು ತುಂಡುಗಳು ಬಿದ್ದಿರುವುದು ಕಂಡು ಬಂದಿತು. ಈ ವೇಳೆ ವಿಚಾರಿಸಿದಾಗ ಇಬ್ಬರು ವ್ಯಕ್ತಿಗಳು ಪೈಪ್ ನೀಡಿದ್ದು, ರೂ.3,000ಕ್ಕೆ ಖರೀದಿ ಮಾಡಿದ್ದೆ, 1,500 ನೀಡಿದ್ದೇನೆ. ಉಳಿದ ಹಣವನ್ನು ಭಾನುವಾರ ನೀಡುತ್ತೇನೆಂದು ಹೇಳಿದ್ದೆ ಎಂದರು.

ಅಂಗಡಿ ಮಾಲೀಕನ ಹೇಳಿಕೆ ಬಳಿಕ ಖದೀಮರ ಹಿಡಿಯಲು ಸ್ಥಳೀಯ ನಿವಾಸಿಗಳು ಮರುದಿನ ಅಂಗಡಿ ಬಳಿ ಕಾದು ಕುಳಿತು, ಕೊನೆಗೂ ಖದೀಮರನ್ನು ಹಿಡಿದ್ದಾರೆ. ಕಳ್ಳರ ಹಿಡಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು 40 ನಿಮಿಷಗಳಲ್ಲಿ ಸ್ಥಳಕ್ಕೆ ಬಂದು, ಇಬ್ಬರನ್ನೂ ವಶಕ್ಕೆ ಪಡೆದುಕೊಂಡರು ಎಂದು ಶಂಕರ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here