Home Uncategorized ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಅಪಘಾತಕ್ಕೆ ಇದುವರೆಗೆ 100 ಸಾವು, 335 ಮಂದಿ ಗಾಯ: ಡಾ ಜಿ...

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಅಪಘಾತಕ್ಕೆ ಇದುವರೆಗೆ 100 ಸಾವು, 335 ಮಂದಿ ಗಾಯ: ಡಾ ಜಿ ಪರಮೇಶ್ವರ್

6
0
Advertisement
bengaluru

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಇದುವರೆಗೆ ಅಪಘಾತದಲ್ಲಿ 100 ಮಂದಿ ಮೃತಪಟ್ಟಿದ್ದು 335 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ಅಂಕಿಅಂಶ ಮಾಹಿತಿ ನೀಡಿದೆ. ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಇದುವರೆಗೆ ಅಪಘಾತದಲ್ಲಿ 100 ಮಂದಿ ಮೃತಪಟ್ಟಿದ್ದು 335 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ಅಂಕಿಅಂಶ ಮಾಹಿತಿ ನೀಡಿದೆ.

ಇಂದು ಮಂಗಳವಾರ ಸದನದಲ್ಲಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ್, ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಮಾಡಿಲ್ಲ. ಬಹಳಷ್ಟು ನ್ಯೂನತೆಗಳೊಂದಿಗೆ ದಶಪಥ ನಿರ್ಮಾಣ ಮಾಡಲಾಗಿದೆ. ರಸ್ತೆ ತಿರುವುಗಳಿಗೆ, ವೇಗ ಮಿತಿ‌ ಇಳಿಕೆಗೆ ಯಾವುದೇ ಸೂಚನಾ ಫಲಕಗಳಿಲ್ಲ. ವೇಗವಾಗಿ ವಾಹನ ಓಡಿಸಿ ಬಂದಾಗ ಅಪಘಾತಗಳಾಗುತ್ತಿವೆ ಎಂದರು.

ಅಲ್ಲದೆ ಇದುವರೆಗೆ 100 ಮಂದಿ ಪ್ರಾಣ ಕಳೆದುಕೊಂಡಿದ್ದು 335 ಮಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯನ್ನು ಕಳೆದ ಮಾರ್ಚ್ 13 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಗಂಟೆಗೆ 100 ರಿಂದ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಚಲಿಸುವಂತೆ ಎಕ್ಸ್‌ಪ್ರೆಸ್‌ವೇ ವಿನ್ಯಾಸಗೊಳಿಸಲಾಗಿದ್ದರೂ ಅಪಘಾತ ತಡೆಗೆ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಸರಿಯಾಗಿ ಅಳವಡಿಸದೇ ಇರುವುದು ಅಪಘಾತ, ಸಾವು-ನೋವುಗಳಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.


bengaluru

LEAVE A REPLY

Please enter your comment!
Please enter your name here