Home Uncategorized ಬೆಂಗಳೂರು: ರಮೇಶ್ ಜಾರಕಿಹೊಳಿ ನಿವಾಸದ ಎದುರು ಡಿಕೆಶಿ ಬೆಂಬಲಿಗರ ಪ್ರತಿಭಟನೆ, ಬಂಧನ

ಬೆಂಗಳೂರು: ರಮೇಶ್ ಜಾರಕಿಹೊಳಿ ನಿವಾಸದ ಎದುರು ಡಿಕೆಶಿ ಬೆಂಬಲಿಗರ ಪ್ರತಿಭಟನೆ, ಬಂಧನ

22
0
Advertisement
bengaluru

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧದ ಹೇಳಿಕೆ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಇಂದು ಬೆಂಗಳೂರಿನಲ್ಲಿರುವ ಶಾಸಕ ರಮೇಶ್ ಜಾರಕಿಹೊಳಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧದ ಹೇಳಿಕೆ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಇಂದು ಬೆಂಗಳೂರಿನಲ್ಲಿರುವ ಶಾಸಕ ರಮೇಶ್ ಜಾರಕಿಹೊಳಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಾಕಾರರು, ರಮೇಶ್ ಜಾರಕಿಹೊಳಿ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ನಂತರ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.#WATCH | Supporters of Karnataka Congress president DK Shivakumar protested against BJP MLA Ramesh Jarkiholi near the latter’s residence in Bengaluru over his statement against Shivakumar. They were later detained by the Police. pic.twitter.com/LPzb26xjbt— ANI (@ANI) January 31, 2023

ಇದನ್ನೂ ಓದಿ: ನನ್ನ-ಡಿಕೆಶಿ ಸಂಬಂಧ ಹಾಳಾಗಲು ಗ್ರಾಮೀಣ ಶಾಸಕಿ ಕಾರಣ; ‘ವಿಷಕನ್ಯೆ’ಯಿಂದ ಕಾಂಗ್ರೆಸ್ ಸರ್ವನಾಶ; ಇದೇ ನನ್ನ ಕೊನೆಯ ಚುನಾವಣೆ: ರಮೇಶ್ ಜಾರಕಿಹೊಳಿ
 

ಬೆಳಗಾವಿಯಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದ ರಮೇಶ್ ಜಾರಕಿಹೊಳಿ,  ನನ್ನ ವಿರುದ್ಧ  ಸಿಡಿ ಷಡ್ಯಂತ್ರ ನಡೆಸಿದ ಡಿಕೆಶಿಯನ್ನು ಜೈಲಿಗೆ ಕಳುಹಿಸಬೇಕು. ಸಿಬಿಐ ಸಂಪೂರ್ಣವಾಗಿ ವಿಚಾರಣೆ ನಡೆಸಬೇಕು , ನನ್ನ ಬಳಿ ಹಲವು ದಾಖಲೆಗಳಿವೆ, ತನಿಖೆಗಾಗಿ ಸಿಬಿಐಗೆ ನೀಡುತ್ತೇನೆ ಎಂದಿದ್ದರು.

bengaluru bengaluru

ನನ್ನ ಬಳಿ 120 ಸಾಕ್ಷ್ಯಗಳಿವೆ. ಯಾವುದನ್ನೂ ಬಿಡುಗಡೆ ಮಾಡಲ್ಲ. ಡಿ.ಕೆ ಶಿವಕುಮಾರ್ ಸಿಡಿ ತಯಾರಿಸಿ ಬ್ಯ್ಲಾಕ್​ ಮೇಲ್​ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಯವಿಟ್ಟು ಇದನ್ನು ಸಿಬಿಐ ತನಿಖೆ ಕೊಡಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಒತ್ತಾಯಿಸಿದ್ದರು. 
 


bengaluru

LEAVE A REPLY

Please enter your comment!
Please enter your name here