Home Uncategorized ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕೆಟ್ಟು ನಿಂತ ಕಾರು: ಚಾಕು ತೋರಿಸಿ ದಂಪತಿ ದರೋಡೆ; ಪ್ರಯಾಣಿಕರ ಸುರಕ್ಷತೆ ಬಗ್ಗೆ...

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕೆಟ್ಟು ನಿಂತ ಕಾರು: ಚಾಕು ತೋರಿಸಿ ದಂಪತಿ ದರೋಡೆ; ಪ್ರಯಾಣಿಕರ ಸುರಕ್ಷತೆ ಬಗ್ಗೆ ಎದ್ದಿದೆ ಪ್ರಶ್ನೆ?

9
0
bengaluru

ಬೆಂಗಳೂರು-ಮೈಸೂರು ಹೊಸ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಕೆಟ್ಟು ನಿಂತ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ ಕಾಯುತ್ತಿದ್ದ ದಂಪತಿಯನ್ನು ಸ್ಕೂಟರ್‌ನಲ್ಲಿ ಬಂದ ಇಬ್ಬರು ದರೋಡೆಕೋರರು ಚಾಕು ತೋರಿಸಿ ದರೋಡೆ ಮಾಡಿದ್ದಾರೆ. ಬೆಂಗಳೂರು: ಬೆಂಗಳೂರು-ಮೈಸೂರು ಹೊಸ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಕೆಟ್ಟು ನಿಂತ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ ಕಾಯುತ್ತಿದ್ದ ದಂಪತಿಯನ್ನು ಸ್ಕೂಟರ್‌ನಲ್ಲಿ ಬಂದ ಇಬ್ಬರು ದರೋಡೆಕೋರರು ಚಾಕು ತೋರಿಸಿ ದರೋಡೆ ಮಾಡಿದ್ದಾರೆ.

ದಂಪತಿ ತಮ್ಮ ಸ್ನೇಹಿತರೊಬ್ಬರನ್ನು ನಾಯಂಡಹಳ್ಳಿಗೆ ಬಿಡಲು ಬೆಂಗಳೂರಿಗೆ ಬಂದಿದ್ದರು. ಮೈಸೂರಿಗೆ ವಾಪಸಾಗುವಾಗ ತಾಂತ್ರಿಕ ಸಮಸ್ಯೆಯಿಂದ ಕಾರು ಕೆಟ್ಟು ನಿಂತಿತು. ಕಾರನ್ನು ರಸ್ತೆ ಬದಿಗೆ  ನಿಲ್ಲಿಸಿದ ನಂತರ ಅವರು NHAI ಸಹಾಯವಾಣಿಗೆ ದೂರವಾಣಿ ಕರೆ ಮಾಡಿದರು, ಆದರೆ  ಅವರಿಂದ ಯಾವುದೇ ಸಹಾಯ ಸಿಗಲಿಲ್ಲ.

ದರೋಡೆ ಮಾಡಿದ ನಂತರ ಸಂತ್ರಸ್ತರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಸರಿಯಾದ ಬೀದಿ ದೀಪಗಳು, ಪೆಟ್ರೋಲಿಂಗ್ ಇಲ್ಲದ ಕಾರಣ ಎನ್‌ಎಚ್‌ಎಐ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ದೂರುದಾರರು ತೀವ್ರ ಅಸಮಾಧಾನಗೊಂಡಿದ್ದಾರೆ.

ರಾಮನಗರ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಚನ್ನಪಟ್ಟಣ ಬಳಿ ಈ ಘಟನೆ ನಡೆದಿದೆ. ಆರೋಪಿಗಳು ಸಂತ್ರಸ್ತ ಮಹಿಳೆಗೆ ಚಾಕು ತೋರಿಸಿ ಚಿನ್ನಾಭರಣ ಮತ್ತು 2.5 ಲಕ್ಷಕ್ಕೂ ಹೆಚ್ಚು ನಗದು ದೋಚಿದ್ದಾರೆ. ವೈದ್ಯಕೀಯ ಪ್ರತಿನಿಧಿ ಲೋಹಿತ್ ರಾವ್ ಮತ್ತು ಅವರ ಪತ್ನಿ ಮತ್ತು ನವೀನ್ ಅವರಿಗೆ ಚಾಕು ತೋರಿಸಿ ಬೆದರಿಸಿ ಸೋಮವಾರ ನಸುಕಿನ 1.50 ರ ಸುಮಾರಿಗೆ ದರೋಡೆ ಮಾಡಲಾಗಿದೆ. ಮೈಸೂರು ಪಟ್ಟಣದ ಹೊಸ ಎಕ್ಸ್‌ಪ್ರೆಸ್‌ವೇಯಲ್ಲಿ ದೇವರಹೊಸಹಳ್ಳಿ ಮತ್ತು ತಿಟ್ಟಮಾರನಹಳ್ಳಿ ಮಧ್ಯೆ ದಂಪತಿಯನ್ನು ದರೋಡೆ ಮಾಡಲಾಗಿದೆ.

bengaluru

ಆರೋಪಿಗಳು ಸರ್ವೀಸ್ ರಸ್ತೆಯಿಂದ ಬಂದ ನಂತರ ಕಾರಿನ ಬಳಿ ಬಂದು ವಿಂಡ್ ಶೀಲ್ಡ್ ಬಡಿಯಲು ಪ್ರಾರಂಭಿಸಿದರು. ಅವರಲ್ಲಿ ಒಬ್ಬ ಖಾಕಿ ಬಣ್ಣದ ಪ್ಯಾಂಟ್ ಧರಿಸಿದ್ದರಿಂದ, ನಾವು ಅವರನ್ನು ಪೊಲೀಸರು ಎಂದು ತಪ್ಪಾಗಿ ಭಾವಿಸಿ ಕಾರಿನ ಹೊರಗೆ ಬಂದೆವು. ಇಬ್ಬರು ಮಹಿಳೆಯರು ಕಾರಿನಲ್ಲಿ ಕುಳಿತಿದ್ದಾಗ ಒಬ್ಬ ಆರೋಪಿ ಒಳಗೆ ಕುಳಿತು ಚಾಕುವಿನಿಂದ ಹಿಡಿದುಕೊಂಡಿದ್ದ. ನಮಗೆ ಬೇರೆ ದಾರಿ ಇರಲಿಲ್ಲ ಮತ್ತು ನಮ್ಮ ಎಲ್ಲಾ ಬೆಲೆಬಾಳುವ ವಸ್ತುಗಳನ್ನು  ಕೊಡಬೇಕಾಯಿತು, ಆರೋಪಿಗಳಿಬ್ಬರು ಕಾರಿನಲ್ಲಿದ್ದ ಮಹಿಳೆಯರಿಗೆ ಹಾನಿ ಮಾಡುತ್ತಾರೆಂದು ನಮಗೆ ಭಯವಾಯಿತು ಎಂದು ರಾವ್ ಹೇಳಿದರು.

ತಾಂತ್ರಿಕ ತೊಂದರೆಯಿಂದ ಕಾರು ನಿಂತ ತಕ್ಷಣ, ಸಂತ್ರಸ್ತರು ಸಹಾಯ ಕೋರಿ NHAI ಟೋಲ್ ಫ್ರೀ ಸಂಖ್ಯೆ 1033 ಗೆ ಕರೆ ಮಾಡಿದರು. ನಮ್ಮನ್ನು ದರೋಡೆ ಮಾಡಿದ ನಂತರ, ಇಬ್ಬರೂ ಮುಖ್ಯ ರಸ್ತೆಯಲ್ಲಿ ನಡೆದು ಕತ್ತಲೆಯಲ್ಲಿ ಕಣ್ಮರೆಯಾದರು.  ಪ್ರಮುಖ ಅಂಶವೆಂದರೆ ಈ ರಸ್ತೆಯಲ್ಲಿ ಬೀದಿ ದೀಪಗಳಿಲ್ಲ ಎಂದು ಲೋಹಿತ್ ರಾವ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮೂವರು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು ಸಂತ್ರಸ್ತರ ಮುಂದೆ ಹಾಜರುಪಡಿಸಿದರು, ಆದರೆ ಆರೋಪಿಗಳನ್ನು ಸಂತ್ರಸ್ತರು ಗುರುತಿಸಲಿಲ್ಲ. ಆರೋಪಿಗಳು ವೃತ್ತಿಪರರಂತೆ ಕಾಣುತ್ತಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 392 ರ ಅಡಿಯಲ್ಲಿ ದರೋಡೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತನಿಖೆಯ ಭಾಗವಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here