Home Uncategorized ಬೆಂಗಳೂರು: ಯುವತಿಯಿಂದ ಲೊಕೇಶನ್ ಶೇರ್; ಕಾಲ್​ ಗರ್ಲ್ ಬುಕ್ ಮಾಡಿ ಕಿಡ್ನಾಪ್ ಆದ ಇಬ್ಬರು- 8...

ಬೆಂಗಳೂರು: ಯುವತಿಯಿಂದ ಲೊಕೇಶನ್ ಶೇರ್; ಕಾಲ್​ ಗರ್ಲ್ ಬುಕ್ ಮಾಡಿ ಕಿಡ್ನಾಪ್ ಆದ ಇಬ್ಬರು- 8 ಮಂದಿ ಬಂಧನ!

27
0

ಯುವತಿ ಸೇರಿದಂತೆ ಮೂವರನ್ನು ಅಪಹರಣ ಮಾಡಿದ ಪ್ರಕರಣವನ್ನು ಬೇಗೂರು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ. ಬೆಂಗಳೂರು: ಯುವತಿ ಸೇರಿದಂತೆ ಮೂವರನ್ನು ಅಪಹರಣ ಮಾಡಿದ ಪ್ರಕರಣವನ್ನು ಬೇಗೂರು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ.

ಫೆಬ್ರವರಿ 17ರ ರಾತ್ರಿ ಸುಮಾರು 1.30ಕ್ಕೆ ಬನ್ನೇರುಘಟ್ಟ ರಸ್ತೆಯ ದೇವರಚಿಕ್ಕನಹಳ್ಳಿ ಬಳಿ ಯುವತಿ ಜೊತೆ ಮಂಜುನಾಥ್ ಮತ್ತು ರಜನೀಕಾಂತ್ ನಿಂತಿದ್ದರು. ಈ ವೇಳೆ ಅಲ್ಲಿಗೆ ನಾಲ್ಕು ಬೈಕ್​​ನಲ್ಲಿ ಬಂದ ಗ್ಯಾಂಗ್​ ನಮ್ಮ ಕಾರ್​ಗೆ ಡಿಕ್ಕಿಹೊಡೆದಿದ್ದೀರಿ ಎಂದು ಮಂಜುನಾಥ್ ಮತ್ತು ರಜನೀಕಾಂತ್ ಜೊತೆ ಜಗಳ ಮಾಡಿದ್ದಾರೆ. ನಂತರ ಕೆಲವೇ ಸಮಯದಲ್ಲಿ ಬಂದಿದ್ದ ಗ್ಯಾಂಗ್​ ಮೂವರನ್ನು ತಮ್ಮ ಕಾರ್​ನಲ್ಲಿಯೇ ಅಪಹರಿಸಿತ್ತು. ಕೋಳಿಫಾರಂ ಗೇಟ್ ಬಳಿ ಮಂಜುನಾಥ್ ಅಪಹರಣಕಾರರಿಂದ ತಪ್ಪಿಸಿಕೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದರು.

ಅಪಹರಣದ ವಿಷಯ ತಿಳಿಯುತ್ತಿದ್ದಂತೆ ಅಲರ್ಟ್​ ಆದ ಪೊಲೀಸರು ಮಾಹಿತಿ ಅಧರಿಸಿ ತನಿಖೆಗೆ ಇಳಿದಿದ್ದರು. ಅಪಹರಣಕ್ಕೊಳಗಾಗಿದ್ದ ರಜನೀಕಾಂತ್ ಎಂಬವರನ್ನು ರಕ್ಷಣೆ ಮಾಡಲಾಗಿದೆ. ಯುವತಿ ಓರ್ವ ಕಾಲ್​ ಗರ್ಲ್ ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಂಜುನಾಥ್ ಮತ್ತು ರಜನೀಕಾಂತ್ ಇಬ್ಬರು ಈ ಯುವತಿಯನ್ನು ಬುಕ್ ಮಾಡಿದ್ದರು. ತಡರಾತ್ರಿ ಮನೆಗೆ ಹಿಂದಿರುಗುವ ವೇಳೆ ಈ ಅಪಹರಣ ನಡೆದಿದೆ.

ಯುವತಿ ಮೊದಲೇ ತಾವು ಇರೋ ಸ್ಥಳದ ಮಾಹಿತಿಯನ್ನು ಅಪಹರಣಕಾರರಿಗೆ ನೀಡಿದ್ದಳು. ಮೂವರ ನಿರ್ಜನ ಪ್ರದೇಶದಲ್ಲಿದ್ದಾಗ ಬಂದ ಗ್ಯಾಂಗ್, ಜಗಳ ತೆಗೆದು ಇಬ್ಬರನ್ನು ಅಪಹರಣ ಮಾಡಿತ್ತು. ಮಂಜುನಾಥ್ ಮತ್ತು ರಜನೀಕಾಂತ್ ಮುಂದೆ ತಾನೂ ಸಹ ಅಪಹರಣಕ್ಕೆ ಒಳಗಾದಂತೆ ನಟಿಸಿದ್ದಳು.

ಎಲ್ಲವೂ ಅಂದುಕೊಂಡಂತೆ ಯುವತಿ ಮತ್ತು ಆಕೆಯ ಗ್ಯಾಂಗ್ ಇಬ್ಬರನ್ನು ಅಪಹರಿಸಿತ್ತು. ಆದರೆ ಕಾರ್ ಕೋಳಿ ಫಾರಂ ಗೇಟ್ ಬಳಿ ಬರುತ್ತಿದ್ದಂತೆ ಮಂಜುನಾಥ್ ತಪ್ಪಿಸಿಕೊಂಡಿದ್ದರು. ತಪ್ಪಿಸಿಕೊಂಡ ಬಳಿಕ ಮಂಜುನಾಥ್ ಕಂಟ್ರೋಲ್​ ರೂಮ್​ಗೆ ಕರೆ ಮಾಡಿ ಅಪಹರಣದ ವಿಷಯ ತಿಳಿಸಿದ್ದರು.

ಕಿಡ್ನಾಪ್ ಮಾಡಿ ಮಂಡ್ಯ, ಮೈಸೂರು ಮೂಲಕ ನಂಜನಗೂಡಿಗೆ ಆರೋಪಿಗಳು ತೆರಳಿದ್ದರು. ರಜನೀಕಾಂತ್ ಬಿಡುಗಡೆಗೆ ಐದು ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದರು. ಇದೀಗ ಎಲ್ಲಾ ಆರೋಪಿಗಳನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಬೇಗೂರು ಠಾಣೆ ಪೊಲೀಸರು ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿಗಳು ಮೈಸೂರು ಸಮೀಪದ ನಂಜನಗೂಡಿನಲ್ಲಿ ಇದ್ದಾರೆ ಎಂಬ ಮಾಹಿತಿ ಕಲೆಹಾಕಿದ ತಂಡ ಅಲ್ಲಿಗೆ ಧಾವಿಸಿ ಆರೋಪಿಯನ್ನು ಬಂಧಿಸಿ ರಜನೀಕಾಂತ್ ಅವರನ್ನು ರಕ್ಷಿಸಿದ್ದಾರೆ. ಅವರನ್ನು ಅಪಹರಿಸಿದ ತಂಡದಲ್ಲಿ ಕಾಲ್ ಗರ್ಲ್ ಕೂಡ ಭಾಗಿಯಾಗಿದ್ದಳು ಮತ್ತು ಅವರು ಹೋಟೆಲ್‌ನಿಂದ ಹೊರಬಂದಾಗ ತನ್ನ ಸಹಚರರೊಂದಿಗೆ ಲೈವ್ ಲೊಕೇಶನ್ ಹಂಚಿಕೊಂಡಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here