Home Uncategorized ಬೆಂಗಳೂರು: ರೈಲಿಗೆ ತಲೆಕೊಟ್ಟು ಆದಾಯ ತೆರಿಗೆ ಇಲಾಖೆ ಇನ್ಸ್ ಪೆಕ್ಟರ್ ಆತ್ಮಹತ್ಯೆ

ಬೆಂಗಳೂರು: ರೈಲಿಗೆ ತಲೆಕೊಟ್ಟು ಆದಾಯ ತೆರಿಗೆ ಇಲಾಖೆ ಇನ್ಸ್ ಪೆಕ್ಟರ್ ಆತ್ಮಹತ್ಯೆ

11
0
bengaluru

ಆದಾಯ ತೆರಿಗೆ ಇಲಾಖೆಯ ಇನ್ಸ್ ಪೆಕ್ಟರ್ ಓರ್ವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಇನ್ಸ್ ಪೆಕ್ಟರ್ ಓರ್ವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ತೆರಿಗೆ ಇಲಾಖೆ ಇನ್ಸ್ ಪೆಕ್ಟರ್ ದೇವೇಂದ್ರ ದುಬೆ ಆತ್ಮಹತ್ಯೆ ಮಾಡಿಕೊಂಡವರು. ಕಳೆದ 10 ದಿನಗಳ ಹಿಂದೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಉತ್ತರಪ್ರದೇಶ ಮೂಲದ ದೇವೆಂದ್ರ ದುಬೆ ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಾವಿಗೂ ಮುನ್ನ ದೇವೇಂದ್ರ ದುಬೆ ಉತ್ತರಪ್ರದೇಶದಲ್ಲಿರುವ ತನ್ನ ತಂದೆ-ತಾಯಿ ಜೊತೆ ಫೋನ್ ನಲ್ಲಿ ಮಾತನಾಡಿದ್ದಾರೆ. ಪತ್ನಿ ಆರತಿ ಮಾಳವಿ ಅವರಿಗೆ ಕರೆ ಮಾಡಿ ಸಂಜೆ ಮನೆಗೆ ಬರುವುದಾಗಿಯೂ ಹೇಳಿದ್ದಾರೆ.

ಆದರೆ ಸಂಜೆಯಾದರೂ ಮನೆಗೆ ಬಂದಿಲ್ಲ, ಪತ್ನಿ ಮೊಬೈಲ್ ಗೆ ಇನ್ಶುರೆನ್ಸ್ ಪಾಲಿಸಿ ಹಾಗೂ ಡೆತ್ ನೋಟ್ ವಾಟ್ಸಪ್ ಮೂಲಕ ಸೆಂಡ್ ಮಾಡಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಎಂದು ವಾಟ್ಸಪ್ ಮಾಡಿ ಸಾವಿಗೆ ಶರಣಾಗಿದ್ದಾರೆ.

bengaluru

ಪತಿ ನಾಪತ್ತೆ ಬಗ್ಗೆ ಆರತಿ ಮಾಳವಿಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.  ದೇವೇಂದ್ರದುಬೆ ಅವರ ಮೃತದೇಹ ಶೇಷಾದ್ರಿಪುರಂ ಬಿಡಿಎ ಬಳಿಯ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ.

bengaluru

LEAVE A REPLY

Please enter your comment!
Please enter your name here