Home Uncategorized ಬೆಂಗಳೂರು – ಮೈಸೂರು ಕೆಎಸ್​ಆರ್​ಟಿಸಿ ಪ್ರಯಾಣ ದರ ಏರಿಕೆ; ಯಾವ ಬಸ್‌ನಲ್ಲಿ ಹೋದ್ರೆ ಎಷ್ಟು?

ಬೆಂಗಳೂರು – ಮೈಸೂರು ಕೆಎಸ್​ಆರ್​ಟಿಸಿ ಪ್ರಯಾಣ ದರ ಏರಿಕೆ; ಯಾವ ಬಸ್‌ನಲ್ಲಿ ಹೋದ್ರೆ ಎಷ್ಟು?

30
0

ಬೆಂಗಳೂರು:

ಬೆಂಗಳೂರು – ಮೈಸೂರು ಎಕ್ಸ್​ಪ್ರೆಸ್​ ವೇಯಲ್ಲಿ ಟೋಲ್ ಸಂಗ್ರಹ ಆರಂಭವಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ ಟಿಸಿ) ಉಭಯ ನಗರಗಳ ನಡುವಣ ಪ್ರಯಾಣ ದರ ಏರಿಕೆ ಮಾಡುವ ಮೂಲಕ ಶಾಕ್ ನೀಡಿದೆ.

ತೀವ್ರ ವಿರೋಧದ ನಡುವೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು – ಮೈಸೂರು ಎಕ್ಸ್​ಪ್ರೆಸ್​ ವೇಯಲ್ಲಿ ಇಂದು ಬೆಳಗ್ಗೆಯಿಂದ ಮೊದಲ ಹಂತದ ಟೋಲ್ ಸಂಗ್ರಹ ಆರಂಭಿಸಿದ್ದು, ಕೆಎಸ್ ಆರ್ ಟಿಸಿ ಈ ಟೋಲ್ ಶುಲ್ಕದ ಹೊರೆಯನ್ನು ಪ್ರಯಾಣಿಕರ ಹೆಗಲಿಗೆ ಹೊರಿಸಿದೆ.

ಬೆಂಗಳೂರು – ಮೈಸೂರು ಎಕ್ಸ್​ಪ್ರೆಸ್ ಎಕ್ಸ್‌ಪ್ರೆಸ್‌ವೇ ಮೂಲಕ ಸಂಚರಿಸುವ ನಿಗಮದ ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತಲಾ 15 ರೂ., ರಾಜಹಂಸ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತಲಾ 18 ರೂ. ಹಾಗೂ ಮಲ್ಟಿ ಆಕ್ಸಲ್ ಅಥವಾ ಇತರೆ ಐಷಾರಾಮಿ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತಲಾ 20 ರೂ. ಬಳಕೆದಾರರ ಶುಲ್ಕವಾಗಿ(ಟೋಲ್) ವಿಧಿಸಲಾಗುವುದು ಎಂದು ಕೆಎಸ್ ಆರ್ ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಉಭಯ ನಗರಗಳ ನಡುವಿನ ಎಲೆಕ್ಟ್ರಿಕ್ ಬಸ್ ಮತ್ತು ವೋಲ್ವೋ ಬಸ್‌ಗಳ ಟಿಕೆಟ್‌ಗಳಿಗೂ ಈ ದರ ಹೆಚ್ಚಳ ಅನ್ವಯವಾಗಲಿದೆ. ಟೋಲ್ ಶುಲ್ಕವನ್ನು ಭರಿಸುವುದಕ್ಕಾಗಿ ಮಾತ್ರ ಈ ದರ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಎಸ್ ಆರ್ ಟಿಸಿ ಹೇಳಿದೆ.

LEAVE A REPLY

Please enter your comment!
Please enter your name here